ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಾಡಿನ ಮಕ್ಕಳು ಕಂಗಾಲು! ಜೀವ ಕೈಯಲ್ಲಿ ಹಿಡಿದು ವಿದ್ಯಾರ್ಥಿಗಳ ಡೆಡ್ಲಿ ಸಂಚಾರ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 07, 2024 | 8:26 PM

ಅವರೆಲ್ಲರು ಕಾಡಂಚಿನ ಗ್ರಾಮಸ್ಥರು. ಏನೇ ಬೇಕಿದ್ದರೂ ಪಟ್ಟಣಕ್ಕೆ ಬಂದು ಹೋಗಬೇಕು. ಹೀಗಿದ್ದವರ ಅವರ ಬದುಕಿಗೆ ಭರವಸೆ ನೀಡಿದ್ದು ಒಂದು ಸೇತುವೆ. ಆದ್ರೆ, ಕಳೆದ ಎರೆಡು ವರ್ಷ ಹಿಂದೆ ಸುರಿದ ಭಾರಿ ವರ್ಷಧಾರೆಗೆ ಸೇತುವೆ ಕುಸಿದು ಹೋಗಿದ್ದು, ಈಗ ಕಾಡಿನ ಮಕ್ಕಳ ಬದುಕೆ ಸಂಕಷ್ಟದಲ್ಲಿ ಸಿಲುಕಿದಂತಾಗಿದೆ. ಈ ಕುರಿತಾದ ಒಂದು ವರದಿ ಇಲ್ಲಿದೆ.

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಾಡಿನ ಮಕ್ಕಳು ಕಂಗಾಲು! ಜೀವ ಕೈಯಲ್ಲಿ ಹಿಡಿದು ವಿದ್ಯಾರ್ಥಿಗಳ ಡೆಡ್ಲಿ ಸಂಚಾರ
ಬೂದಿಪಡಗ ಕಾಡಂಚಿನ ಗ್ರಾಮ
Follow us on

ಚಾಮರಾಜನಗರ, ಜು.07: ಚಾಮರಾಜನಗರ (Chamarajanagar) ತಾಲೂಕಿನ ಬೂದಿಪಡಗ ಕಾಡಂಚಿನ ಗ್ರಾಮದಲ್ಲಿ ಕಳೆದ ಎರೆಡು ವರ್ಷಗಳ ಹಿಂದೆ ಸುರಿದ ಭಾರಿ ಮಳೆಗೆ ಸೇತುವೆಗೆ ಹಾನಿಯಾಗಿತ್ತು. ಒಂದೆಡೆ ಕುಸಿದು ಹೋಗಿ ವಾಲಿ ಕೊಂಡಿದೆ. ಆಗಿನಿಂದ ಇಲ್ಲಿಯವರೆಗೂ ಅಧಿಕಾರಿಗಳು ಸೇತುವೆ ನಿರ್ಮಾಣ ಕಾರ್ಯ ಮಾಡದೆ ನಿರ್ಲಕ್ಷ್ಯ ತೋರಿದ್ದು, ಈಗ ಗ್ರಾಮಸ್ಥರು ಪರದಾಡುವಂತಾಗಿದೆ.

ಇನ್ನು ಈ ಸೇತುವೆಯನ್ನ ಸುವರ್ಣಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಬೂದಿ ಪಡಗ ಗ್ರಾಮಕ್ಕೆ ತೆರಳ ಬೇಕಿದ್ರೆ ಈ ಸೇತುವೆ ಒಂದೇ ಮಾರ್ಗ. ಯಾವಾಗ ಸೇತುವೆಗೆ ಹಾನಿಯಾಯಿತೋ, ಗ್ರಾಮಕ್ಕಿದ್ದ ಒಂದೇ ಒಂದು ಬಸ್ ಸಹ ಸಂಚಾರವನ್ನ ನಿಲ್ಲಿಸಿ ಬಿಟ್ಟಿದೆ. ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ತೆರಳ ಬೇಕಂದ್ರೆ ನಾಲ್ಕೈದು ಕಿಲೋ ಮೀಟರ್, ದಿನ ನಿತ್ಯ ನಡಯಲೇ ಬೇಕಾದ ಅನಿವಾರ್ಯತೆ ಎದುರಾಗಿದೆ.

ಇದನ್ನೂ ಓದಿ:ಉತ್ತರ ಕನ್ನಡ: ಧಾರಾಕಾರ ಮಳೆಗೆ ಗಂಗಾವಳಿ ನದಿ ಸೇತುವೆ ಮುಳುಗಡೆ, ಐದಕ್ಕೂ ಹೆಚ್ಚು ಗ್ರಾಮಗಳ ಸಂಪರ್ಕ ಕಷ್ಟ

ಊರಿನಲ್ಲಿ ಯಾರಿಗಾದರೂ ಹುಷಾರಿಲ್ಲ ಅಂದರೆ ಬೂದಿ ಪಡಗ ಗ್ರಾಮಕ್ಕೆ ಆಂಬ್ಯುಲೆನ್ಸ್ ಸಹ ಬರುತ್ತಿಲ್ಲ. ಗಾಯದ ಮೇಲೆ ಬರೆ ಎಂಬಂತೆ ವಾರದಲ್ಲಿ ನಾಲ್ಕು ದಿನ ಕಾಡಾನೆಗಳು ಮುಖ್ಯ ರಸ್ತೆ ಹಾಗೂ ಹಳ್ಳಿಗಳಲ್ಲಿ ಕಾಣಿಸಿ ಕೊಳ್ಳುತ್ತಲೇ ಇವೆ. ಇಷ್ಟೆಲ್ಲ ಅವಾಂತರವು ಒಂದು ಸೇತುವೆಯಿಂದ ಸೃಷ್ಠಿಯಾಗಿದ್ದರೂ ಅಧಿಕಾರಿಗಳು ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತಮ್ಮ ಪಾಡಿಗೆ ತಾವಿದ್ದಾರೆ.

ಅದೇನೆ ಹೇಳಿ ಸೇತುವೆ ದುರಸ್ಥಿ ಕಾರ್ಯ ಮಾಡದೆ ಇರುವ ಅಧಿಕಾರಿಗಳು ಇನ್ನು ಮೇಲಾದರೂ ಎಚ್ಚೆತ್ತುಕೊಂಡು ದುರಸ್ಥಿ ಕಾರ್ಯ ನಡೆಸಬೇಕಿದೆ. ಬರೀ ಚುನಾವಣೆ ಬಂದಾಗ ಮಾತ್ರ ಇತ್ತ ತಲೆ ಹಾಕುವ ರಾಜಕಾರಣಿಗಳು ಜನಪ್ರತಿನಿಧಿಗಳು ಕಾಡಿನ ಮಕ್ಕಳ ಅಳಲನ್ನ ಒಮ್ಮೆ ತಿರುಗಿ ನೋಡಲಿ ಎನ್ನುವುದೇ ನಮ್ಮ ಆಶಯ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ