ದಾವಣಗೆರೆ: ಹಿಂಸಾತ್ಮಕ ರೀತಿಯಲ್ಲಿ ಸಾಗಿಸಲಾಗುತ್ತಿದ್ದ ಹಸುಗಳ ರಕ್ಷಣೆ

ದಾವಣಗೆರೆಯಲ್ಲಿ ಹಿಂಸಾತ್ಮಕ ರೀತಿಯಲ್ಲಿ ಹಸುಗಳನ್ನು ಸಾಗಿಸುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಅವುಗಳನ್ನು ವಶಕ್ಕೆ ಪಡೆದಿದ್ದಾರೆ.

ದಾವಣಗೆರೆ: ಹಿಂಸಾತ್ಮಕ ರೀತಿಯಲ್ಲಿ ಸಾಗಿಸಲಾಗುತ್ತಿದ್ದ ಹಸುಗಳ ರಕ್ಷಣೆ
ಹಸುಗಳ ರಕ್ಷಣೆ
Follow us
ಆಯೇಷಾ ಬಾನು
|

Updated on: Apr 18, 2023 | 8:02 AM

ದಾವಣಗೆರೆ: ಇಲ್ಲಿನ ಬೇತೂರು ಹಳ್ಳದ ಹತ್ತಿರವಿರುವ ರಿಂಗ್ ರಸ್ತೆಯಲ್ಲಿ ಹಿಂಸಾತ್ಮಕ ರೀತಿಯಲ್ಲಿ ಹಸುಗಳನ್ನು ಸಾಗಿಸುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಅವುಗಳನ್ನು ವಶಕ್ಕೆ ಪಡೆದಿದ್ದಾರೆ. ಕಸಾಯಿ ಖಾನೆಗೆ ಹಸುಗಳನ್ನು ಸಾಗಿಸಲಾಗುತ್ತಿದೆ ಎಂಬ ದೂರನ್ನು ಆಧರಿಸಿ ದಾಳಿ ನಡೆಸಿದ ಪೊಲೀಸರು 15,000 ಮೌಲ್ಯದ ಒಂದು ಜರ್ಸಿ ಹಸು, 12,000 ಮೌಲ್ಯದ ಎಚ್ಎಫ್‌ ತಳಿಯ ಜರ್ಸಿ ಹಸು, 14 ,000 ಮೌಲ್ಯದ ಜವಾರಿ ಹಸು, 15,000 ಮೌಲ್ಯದ ಕಂದು ಬಣ್ಣದ ಜವಾರಿ ಜಾತಿಯ ಹಸು 8,000 ಮೌಲ್ಯದ ಹೋರಿಕರುಗಳನ್ನು ಆಹಾರ, ನೀರಿನ ವ್ಯವಸ್ಥೆ ಮಾಡದೇ ಹಿಂಸೆಯಾಗುವ ರೀತಿಯಲ್ಲಿ ಸಾಗಿಸುತ್ತಿದ್ದಾಗ ಪೊಲೀಸರು ಹಸುಗಳನ್ನು ವಶಕ್ಕೆ ಪಡೆದಿದ್ದಾರೆ. ಅಹ್ಮದ್‌ ನಗರದ ಚಾಲಕ ಸೈಯದ್ ವಿರುದ್ಧ ಆಜಾದ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಗಾಂಜಾ ಗುಂಗಿನಲ್ಲಿ ಮಹಿಳೆ ಫೋಟೋ ಯೂಟ್ಯೂಬ್​ಗೆ ಹಾಕಿ‌ದ ಕಿಲಾಡಿಗಳ ಬಂಧನ

ಇನ್ನು ಮತ್ತೊಂದೆಡೆ ಮಹಿಳೆಯರ ಭಾವಚಿತ್ರಗಳನ್ನು ತಿರುಚಿ ಯೂಟ್ಯೂಬ್‌ನಲ್ಲಿ ಹಾಕಿ ಅವರ ವೈಯಕ್ತಿಕ ಖ್ಯಾತಿಗೆ ಹಾನಿಯುಂಟು ಮಾಡಿ, ತೇಜೋವಧೆ ಮಾಡುತ್ತಿದ್ದ ಇಬ್ಬರನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಗೊರವನಗುಡ್ಡ ತಾಂಡಾದ ಸುರೇಶ ಲಂಬಾಣಿ ಹಾಗೂ ದೊಂಬರಹಳ್ಳಿ ತಾಂಡಾದ ಜಯಕುಮಾರ್ ಬಂಧಿತರು. ಏ.16ರಂದು ದಾವಣಗೆರೆ ತಾಲೂಕಿನ ಯರಗುಂಟೆ ಗ್ರಾಮದ ಬಳಿ ಈ ಇಬ್ಬರು ಅಕ್ರಮವಾಗಿ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ವೇಳೆ ಪೊಲೀಸರು ಬಂಧಿಸಿ ಮೊಬೈಲ್ ಜಪ್ತಿ ಮಾಡಿ ಪರಿಶೀಲಿಸಿದಾಗ ಈ ವಿಷಯ ಪತ್ತೆಯಾಗಿದೆ. ಇವರಿಬ್ಬರೂ ‘ಸೆಕೆಂಡ್ ಮ್ಯಾರೇಜ್ ಮ್ಯಾಟ್ರಿಮೋನಿ ಕನ್ನಡ’ ಚಾನಲ್‌ನಲ್ಲಿ ಹೆಚ್ಚಿನ ನೋಡುಗರನ್ನು (ವೀವರ್ಸ್‌) ಅನ್ನು ಗಳಿಸಿ ಹಣ ಸಂಪಾದನೆ ಉದ್ದೇಶದಿಂದ ಈ ಕೆಲಸ ಮಾಡುತ್ತಿದ್ದರು ಎಂದು ಗೊತ್ತಾಗಿದೆ.

ಇದನ್ನೂ ಓದಿ: ಆಡುತ್ತಿದ್ದಾಗ ಕಬ್ಬಿಣದ ಪೈಪ್​ ಒಳಗೆ ಸಿಲುಕಿದ ಒಂದೂವರೆ ವರ್ಷದ ಮಗುವಿನ ಕೈ!

ಡಿಸಿಆರ್‌ಬಿ ಡಿವೈಎಸ್ಪಿ ರೋಷನ್ ಜಮೀರ್ ಅವರ ಮಾರ್ಗದರ್ಶನದಲ್ಲಿ ಸಿಇಎನ್ ಠಾಣೆಯ ಪಿಐ ಮಂಜುನಾಥ್ ಬಿ ಹಾಗೂ ತಂಡ ದಾಳಿ ನಡೆಸಿ 5,500 ಮೌಲ್ಯದ 280 ಗ್ರಾಂ ಒಣ ಗಾಂಜಾವನ್ನು ವಶಪಡಿಸಿಕೊಂಡಿದೆ. ಆರೋಪಿಗಳ ಪತ್ತೆ ಕಾರ್ಯದಲ್ಲಿ ಸಿ.ಇ.ಎನ್ ಪೊಲೀಸ್ ಠಾಣೆಯ ಸಿಬ್ಬಂದಿ ಗೋವಿಂದರಾಜ್, ಲೋಹಿತ್, ಕೊಟ್ರೇಶ್, ಉಮೇಶ್, ಲಿಂಗರಾಜು ಭಾಗವಹಿಸಿದ್ದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್