ಚಾಮರಾಜನಗರದಲ್ಲಿ ಆನೆ, ಚಿಕ್ಕಮಗಳೂರಿನಲ್ಲಿ ಹುಲಿ ಹಾವಳಿ; ಆತಂಕದಲ್ಲಿ ಜನ

|

Updated on: May 16, 2023 | 12:09 PM

ಬಾಳೂರು ಗ್ರಾಮದಲ್ಲಿ ನಿರಂತರವಾಗಿ ಜಾನುವಾರುಗಳ ಮೇಲೆ ಹುಲಿ ದಾಳಿ ನಡೆಯುತ್ತಿದೆ. ಕಾಫಿ ತೋಟದಲ್ಲಿ ಹುಲಿ ಹೆಜ್ಜೆ ಗುರುತು ಪತ್ತೆಯಾಗಿದೆ.

ಚಾಮರಾಜನಗರದಲ್ಲಿ ಆನೆ, ಚಿಕ್ಕಮಗಳೂರಿನಲ್ಲಿ ಹುಲಿ ಹಾವಳಿ; ಆತಂಕದಲ್ಲಿ ಜನ
ಆನೆ ದಾಳಿಗೆ ಹಾನಿಯಾದ ಮರ, ಗಿಡಗಳು
Follow us on

ಚಿಕ್ಕಮಗಳೂರು: ಹಾಸನದ ಸಕಲೇಶಪುರ, ಆಲೂರು, ಬೇಲೂರು, ಅರಕಲಗೂಡು ತಾಲೂಕಿನಲ್ಲಿ ಕಾಡಾನೆಗಳಿಂದಾಗಿ ಪ್ರಾಣ ಹಾನಿ ಹಾಗೂ ಬೆಳೆ ನಷ್ಟ ಹೆಚ್ಚಾಗಿದ್ದು ಜನ ಹೈರಾಣಾಗಿದ್ದಾರೆ. ಇದರ ನಡುವೆ ಕೆಲವೆಡೆ ಹುಲಿ ಕಾಟವೂ ಹೆಚ್ಚಾಗಿದೆ. ಮೂಡಿಗೆರೆ ತಾಲೂಕಿನ ಬಾಳೂರು ಗ್ರಾಮದಲ್ಲಿ ಹುಲಿ ಹೆಜ್ಜೆ ಪತ್ತೆಯಾಗಿದೆ. ಹೊರಟ್ಟಿ, ಭಾರತಿಬೈಲು, ಮತ್ತಿಕಟ್ಟೆ ಗ್ರಾಮದಲ್ಲಿ ಹುಲಿ ಸಂಚಾರ ಮಾಡಿರುವ ಶಂಕೆ ವ್ಯಕ್ತವಾಗಿದ್ದು ಹುಲಿ ದಾಳಿಯ ಆತಂಕದಲ್ಲಿ ಗ್ರಾಮಸ್ಥರಿದ್ದಾರೆ. ಹಾಗೂ ಹುಲಿ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ.

ಬಾಳೂರು ಗ್ರಾಮದಲ್ಲಿ ನಿರಂತರವಾಗಿ ಜಾನುವಾರುಗಳ ಮೇಲೆ ಹುಲಿ ದಾಳಿ ನಡೆಯುತ್ತಿದೆ. ಕಾಫಿ ತೋಟದಲ್ಲಿ ಹುಲಿ ಹೆಜ್ಜೆ ಗುರುತು ಪತ್ತೆಯಾಗಿದೆ. ಹೀಗಾಗಿ ಹುಲಿ ದಾಳಿ ಆತಂಕದಲ್ಲಿ ಗ್ರಾಮಸ್ಥರು, ಕಾರ್ಮಿಕರು ಜೀವನ ನಡೆಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಚಾಮರಾಜನಗರದಲ್ಲಿ ಆನೆ ಹಾವಳಿ

ಇನ್ನು ಮತ್ತೊಂದೆಡೆ ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಕುರುಬರ ಹುಂಡಿ ಗ್ರಾಮದ ಬಳಿಯ ಜಮೀನುಗಳಿಗೆ ಕಾಡಾನೆಗಳು ಲಗ್ಗೆ ಇಟ್ಟಿವೆ. ತೆಂಗು, ಮಾವು ಸೇರಿದಂತೆ ಅಪಾರ ಮೌಲ್ಯದ ಬೆಳೆಗಳ ನಾಶ ಮಾಡಿದೆ. ಕಳೆದ ವಾರದಿಂದ ಜಮೀನುಗಳಿಗೆ ಕಾಡಾನೆಗಳು ಲಗ್ಗೆ ಇಡುತ್ತಿದ್ದು ದೂರು ನೀಡಿದರೂ ಅರಣ್ಯಾಧಿಕಾರಿಗಳು ಕ್ರಮಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಕಾಡಾನೆಗಳ ಹಾವಳಿ ತಡೆಗೆ ರೆಡಿಯೋ ಕಾಲರ್ ಅಳವಡಿಕೆ

ಹಾಸನದ ಸಕಲೇಶಪುರ, ಆಲೂರು, ಬೇಲೂರು, ಅರಕಲಗೂಡು ತಾಲೂಕಿನಲ್ಲಿ ಕಾಡಾನೆಗಳಿಂದಾಗಿ ಪ್ರಾಣ ಹಾನಿ ಹಾಗೂ ಬೆಳೆ ನಷ್ಟದಿಂದ ಜನರು ಹೈರಾಣಾಗಿದ್ದಾರೆ. ನಾಲ್ಕೈದು ಗುಂಪುಗಳಾಗಿ ಕಾಡಾನೆಗಳು ಸಂಚರಿಸುತ್ತಿದ್ದು, ಇತ್ತೀಚೆಗೆ ಜನನಿಬಿಡ ಪ್ರದೇಶಗಳಿಗೆ ಲಗ್ಗೆಯಿಡ್ತಿವೆ. ಕಳೆದೆರಡು ತಿಂಗಳಲ್ಲಿ ನಾಲ್ಕೈದು ಬಾರಿ ದಾಳಿ ನಡೆದಿದ್ದು ಕೂದಲೆಳೆ ಅಂತರದಲ್ಲಿ ಕೆಲವರು ಪಾರಾಗಿದ್ದಾರೆ. ಹೀಗಾಗಿ ಅರಣ್ಯ ಇಲಾಖೆ ಸಾಕಾನೆಗಳಾದ ಅಭಿಮನ್ಯು, ಮಹೇಂದ್ರ, ದುಬಾರೆ ಆನೆ ಶಿಬಿರದಿಂದ ಅಜ್ಜಯ್ಯ, ಪ್ರಶಾಂತ ಮತ್ತು ವಿಕ್ರಮ ಆನೆಯನ್ನ ಕರೆತಂದು ಕಾಡಾನೆಗಳ ಗುಂಪಿನ ನಾಯಕಿ ಹೆಣ್ಣಾನೆಗೆ ರೇಡಿಯೋ ಕಾಲರ್​ ಅವಳಡಿಸುತ್ತಿದ್ದಾರೆ.

ರೇಡಿಯೋ ಕಾಲರ್ ಅಳವಡಿಕೆಯಿಂದ ಆನೆಗಳ ಗುಂಪಿನ ಚಟುವಟಿಕೆ ಅರಿತು, ಅವುಗಳ ಸಂಚಾರದ ಬಗ್ಗೆ ಮೊದಲೇ ಜನರಿಗೆ ಮಾಹಿತಿ ನೀಡಿ ಜೀವಹಾನಿ ತಡೆಯಬಹುದು. ಈಗಾಗಲೇ ನಿಷ್ಕ್ರಿಯಗೊಂಡಿದ್ದ ರೇಡಿಯೋ ಕಾಲರ್ ಬದಲಾಯಿಸಿ ಹೊಸ ರೇಡಿಯೋ ಕಾಲರ್ ಅವಳಡಿಕೆ ಮಾಡಿ ಮರಳಿ ಕಾಡಿಗೆ ಬಿಡಲಾಗ್ತಿದೆ. ಸದ್ಯ 35ವರ್ಷದ ಓಲ್ಡ್ ಬೆಲ್ಟ್ ಹೆಸರಿನ ಹೆಣ್ಣಾನೆಗೆ ರೇಡಿಯೋ ಕಾಲರ್ ಬದಲಿಸಲಾಗಿದೆ. ಭುವನೇಶ್ವರಿ, ಕಾಂತಿ ಎಂಬ ಇನ್ನೆರಡು ಆನೆಗಳಿಗೂ ರೇಡಿಯೋ ಕಾಲರ್ ಅಳವಡಿಸಲಾಗುತ್ತದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ