ಬರದ ಎಫೆಕ್ಟ್ (drought) ಯಾವ ಮಟ್ಟಕ್ಕೆ ಅನ್ನದಾತನನ್ನ ಕಂಗಾಲು (distressed farmers) ಮಾಡಿದೆಯಂದ್ರೆ ತಮ್ಮ ಜಾನುವಾರುಗಳಿಗೆ ಮೇವುಣಿಸಲಾಗದೆ ಕಸಾಯಿಖಾನೆಗೆ ತಮ್ಮ ದನಕರಗಳನ್ನ ಮಾರಾಟ ಮಾಡುವಂತ ಪರಿಸ್ಥಿತಿ ಎದುರಾಗಿದೆ ಈ ಕುರಿತಾದ ಒಂದು ರಿಪೋರ್ಟ್ ನಿಮ್ಮ ಮುಂದೆ. ಕೈಯಲ್ಲಿ ಕೋಲು.. ಪಂಚೆ ತೊಟ್ಟು ರಾಸುಗಳನ್ನ ತೆಗೆದು ಕೊಂಡು ಹೋಗುತ್ತಿರುವ ವ್ಯಕ್ತಿಗಳು. ಈ ದೃಶ್ಯ ನೋಡಿದ್ರೆ, ಗುರುವಾರದ ತೆರಕಣಾಂಬಿ ಸಂತೆಯಲ್ಲಿ ಜಾನುವಾರುಗಳನ್ನ ಕೊಂಡು ರೈತ ತೆಗೆದುಕೊಂಡು ಹೋಗುತ್ತಿದ್ದಾನೆ ಎಂಬ ಕಲ್ಪನೆ ಮೂಡುತ್ತೆ. ಆದ್ರೆ ಅಸಲಿಯತ್ತೆ ಬೇರೆ. ಮಳೆ ಕೈ ಕೊಟ್ಟ ಹಿನ್ನಲೆ ಚಾಮರಾಜನಗರದಲ್ಲಿ (Chamarajanagar) ಬರದ ಛಾಯೆ ಎಷ್ಟರ ಮಟ್ಟಿಗೆ ಎಫೆಕ್ಟ್ ನೀಡಿದೆ ಎಂದ್ರೆ ರಾಸುಗಳಿಗೆ ಮೇವನ್ನ ಸಹ ಒದಗಿಸಲಾಗದೆ ರೈತರು ಜಾನುವಾರು ಸಂತೆಯಲ್ಲಿ ಸಿಕ್ಕ ಸಿಕ್ಕ ಮೊತ್ತಕ್ಕೆ ಜಾನುವಾರುಗಳನ್ನ ಮಾರಾಟ ಮಾಡುತ್ತಿದ್ದಾನೆ.
ಇದನ್ನೆ ಬಂಡವಾಳವಾಗಿಸಿಕೊಂಡ ಕಸಾಯಿಖಾನೆ ದಂಧೆಕೋರರು ಈ ಅವಕಾಶವನ್ನ ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ತೆರಕಣಾಂಬಿ ಸಂತೆಯಿಂದ ಜಾನುವಾರುಗಳನ್ನ ಕೊಂಡು ರೈತರ ವೇಷದಲ್ಲಿ ತಮಿಳುನಾಡಿನ ಅರಳವಾಡಿಗೆ ಕೊಂಡೊಯ್ಯಲಾಗುತ್ತಿದೆ. ಬಳಿಕ ಅಲ್ಲಿಂದ ಕಂಟೈನರ್ ಮೂಲಕ ನೆರೆಯ ಕೇರಳ ಹಾಗೂ ತಮಿಳುನಾಡಿಗೆ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದೆ.
ಇನ್ನು ತೆರಕಣಾಂಬಿ ಸಂತೆಯಲ್ಲಿ ಎಲ್ಲ ನಿಯಮಗಳನ್ನ ಗಾಳಿಗೆ ತೂರಲಾಗಿದೆ. ದನಕರವನ್ನ ಮಾರಾಟ ಮಾಡಿದಾಗ ಸ್ಥಳೀಯ ಪಶು ವೈದ್ಯ ಅದನ್ನ ಸರ್ಟಿಫೈಡ್ ಮಾಡ್ಬೇಕು. ಆದ್ರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಮಾರಾಟ ಮಾಡಲಾಗುತ್ತಿದೆ. ಇನ್ನು ತೆರಕಣಾಂಬಿ ಯಿಂದ ತಮಿಳುನಾಡು ಅರಳವಾಡಿಗೆ 12 ಕಿಲೋ ಮೀಟರ್ ಇದ್ದು ರೈತರ ವೇಷ ತೊಟ್ಟು ದನಕರಗಳನ್ನ ಕಾಲ್ನಡಿಗೆಯ ಮೂಲಕವೇ ಗಡಿಯನ್ನ ದಾಟಿಸಲಾಗುತ್ತಿದೆ. ತಮಿಳುನಾಡಿನಿಂದ ದೊಡ್ಡ ಕಂಟೈನರ್ ಮೂಲಕ ರಾಸುಗಳನ್ನ ಕೇರಳ ಹಾಗೂ ತಮಿಳುನಾಡಿನ ಕಸಾಯಿಖಾನೆಗೆ ಸಾಗಾಟ ಮಾಡಲಾಗುತ್ತಿದೆ.
ಕಣ್ಮುಂದೆಯೆ ಕಸಾಯಿಖಾನೆಗೆ ತಮ್ಮ ಜಾನುವಾರುಗಳನ್ನ ಮನಸ್ಸಿಲ್ಲದ ಮನಸ್ಸಿನಲ್ಲಿ ರೈತರು ತಮ್ಮ ರಾಸುಗಳನ್ನ ಮಾರಾಟ ಮಾಡುವ ಅನಿವಾರ್ಯ ಪರಿಸ್ಥಿತಿ ಈಗ ಎದುರಾಗಿದೆ. ಬರದ ಎಫೆಕ್ಟ್ ಅನ್ನದಾತನ ಪಾಲಿಗೆ ಮುಳುವಾಗಿರುವುದಂತು ಸುಳ್ಳಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:15 am, Fri, 13 October 23