ಕೊರೊನಾ ಹುಟ್ಟಿದ ದೇಶದ ಈ ನಗರದಲ್ಲಿ ಲಾಕ್​ಡೌನ್​​ನಿಂದ ಬಸವಳಿದು ಹೋದ ಜನರು; ಆಹಾರ ಸಂರಕ್ಷಣೆಗಾಗಿ ಪರದಾಟ

ಕೊರೊನಾ ಹುಟ್ಟಿದ ದೇಶದ ಈ ನಗರದಲ್ಲಿ ಲಾಕ್​ಡೌನ್​​ನಿಂದ ಬಸವಳಿದು ಹೋದ ಜನರು; ಆಹಾರ ಸಂರಕ್ಷಣೆಗಾಗಿ ಪರದಾಟ
ಪ್ರಾತಿನಿಧಿಕ ಚಿತ್ರ

ಜನರಿಗೆ ಬರೀ ಆಹಾರ, ಅಗತ್ಯವಸ್ತುಗಳ ಸಮಸ್ಯೆ ಮಾತ್ರವಲ್ಲ, ಮನೆಯಲ್ಲೇ ಇದ್ದು ಮಾನಸಿಕವಾಗಿಯೂ ಕುಗ್ಗಿ ಹೋಗುತ್ತಿದ್ದಾರೆ. ಕಠಿಣ ಲಾಕ್​ಡೌನ್​ ನಿಯಮ ಹೇರಿ ಈಗಾಗಲೇ 2 ವಾರಗಳ ಮೇಲಾಯಿತು.

TV9kannada Web Team

| Edited By: Lakshmi Hegde

Apr 06, 2022 | 12:18 PM

ಚೆನ್ನೈನ ಹಣಕಾಸು ಕೇಂದ್ರ ಎಂದೇ ಖ್ಯಾತವಾಗಿರುವ ಶಾಂಘೈನಲ್ಲಿ ಕೊವಿಡ್​ 19 ಹೊಡೆತಕ್ಕೆ ಜನ ನಲುಗುತ್ತಿದ್ದಾರೆ. ಇಲ್ಲಿ ಕಠಿಣ ಲಾಕ್​ಡೌನ್​ ವಿಧಿಸಲಾಗಿದ್ದು, ಸೂಪರ್​ ಮಾರ್ಕೆಟ್​ಗಳು, ಮಾಲ್​ಗಳು ಬಂದ್​ ಆಗಿವೆ. ಮನೆಗೆ ಫುಡ್​, ಅಗತ್ಯ ವಸ್ತುಗಳ ಡಿಲೆವರಿ ಕೊಡುವ ವ್ಯವಸ್ಥೆಯನ್ನೂ ನಿರ್ಬಂಧಿಸಲಾಗಿದೆ. ಅಗತ್ಯ ವಸ್ತುಗಳು, ಆಹಾರ ಪದಾರ್ಥಗಳು ಸರಿಯಾಗಿ ಸಿಗದೆ ಕಷ್ಟಪಡುತ್ತಿರುವ ಅವರು ಆಹಾರ ಸಂರಕ್ಷಣೆಯನ್ನೂ ಮಾಡಿಕೊಳ್ಳಲಾಗದೆ ಪರದಾಡುತ್ತಿದ್ದಾರೆ. ಒಟ್ಟಾರೆ ಇಲ್ಲಿನ ಸುಮಾರು 26 ಮಿಲಿಯನ್​ ಜನರ ಜೀವನ ಅಸ್ತವ್ಯಸ್ತಗೊಂಡಿದೆ.  ಶಾಂಘೈನಲ್ಲಿ ಕೊರೊನಾ ಮಿತಿಮೀರಿದ ಹಿನ್ನೆಲೆಯಲ್ಲಿ ಸ್ಥಳೀಯ ಸರ್ಕಾರ ನಿಯಂತ್ರಣ ಕ್ರಮಗಳನ್ನು ಬಿಗಿ ಗೊಳಿಸಿದೆ. ಅಷ್ಟೇ ಅಲ್ಲ, ನಗರದಾದ್ಯಂತ ಕೊವಿಡ್​ 19 ತಪಾಸಣಾ ಅಭಿಯಾನ ನಡೆಯುತ್ತಿದೆ. ಅದು ಮುಗಿಯುವವರೆಗೂ ಲಾಕ್​ಡೌನ್​ ನಿಯಮಗಳನ್ನು ತೆಗೆದು ಹಾಕುವುದಿಲ್ಲ ಎಂದು ಇಂದು ಅಲ್ಲಿನ ಸರ್ಕಾರ ಪ್ರಕಟಣೆಯನ್ನೂ ಹೊರಡಿಸಿದೆ. 

ಜನರಿಗೆ ಬರೀ ಆಹಾರ, ಅಗತ್ಯವಸ್ತುಗಳ ಸಮಸ್ಯೆ ಮಾತ್ರವಲ್ಲ, ಮನೆಯಲ್ಲೇ ಇದ್ದು ಮಾನಸಿಕವಾಗಿಯೂ ಕುಗ್ಗಿ ಹೋಗುತ್ತಿದ್ದಾರೆ. ಕಠಿಣ ಲಾಕ್​ಡೌನ್​ ನಿಯಮ ಹೇರಿ ಈಗಾಗಲೇ 2 ವಾರಗಳ ಮೇಲಾಯಿತು. ಇದೆಲ್ಲದರಿಂದ ಬಸವಳಿದು ಹೋಗುತ್ತಿದ್ದಾರೆ. ಸ್ಥಳೀಯ ಆಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ರೋಗಲಕ್ಷಣಗಳೇ ಇಲ್ಲದೆ ಕೊವಿಡ್ 19 ಪಾಸಿಟಿವ್​ ಆಗಿರುವ ರೋಗಿಗಳನ್ನು ಮನೆಯಲ್ಲೇ ಕ್ವಾರಂಟೈನ್​ ಮಾಡಬೇಕು ಎಂಬ ಆಗ್ರಹ ಹೆಚ್ಚುತ್ತಿದೆ. ಕೊರೊನಾ ಕಾಣಿಸಿಕೊಂಡಿರುವ ಮಕ್ಕಳನ್ನು ಅವರ ಪಾಲಕರಿಂದ ಪ್ರತ್ಯೇಕ ಮಾಡುತ್ತಿರುವ ಸರ್ಕಾರದ ಕ್ರಮಕ್ಕೆ ತೀವ್ರ ವಿರೋಧವೂ ವ್ಯಕ್ತವಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಶಾಂಘೈನಲ್ಲಿ ಮಂಗಳವಾರ 16,766 ಹೊಸ ಕೊರೊನಾ ಕೇಸ್​ಗಳು ದಾಖಲಾಗಿವೆ. ಹೀಗೆ ಪಾಸಿಟಿವ್​ ಬಂದವರಲ್ಲಿ ಯಾರಿಗೂ ಕೊರೊನಾದ ಲಕ್ಷಣಗಳಿಲ್ಲ. ಸೋಮವಾರ 13,086 ಕೇಸ್​ಗಳು ದಾಖಲಾಗಿದ್ದವು. ಮಂಗಳವಾರ 16ಸಾವಿರ ದಾಟಿವೆ. ಹಾಗೇ, ಲಕ್ಷಣಗಳುಳ್ಳ ಕೇಸ್​ಗಳು ಸೋಮವಾರ 268 ದಾಖಲಾಗಿದ್ದರೆ, ಮಂಗಳವಾರ 311ಕ್ಕೆ ಏರಿಕೆಯಾಗಿದೆ. ಇಷ್ಟೆಲ್ಲದ ಮಧ್ಯೆ ಈಗ ಹೇರಿರುವ ನಿರ್ಬಂಧಗಳು ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತಿವೆ. ಅದರಲ್ಲೂ ಸಣ್ಣ ಪ್ರಮಾಣದ ಉದ್ಯಮಗಳಿಗೆ ತೀವ್ರ ಹೊಡೆತ ಕೊಡುತ್ತಿವೆ ಎಂದೂ ಹೇಳಲಾಗಿದೆ.

ಇದನ್ನೂ ಓದಿ: ಉರ್ದು ಮಾತಾಡಲು ನಿರಾಕರಿಸಿದ್ದಕ್ಕೆ ಕೊಲೆ ಮಾಡಲಾಗಿದೆ: ಮತೀಯ ತಿರುವು ಪಡೆದುಕೊಂಡ ಚಂದ್ರು ಹತ್ಯೆ ಪ್ರಕರಣ

Follow us on

Related Stories

Most Read Stories

Click on your DTH Provider to Add TV9 Kannada