ಶರತ್ತುಗಳಿಲ್ಲದೆ ಬಿಜೆಪಿ ಸೇರುವುದಾಗಿ ಹೇಳಿದ ಕೊಳ್ಳೇಗಾಲ ಶಾಸಕ ಎನ್​.ಮಹೇಶ್; ಬಿಎಸ್​ಪಿ ಉಚ್ಛಾಟಿತ ಶಾಸಕನಿಗೆ ಬಿಎಸ್​ವೈ ಆಹ್ವಾನ

| Updated By: Skanda

Updated on: Jul 30, 2021 | 1:38 PM

ಇಂದು ಗುಂಡ್ಲುಪೇಟೆಗೆ ಭೇಟಿ ನೀಡಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಮಾತುಕತೆ ನಡೆಸಿದ ಎನ್​.ಮಹೇಶ್, ಯಡಿಯೂರಪ್ಪ ಅವರ ಆಹ್ವಾನದಿಂದಾಗಿ ಶೀಘ್ರದಲ್ಲೇ ಯಾವುದೇ ಶರತ್ತುಗಳಿಲ್ಲದೇ ಬಿಜೆಪಿ ಸೇರಲು ನಿರ್ಧಾರ ಮಾಡಿದ್ದಾರೆ.

ಶರತ್ತುಗಳಿಲ್ಲದೆ ಬಿಜೆಪಿ ಸೇರುವುದಾಗಿ ಹೇಳಿದ ಕೊಳ್ಳೇಗಾಲ ಶಾಸಕ ಎನ್​.ಮಹೇಶ್; ಬಿಎಸ್​ಪಿ ಉಚ್ಛಾಟಿತ ಶಾಸಕನಿಗೆ ಬಿಎಸ್​ವೈ ಆಹ್ವಾನ
ಎನ್. ಮಹೇಶ್ (ಸಂಗ್ರಹ ಚಿತ್ರ)
Follow us on

ಚಾಮರಾಜನಗರ: ಬಿಎಸ್​ಪಿ ಪಕ್ಷದಿಂದ ಆಯ್ಕೆಯಾಗಿ ಕೊಳ್ಳೇಗಾಲ ಶಾಸಕರಾಗಿದ್ದ ಎನ್​.ಮಹೇಶ್ (N Mahesh) ಅವರು ಬಿಎಸ್​ಪಿಯಿಂದ (BSP) ಉಚ್ಛಾಟನೆಗೊಂಡಿರುವ ಕಾರಣ ಇದೀಗ ಬಿಜೆಪಿ (BJP) ಸೇರುವುದಾಗಿ ನಿರ್ಧರಿಸಿದ್ದಾರೆ. ಈ ಬಗ್ಗೆ ಕೆಲ ದಿನಗಳ ಹಿಂದಷ್ಟೇ ಸೂಚನೆ ನೀಡಿದ್ದ ಎನ್​.ಮಹೇಶ್ ಇಂದು ಅಧಿಕೃತ ಹೇಳಿಕೆ ನೀಡಿದ್ದಾರೆ. ಇಂದು ಗುಂಡ್ಲುಪೇಟೆಗೆ ಭೇಟಿ ನೀಡಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (BS Yediyurappa) ಅವರೊಂದಿಗೆ ಮಾತುಕತೆ ನಡೆಸಿದ ಅವರು ಯಡಿಯೂರಪ್ಪ ಅವರ ಆಹ್ವಾನದಿಂದಾಗಿ ಶೀಘ್ರದಲ್ಲೇ ಯಾವುದೇ ಶರತ್ತುಗಳಿಲ್ಲದೇ ಬಿಜೆಪಿ ಸೇರಲು ನಿರ್ಧಾರ ಮಾಡಿದ್ದಾರೆ.

ಇತ್ತ, ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಪಟ್ಟು ಹಿಡಿದು, ಬಿ.ಎಸ್. ಯಡಿಯೂರಪ್ಪ ಅವರು ಅಧಿಕಾರದಿಂದ ಕೆಳಗಿಳಿಸಿದ ಬಳಿಕವೂ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ರಾಜಕೀಯ ಬಾಂಬ್​ಗಳನ್ನು ಸಿಡಿಸುತ್ತಲೇ ಇದ್ದಾರೆ. ಅವರೀಗ ನನಗೆ ಮುಖ್ಯಮಂತ್ರಿ ಆಗೋ ಅವಕಾಶವಿತ್ತು, ಯಡಿಯೂರಪ್ಪ ನನಗೆ ಅವಕಾಶ ತಪ್ಪಿಸಿದರು. ಯತ್ನಾಳ್ ಅವರನ್ನ ಸಿಎಂ ಮಾಡಿದರೆ ಮೂರು ತಿಂಗಳಲ್ಲಿ ಸರ್ಕಾರ‌ ಕೆಡವುತ್ತೇನೆಂದು ಕೇಂದ್ರದ ನಾಯಕರ ಮುಂದೆ ಯಡಿಯೂರಪ್ಪ ಬೆದರಿಕೆ ಹಾಕಿದ್ದರು ಎಂದು ಹೊಸ ಆರೋಪ ಮಾಡಿದ್ದಾರೆ.

ನನಗೆ ಮುಖ್ಯಮಂತ್ರಿ ಆಗುವ ಅವಕಾಶವನ್ನು ಯಡಿಯೂರಪ್ಪ ತಪ್ಪಿಸಿದರು. ಆದರೆ ಈಗ ನಾನು ಸಚಿವ ಸ್ಥಾನಕ್ಕಾಗಿ ಲಾಬಿ ಮಾಡಲ್ಲ. ಈ ಹಿಂದೆ ನಾನೇನೂ ದೆಹಲಿ‌ಯಲ್ಲಿ ಲಾಬಿ ಮಾಡಿ ಕೇಂದ್ರದಲ್ಲಿ ಸಚಿವ ಆಗಿರಲಿಲ್ಲ. ಮೋದಿ ಪ್ರಾಮಾಣಿಕರು, ದೇಶಕ್ಕಾಗಿ ಪರಿವರ್ತನೆ ಯಜ್ಞ ಮಾಡುತ್ತಿದ್ದಾರೆ. ದೆಹಲಿ ಲಾಬಿ ಮಾಡಿ ಮಂತ್ರಿಯಾಗೋವಷ್ಟು‌ ಕೆಳಮಟ್ಟದ ರಾಜಕಾರಣಿಯಲ್ಲ ನಾನು. ಯಡಿಯೂರಪ್ಪ ಒಬ್ಬರೇ ಬೊಮ್ಮಾಯಿ ಅವರನ್ನು ಸಿಎಂ ಮಾಡಿಲ್ಲ. ಯತ್ನಾಳ್ ಅವರನ್ನ ಸಿಎಂ ಮಾಡಿದರೆ ಮೂರು ತಿಂಗಳಲ್ಲಿ ಸರ್ಕಾರ‌ ಕೆಡವುತ್ತೇನೆಂದು ಕೇಂದ್ರದ ನಾಯಕರ ಮುಂದೆ ಯಡಿಯೂರಪ್ಪ ಬೆದರಿಕೆ ಹಾಕಿದರು ಎಂದು ಯತ್ನಾಳ್ ಹೇಳಿದ್ದಾರೆ.

ಯತ್ನಾಳ್ ಸಿಎಂ ಆದರೆ ಇವರೆಲ್ಲಾ ಜೈಲಿಗೆ ಹೋಗ್ತಾರೆ ಎಂಬ ಭಯವಿದೆ. 10 ಸಾವಿರ ಕೋಟಿ ಭ್ರಷ್ಟಾಚಾರವನ್ನು ಮಾಜಿ ಸಿಎಂ ಯಡಿಯೂರಪ್ಪ ಮಾಡಿದ್ದಾರೆ ಎಂದು ಇದೇ ವೇಳೆ ಯತ್ನಾಳ್ ಆರೋಪ ಮಾಡಿದರು. ಯಡಿಯೂರಪ್ಪ ತಾವು ಶಿಕಾರಿಪುರದ ಸಿಎಂ ಎಂಬಂತೆ ವರ್ತಿಸಿದರು. ತಮ್ಮ ಭಾಗಕ್ಕೇ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಕೊಂಡಿದ್ದಾರೆ. ಈಗ ಜಿಲ್ಲೆಗಳ ಪ್ರವಾಸಕ್ಕೆ ಬರುತ್ತೇನೆಂದು ಹೇಳುತ್ತಿದ್ದಾರೆ. ಯಡಿಯೂರಪ್ಪ ವಿಜಯಪುರ ಜಿಲ್ಲೆಗೆ ಬರಲಿ ನಾನೇ ಈ ಕುರಿತು ಪ್ರಶ್ನೆ ಮಾಡುತ್ತೇನೆ. ನನ್ನ ಬಗ್ಗೆ ಯಡಿಯೂರಪ್ಪ ಅವರಿಗೆ ಭಯ ಇದೆ. ಅದಕ್ಕೇ ನನಗೆ ಸಿಎಂ ಸ್ಥಾನ ತಪ್ಪಿಸಿದರು ಎಂದು ಯತ್ನಾಳ್ ಆರೋಪಿಸಿದ್ದಾರೆ.

ಇದನ್ನೂ ಓದಿ:
ಖಾಸಗಿ ವಲಯದಲ್ಲೂ ಎಸ್​ಸಿ, ಎಸ್​ಟಿ ಸಮುದಾಯಕ್ಕೆ ಮೀಸಲಾತಿ ಬೇಕು: ವಿಪಕ್ಷ ನಾಯಕ ಸಿದ್ದರಾಮಯ್ಯ, ಶಾಸಕ ಎನ್​.ಮಹೇಶ್​ ಆಗ್ರಹ 

ಬಿಎಸ್​ಪಿ ಅಧಿಕಾರಕ್ಕೆ ಬಂದರೆ ಶ್ರೀರಾಮ ಮಂದಿರವನ್ನು ತ್ವರಿತವಾಗಿ ನಿರ್ಮಾಣ ಮಾಡಲಾಗುವುದು; ಮಾಯಾವತಿ ಪಕ್ಷದಿಂದ ಮತ್ತೊಂದು ಭರವಸೆ

(Kollegal MLA N Mahesh announces he will Join BJP after meeting BS Yediyurappa)