ರೈಫಲ್ ಶೂಟರ್​​ಗೆ ರೈಫಲ್ ಖರೀದಿಸಲು ಹಣ ನೀಡುವ ಭರವಸೆ ನೀಡಿದ ಡಿ.ಕೆ ಶಿವಕುಮಾರ್​

| Updated By: ವಿವೇಕ ಬಿರಾದಾರ

Updated on: Jul 04, 2022 | 8:54 PM

ರಾಜ್ಯ ಹಾಗೂ ರಾಷ್ಟ್ರದ ಮಟ್ಟದ ರೈಫಲ್ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗೆದ್ದಿರುವ ರಮೇಶ್ ಬಾಬು ಅವರಿಗೆ ರೈಫಲ್ ಖರೀದಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ 5 ಲಕ್ಷದಷ್ಟು ಹಣ ನೀಡುವ ಭರವಸೆ ನೀಡಿದ್ದಾರೆ.

ರೈಫಲ್ ಶೂಟರ್​​ಗೆ ರೈಫಲ್ ಖರೀದಿಸಲು ಹಣ ನೀಡುವ ಭರವಸೆ ನೀಡಿದ ಡಿ.ಕೆ ಶಿವಕುಮಾರ್​
ಡಿಕೆ ಶಿವಕುಮಾರ್​ ಅವರನ್ನು ಭೇಟಿಯಾದ ರಮೇಶ್​​ ಬಾಬು
Follow us on

ಚಾಮರಾಜನಗರ: ರಾಜ್ಯ (State) ಹಾಗೂ ರಾಷ್ಟ್ರದ (National) ಮಟ್ಟದ ರೈಫಲ್ (Rifle) ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗೆದ್ದಿರುವ ರಮೇಶ್ ಬಾಬು ಅವರಿಗೆ ರೈಫಲ್ ಖರೀದಿಸಲು ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) 5 ಲಕ್ಷದಷ್ಟು ಹಣ ನೀಡುವ ಭರವಸೆ ನೀಡಿದ್ದಾರೆ. ಚಾಮರಾಜನಗರ (Chamarajanagar) ಪಟ್ಟಣ ನಿವಾಸಿಯಾಗಿರುವ ರಮೇಶ್ ಬಾಬು ಕಂಪ್ಯೂಟರ್ ಹಾರ್ಡ್‌ವೇರ್ ಅಂಗಡಿ ಇಟ್ಟುಕೊಂಡಿದ್ದರು. ಇವರ ತಾಯಿ ಗೀತಾ ಲಕ್ಷ್ಮಿ ಚಾಮರಾಜನಗರ ಅಕ್ಸಿಜನ್ ದುರಂತದಲ್ಲಿ ಸಾವನಪ್ಪಿದ್ದರು.

ಇದನ್ನು ಓದಿ: ಸರ್ಕಾರಿ ಜಮೀನುಗಳಲ್ಲಿ ಸಾಗುವಳಿ ಮಾಡುತ್ತಿರುವ ಕಾಫಿ, ಏಲಕ್ಕಿ, ಮೆಣಸು ಬೆಳಗಾರರಿಗೆ ಗುತ್ತಿಗೆಗೆ ಜಮೀನು ನೀಡಲು ರಾಜ್ಯ ಸರ್ಕಾರ ನಿರ್ಧಾರ

ಈ ವೇಳೆ ರಮೇಶ್ ಬಾಬು ಅವರ ಮನೆಗೆ ಡಿ.ಕೆ.ಶಿವಕುಮಾರ್ ಭೇಟಿ ನೀಡಿದ್ದರು. ಆಗ ರಮೇಶ್ ಬಾಬು ಡಿಕೆ ಶಿವಕುಮಾರ ಅವರ ಬಳಿ ರೈಫಲ್ ಕೊಂಡುಕೊಳ್ಳಲು ಸಹಾಯ ಮಾಡುವಂತೆ ಮನವಿ ಮಾಡಿದ್ದರು. ಈ ವೇಳೆ ಡಿಕೆ ಶಿವಕುಮಾರ ಬೆಂಗಳೂರಿಗೆ ಬಂದು ಭೇಟಿಯಾಗಲು ಹೇಳಿದ್ದರು. ಈಗ ಹಣ ನೀಡಲು ಭರವಸೆ ನೀಡಿದ್ದಾರೆ. ರಮೇಶ್ ಸ್ಪರ್ಧೆ ಸಮಯದಲ್ಲಿ ಬೆಂಗಳೂರಿನಲ್ಲಿ ಅಭ್ಯಾಸ ನಡೆಸಲಿದ್ದಾರೆ.