AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬರದ ಎಫೆಕ್ಟ್​; ದನಕರುಗಳಿಗೆ ಮೇವು ಒದಗಿಸಲಾಗದೆ ಕಸಾಯಿಖಾನೆಗೆ ಹಸುಗಳ ಮಾರಾಟ

ರಾಜ್ಯಾದ್ಯಂತ ಭೀಕರ ಬರಗಾಲ ಬಂದಿದ್ದು, ಬರದ ಎಫೆಕ್ಟ್ ಯಾವ ಮಟ್ಟಕ್ಕೆ ಅನ್ನದಾತನನ್ನು ಕಂಗಾಲು ಮಾಡಿದೆಯೆಂದರೆ, ತಮ್ಮ ಜಾನುವಾರುಗಳಿಗೆ ಮೇವುಣಿಸಲಾಗದೆ ಕಸಾಯಿಖಾನೆಗೆ ತಮ್ಮ ದನಕರಗಳನ್ನು ಮಾರಾಟ ಮಾಡುವಂತ ಪರಿಸ್ಥಿತಿ ಎದುರಾಗಿದೆ. 

ಬರದ ಎಫೆಕ್ಟ್​; ದನಕರುಗಳಿಗೆ ಮೇವು ಒದಗಿಸಲಾಗದೆ ಕಸಾಯಿಖಾನೆಗೆ ಹಸುಗಳ ಮಾರಾಟ
ಚಾಮರಾಜನಗರ
ಸೂರಜ್ ಪ್ರಸಾದ್ ಎಸ್.ಎನ್
| Edited By: |

Updated on: Oct 12, 2023 | 10:13 PM

Share

ಚಾಮರಾಜನಗರ, ಅ.12: ಜಿಲ್ಲೆಯಲ್ಲಿ ಬರದ ಛಾಯೆ ಎಷ್ಟರ ಮಟ್ಟಿಗೆ ಎಫೆಕ್ಟ್ ನೀಡಿದೆ ಅಂದರೆ, ಹಸು(Cow)ಗಳಿಗೆ ಮೇವನ್ನು ಸಹ ಒದಗಿಸಲಾಗದೆ ರೈತರು ಜಾನುವಾರುಗಳನ್ನು ಸಂತೆಯಲ್ಲಿ ಸಿಕ್ಕ ಸಿಕ್ಕ ಮೊತ್ತಕ್ಕೆ ಮಾರಾಟ ಮಾಡುತ್ತಿದ್ದಾರೆ. ಹೌದು, ಇದನ್ನೇ ಬಂಡವಾಳವಾಗಿಸಿಕೊಂಡ ಕಸಾಯಿಖಾನೆ ದಂಧೆಕೋರರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.  ರೈತರ ವೇಷದಲ್ಲಿ ಜಿಲ್ಲೆಯ ತೆರಕಣಾಂಬಿ(Terakanambi)  ಸಂತೆಯಿಂದ ಜಾನುವಾರುಗಳನ್ನು ಕೊಂಡು ತಮಿಳುನಾಡಿನ ಅರಳವಾಡಿಗೆ ಕೊಂಡೊಯ್ಯಲಾಗುತ್ತಿದೆ. ಬಳಿಕ ಅಲ್ಲಿಂದ ಕಂಟೈನರ್ ಮೂಲಕ ನೆರೆಯ ಕೇರಳ ಹಾಗೂ ತಮಿಳುನಾಡಿಗೆ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದೆ.

ಇನ್ನು ತೆರಕಣಾಂಬಿ ಸಂತೆಯಲ್ಲಿ ಎಲ್ಲ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ದನಕರುವನ್ನು ಮಾರಾಟ ಮಾಡಿದಾಗ ಸ್ಥಳೀಯ ಪಶು ವೈದ್ಯರಿಂದ ಅದನ್ನು ಸರ್ಟಿಫೈಡ್ ಮಾಡಬೇಕು. ಆದ್ರೆ, ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಮಾರಾಟ ಮಾಡಲಾಗುತ್ತಿದೆ. ಇನ್ನು ತೆರಕಣಾಂಬಿಯಿಂದ ತಮಿಳುನಾಡು ಅರಳವಾಡಿಗೆ 12ಕಿಲೋ ಮೀಟರ್ ಇದ್ದು, ರೈತರ ವೇಷ ತೊಟ್ಟು ದನಕರಗಳನ್ನು ಕಾಲ್ನಡಿಗೆಯ ಮೂಲಕವೇ ಗಡಿಯನ್ನ ದಾಟಿಸಲಾಗುತ್ತಿದೆ. ತಮಿಳುನಾಡಿನಿಂದ ದೊಡ್ಡ ಕಂಟೈನರ್ ಮೂಲಕ ಹಸುಗಳನ್ನ ಕೇರಳ ಹಾಗೂ ತಮಿಳುನಾಡಿನ ಕಸಾಯಿಖಾನೆಗೆ ಸಾಗಾಟ ಮಾಡಲಾಗುತ್ತಿದೆ.

ಇದನ್ನೂ ಓದಿ:ಅಸ್ಸಾಂನಲ್ಲಿ ಇನ್ಮುಂದೆ ಹಿಂದು ಧಾರ್ಮಿಕ ಪ್ರದೇಶಗಳ 5 ಕಿ.ಮೀ.ವ್ಯಾಪ್ತಿಯಲ್ಲಿ ಗೋಮಾಂಸ ಮಾರಾಟ, ಖರೀದಿ ಮಾಡುವಂತಿಲ್ಲ

ಕಣ್ಮುಂದೆಯೇ ಕಸಾಯಿಖಾನೆಗೆ ತಮ್ಮ ಜಾನುವಾರುಗಳನ್ನು ಮನಸ್ಸಿಲ್ಲದ ಮನಸ್ಸಿನಲ್ಲಿ ರೈತರು ಮಾರಾಟ ಮಾಡುವ ಅನಿವಾರ್ಯ ಪರಿಸ್ಥಿತಿ ಈಗ ಎದುರಾಗಿದೆ. ಹೌದು, ಬರದ ಹಿನ್ನಲೆ ಅವುಗಳಿಗೆ ಸರಿಯಾದ ಮೇವು ಸಿಗುತ್ತಿಲ್ಲ. ಹೀಗಿರುವಾಗ ಅವುಗಳಿಗೆ ಆಹಾರ ಎಲ್ಲಿಂದ ತರುವುದು ಎಂಬ ಚಿಂತೆಯಲ್ಲಿದ್ದ ರೈತ, ಇದೀಗ ಮಾರಾಟ ಮಾಡಲು ಮುಂದಾಗಿದ್ದಾನೆ. ಈ ಬರಗಾಲ ಅನ್ನದಾತನ ಪಾಲಿಗೆ ಮುಳುವಾಗಿರುವುದಂತು ಸುಳ್ಳಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ