ಪೊಲೀಸ್ ಅಧಿಕಾರಿ ಹುದ್ದೆಗೆ ಗುಡ್‌ ಬೈ ಹೇಳಿ ರಾಜಕೀಯಕ್ಕೆ ಧುಮುಕಿದ ಪುಟ್ಟಸ್ವಾಮಿಗೆ ಸಮಾವೇಶದಲ್ಲೇ ಮಾಜಿ ಪತ್ನಿಯಿಂದ ನಿಂದನೆ

ಪೊಲೀಸ್ ಅಧಿಕಾರಿ ಹುದ್ದೆಗೆ ಗುಡ್‌ ಬೈ ಹೇಳಿ ರಾಜಕೀಯಕ್ಕೆ ಧುಮುಕಿದ ಪುಟ್ಟಸ್ವಾಮಿಗೆ ಸಮಾವೇಶದಲ್ಲೇ ಅವರ ಮಾಜಿ ಪತ್ನಿ ಹೈಡ್ರಾಮ ಮಾಡಿ ನಿಂದಿಸಿರುವ ಘಟನೆ ನಡೆದಿದೆ.

ಪೊಲೀಸ್ ಅಧಿಕಾರಿ ಹುದ್ದೆಗೆ ಗುಡ್‌ ಬೈ ಹೇಳಿ ರಾಜಕೀಯಕ್ಕೆ ಧುಮುಕಿದ ಪುಟ್ಟಸ್ವಾಮಿಗೆ ಸಮಾವೇಶದಲ್ಲೇ ಮಾಜಿ ಪತ್ನಿಯಿಂದ ನಿಂದನೆ
ನಿವೃತ್ತ ಪೊಲೀಸ್ ಅಧಿಕಾರಿ ಪುಟ್ಟಸ್ವಾಮಿ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Feb 11, 2023 | 8:41 PM

ಚಾಮರಾಜನಗರ: ಚಾಮರಾಜನಗರ ಜಿಲ್ಲೆ ಸೇರಿದಂತೆ ವಿವಿಧೆಡೆ ಕಾನ್ಸ್‌ಟೇಬಲ್, ಸಬ್ ಇನ್ಸ್ಪೆಕ್ಟರ್, ಪೊಲೀಸ್ ಇನ್ಸ್​ಪೆಕ್ಟರ್ ಆಗಿ 27 ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದ ಬಿ.ಪುಟ್ಟಸ್ವಾಮಿ ಅವರು ಪೊಲೀಸ್ ಇನ್ಸ್​ಪೆಕ್ಟರ್​ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯ ಅಖಾಡಕ್ಕೆ ಧುಮುಕ್ಕಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ತೀರ್ಮಾನಿಸಿರುವ ಪುಟ್ಟಸ್ವಾಮಿ(Former police inspector puttaswamy) ಅವರು ಜನಾಭಿಪ್ರಾಯ ಸಂಗ್ರಹಿಸಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಇಂದು (ಫೆಬ್ರವರಿ 11) ಸಂತೇಮರಹಳ್ಳಿಯಲ್ಲಿ ಜನಾಭಿಪ್ರಾಯ ಸಮಾವೇಶ ನಡೆಸಿದರು ಪುಟ್ಟಸ್ವಾಮಿ ಅವರನ್ನು ಪೂರ್ಣಕುಂಭದೊಂದಿಗೆ ಅದ್ದೂರಿ ಮೆರವಣಿಗೆ ಮೂಲಕ ಕರೆತರಲಾಯ್ತು. ಆದ್ರೆ, ಈ ವೇಳೆ ಮಾಜಿ ಪತ್ನಿಯಿಂದ ಅವಮಾನಕ್ಕೊಳಗಾಗಿದ್ದಾರೆ.

ಇದನ್ನೂ ಓದಿ: ರಾಜಕೀಯ ಪ್ರವೇಶಕ್ಕಾಗಿ ಪೊಲೀಸ್ ಇನ್ಸ್​ಪೆಕ್ಟರ್​ ಹುದ್ದೆಗೆ ರಾಜೀನಾಮೆ ನೀಡಿದ ಬಿ.ಪುಟ್ಟಸ್ವಾಮಿ

ಹೌದು…ಪುಟ್ಟಸ್ವಾಮಿ ಅವರ ಮಾಜಿ ಪತ್ನಿ ಸುನೀತಾ ಅವರು ಸಮಾವೇಶ ಸ್ಥಳಕ್ಕೆ ಆಗಮಿಸಿ ದೊಡ್ಡ ಹೈಡ್ರಾಮ ಸೃಷ್ಟಿಸಿದ್ದಾರೆ. ಅಲ್ಲದೇ ಈ ಸಂದರ್ಭದಲ್ಲಿ ಪುಟ್ಟಸ್ವಾಮಿಗೆ ನಿಂದಿಸಿದ್ದಾರೆ. ನಂತರ ಸುನೀತಾ ಅವರು ಸಂತೇಮರಳ್ಳಿ ಐಬಿಯಲ್ಲಿ ಶಾಸಕ ಮಹೇಶ್ ಅವರನ್ನು ಭೇಟಿಯಾಗಿದ್ದಾರೆ. ಇದು ಪುಟ್ಟಸ್ವಾಮಿ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದ್ದು, ರಾಜಕೀಯವಾಗಿ ಹಿನ್ನೆಡೆ ಉಂಟುಮಾಡಲು ಮಹೇಶ್ ಅವರಿಂದ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇನ್ನು ಸಂತೇಮರಹಳ್ಳಿ ಐಬಿ ಬಳಿ ಅಭಿಮಾನಿಗಳ ಪ್ರತಿಭಟನೆ ಮಾಡಿದ್ದು, ಸ್ಥಳಕ್ಕೆ ಪುಟ್ಟಸ್ವಾಮಿ ಆಗಮಿಸಿ ಮಾಜಿ ಪತ್ನಿ ಸುನೀತಾ ಕಾರನ್ನು ತಡೆದು ತರಾಟೆಗೆ ತೆಗೆದುಕೊಂಡರು. ಈ ವೇಳೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯ್ತು.

ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪುಟ್ಟಸ್ವಾಮಿ, ನನಗೆ ಅವಮಾನ ಮಾಡುವ ಉದ್ದೇಶದಿಂದ ಅವರನ್ನು ವೇದಿಕೆ ಬಳಿ ಕಳುಹಿಸಲಾಗಿತ್ತು. ನನಗೆ ಮೂರು ವರ್ಷದಿಂದ ಇದೇ ರೀತಿ ಅವಮಾನ ಮಾಡುತ್ತಿದ್ದಾರೆ. ಅವಳ ಜೊತೆ ಶಾಸಕರು ಕೊಠಡಿಯಲ್ಲಿ ಕುಳಿತು ಗುಪ್ತ ಚರ್ಚೆ ಮಾಡುವ ಅವಶ್ಯಕತೆ ಏನಿತ್ತು? ಎನ್.ಮಹೇಶ್ ನನಗೆ ತಂದೆ ಸಮಾನ. ನೀವು ಬುದ್ದಿ ಹೇಳಿ ಕಳುಹಿಸಬಹುದಿತ್ತು. ಇಂತಹ ನೀತಿಗೆಟ್ಟ ಲಜ್ಜೆಗೆಟ್ಟ ಕೆಲಸ ಮಾಡಬೇಡಿ‌. ಇಂದಿನ ಸಮಾವೇಶದಲ್ಲಿ ಜನಸ್ತೋಮ ನೋಡಿ ಮಹೇಶ್ ಹೆದರಿದ್ದಾರೆ. ನನ್ನನ್ನು ಹಿಂದೆ ಸಹ ವರ್ಗಾವಣೆ ಮಾಡಿಸಿದ್ರಿ. ನನಗೂ ನನ್ನ ಪತ್ನಿಗೂ ನ್ಯಾಯಾಲಯದಲ್ಲಿ ವಿಚ್ಛೇದನ ಆಗಿದೆ. ಈಗ ನನ್ನ ಮಾಜಿ ಪತ್ನಿಯನ್ನು ಕೊಠಡಿಯಲ್ಲಿ ಕೂರಿಸಿ ಮಾತನಾಡುವಂತದ್ದು ಏನಿತ್ತು? ನಿನಗೆ ತಾಕತ್ತಿದ್ದರೆ ನನ್ನ ವಿರುದ್ದ ಹೋರಾಟ ಮಾಡು. ನಿಮಗೆ ಎಲ್ಲವನ್ನೂ ಟ್ಯೂನ್ ಅಪ್ ಮಾಡುವುದು ಗೊತ್ತಿದೆ‌. ಇಂತಹ ಹೇಸಿಗೆ ಕೆಲಸ ಮಾಡುವುದು ಬೇಡ ಎಂದು ಶಾಸಕ ಎನ್.ಮಹೇಶ್ ವಿರುದ್ದ ವಾಗ್ದಾಳಿ ನಡೆಸಿದರು.

ಮಾಜಿ‌ ಪೊಲೀಸ್ ಅಧಿಕಾರಿಗೆ ನಿರೀಕ್ಷೆಗೂ ಮೀರಿ ಬೆಂಬಲ ವ್ಯಕ್ತವಾಗಿದೆ. ಪುಟ್ಟಸ್ವಾಮಿ ಯಾವುದೇ ಪಕ್ಷಕ್ಕೆ ಹೋದರೂ ಬೆಂಬಲಿಸಲು ಸಮಾವೇಶದಲ್ಲಿ ಒಕ್ಕೊರಲ ನಿರ್ಧಾರವಾಗಿದೆ. ಎಲ್ಲ ಪಕ್ಷಗಳಿಂದಲು ಮುಕ್ತ ಆಹ್ವಾನ ಇದೆ. ಮತ್ತೆ ಮುಖಂಡರೊಡನೆ ಚರ್ಚಿಸಿ ಶೀಘ್ರದಲ್ಲೇ ಅಂತಿಮ ನಿರ್ಧಾರ ಮಾಡಲಾಗುವುದು. ಆದ್ರೆ ಸ್ಪರ್ಧೆ ಖಚಿತ ಎಂದು ಮಾಜಿ ಪೊಲೀಸ್ ಇನ್ಸ್‌ಪೆಕ್ಟರ್ ಪುಟ್ಟಸ್ವಾಮಿ ಸ್ಪಷ್ಟಪಡಿಸಿದರು.

ಇನ್ನು ಪುಟ್ಟಸ್ವಾಮಿ ಅವರು ಯಾವ ಪಕ್ಷದಿಂದ ಸ್ಪರ್ಧಿಸಬೇಕೆಂದು ಜನಾಭಿಪ್ರಾಯ ಸಂಗ್ರಹ ಮಾಡುತ್ತಿದ್ದಾರೆ. ಈ ಮೂಲಗಳ ಪ್ರಕಾರ ಮಾಜಿ ಪೊಲೀಸ್ ಅಧಿಕಾರಿಗೆ ಬಿಜೆಪಿಯಿಂದ ಕಣಕ್ಕಳಿಯುವ ಆಸೆ ಇದೆ ಎಂದು ತಿಳಿದುಬಂದಿದೆ. ಆದ್ರೆ, ಕೊಳ್ಳೆಗಾಲದಲ್ಲಿ ಈಗಾಗಲೇ ಹಾಲಿ ಶಾಸಕ ಎನ್​.ಮಹೇಶ್ ಅವರು ಬಿಎಸ್​ಪಿ ತೊರೆದು ಬಿಜೆಪಿ ಸೇರಿದ್ದಾರೆ. ಹೀಗಾಗಿ ಮುಂಬರುವ ಕೊಳ್ಳೆಗಾಲ ವಿಧಾನಸಭೆ ಬಿಜೆಪಿ ಟಿಕೆಟ್ ಮಹೇಶ್ ಅವರಿಗೆ ಸಿಗುವ ಸಾಧ್ಯತೆಗಳು ಹೆಚ್ಚಿವೆ. ಆದ್ರೆ, ಪುಟ್ಟಸ್ವಾಮಿ ಒಳಗೊಳಗೆ ಬಿಜೆಪಿ ಟಿಕೆಟ್​ಗಾಗಿ ಕಸರತ್ತು ನಡೆಸಿದ್ದಾರೆ.

Published On - 8:40 pm, Sat, 11 February 23

ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು