ಮಹಾ ಶಿವರಾತ್ರಿ ಸಮೀಪಿಸುತ್ತಿದೆ… ರೈತ ಮಕ್ಕಳಿಗೆ ಕನ್ಯೆ ಸಿಗಲೆಂದು ಮಾದಪ್ಪನ ಸನ್ನಿಧಾನಕ್ಕೆ ಸಾವಿರಾರು ಮಂದಿ ಪಾದಯಾತ್ರೆ

| Updated By: ಸಾಧು ಶ್ರೀನಾಥ್​

Updated on: Feb 13, 2024 | 1:02 PM

ಉಘೇ ಮಾಯ್ಕಾರ ಉಘೇ ಮಾದಪ್ಪ... ಮಳವಳ್ಳಿ ತಾಲೂಕಿನ ಅಂಚೆದೊಡ್ಡಿ ಗ್ರಾಮಕ್ಕೆ ಗ್ರಾಮವೇ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದು ಈ ಗ್ರಾಮದ ರೈತ ಮಹಿಳೆಯರು ತಮ್ಮ ಗಂಡು ಮಕ್ಕಳಿಗೆ ಒಳ್ಳೆ ಕನ್ಯೆ ಸಿಗಲಿ ಅಂತ ಹರಕೆ ಕಟ್ಟಿ ಪಾದಯಾತ್ರೆ ನಡೆಸಿದ್ರೆ ಬೆಂಗಳೂರಿನ ಕೆಂಗೇರಿ ನಿವಾಸಿಗಳು ತಮ್ಗೆ ಒಳ್ಳೆದಾಗ್ಲಿ ಕುಟುಂಬಕ್ಕೆ ಶುಭವಾಗ್ಲಿ ಅಂತ ಪಾದಯಾತ್ರೆಯಲ್ಲಿ ಭಾಗಿಯಾಗುತ್ತಿದ್ದಾರೆ. ಇನ್ನು ಕೆಲವರು ಅವರ ತಾತ ಮುತ್ತಾತ ಕಾಲದಿಂದ ಪಾದಯಾತ್ರೆ ನಡೆಸುತ್ತಿದ್ದು ಈಗಿನವರೂ ಸಹ ಪಾದಯಾತ್ರೆಯನ್ನ ಮುಂದುವರೆಸುತ್ತಿದ್ದಾರೆ.

ಮಹಾ ಶಿವರಾತ್ರಿ ಸಮೀಪಿಸುತ್ತಿದೆ... ರೈತ ಮಕ್ಕಳಿಗೆ ಕನ್ಯೆ ಸಿಗಲೆಂದು ಮಾದಪ್ಪನ ಸನ್ನಿಧಾನಕ್ಕೆ ಸಾವಿರಾರು ಮಂದಿ ಪಾದಯಾತ್ರೆ
ಉಘೇ ಮಾಯ್ಕಾರ ಮಾದಪ್ಪ... ರೈತ ಮಕ್ಕಳಿಗೆ ಒಳ್ಳೆ ಕನ್ಯೆ ಸಿಗಲೆಂದು ಸಾವಿರಾರು ಮಂದಿ ಪಾದಯಾತ್ರೆ
Follow us on

ಮಹಾ ಶಿವರಾತ್ರಿಗೆ ಇನ್ನು ಕೆಲವೇ ಕೆಲವು ದಿನಗಳು ಮಾತ್ರ ಬಾಕಿ ಇದೆ.ಅಷ್ಟರಲ್ಲೇ ಮಾದಪ್ಪನ ಸನ್ನಿಧಾನಕ್ಕೆ (Male Mahadeshwara Temple, Chamrajnagar) ರಾಜ್ಯದ ನಾನ ಭಾಗಗಳಿಂದ ಪಾದಯಾತ್ರಿಕರು ಬರಲಾರಂಭಿಸಿದ್ದಾರೆ. ಮಗನಿಗೆ ಒಳ್ಳೆ ಕನ್ಯೆ ಸಿಗ್ಲಿ ಅಂತ ಬರುವ ಪಾದಯಾತ್ರಿಕರ ಸಂಖ್ಯೆ ದಿನ ಕಳೆದಂತೆ ಹೆಚ್ಚುತ್ತಲೇ ಇದೆ. ಈ ಕುರಿತಾದ ಒಂದು ರಿಪೋರ್ಟ್ ನಿಮ್ಮ ಮುಂದೆ. ಕೈಯಲ್ಲೊಂದು ಊರುಗೋಲು. ತಲೆಯ ಮೆಲೊಂದು ಹಳದಿ ಬಣ್ಣದ ಟೋಪಿ.. ಬಾಯ್ತುಂಬ ಉಘೇ ಮಾಯ್ಕಾರ ಮಾದಪ್ಪ.. ಎಂಬ ಘೋಷವಾಕ್ಯ.. ಈ ಎಲ್ಲಾ ದೃಶ್ಯ ಕಂಡು ಬಂದಿದ್ದು. ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ತಾಳ ಬೆಟ್ಟದ ಸಮೀಪ.. ಹೌದು ಊರಿಗೆ ಊರೇ ಪಾದಯಾತ್ರೆ ಮೂಲಕ ಮಾದಪ್ಪನ ಸನ್ನಿಧಾನಕ್ಕೆ ತೆರಳುತ್ತಿದ್ದಾರೆ. ಶಿವರಾತ್ರಿ ಹಬ್ಬ ಬೇರೆ ಮುಂದಿನ ತಿಂಗಳು (Maha Shivaratri, Hindu festival – Friday 8 Mar, 2024) ಇರುವ ಕಾರಣ ಈಗಿನಿಂದಲೇ ಭಕ್ತಾಧಿಗಳು ರಾಜ್ಯದ ನಾನಾ ಭಾಗಗಳಿಂದ ಇಷ್ಟಾರ್ಥ ನೆರವೇರಲೆಂದು ಪಾದಯಾತ್ರೆ (Devotees padayatra) ಮೂಲಕ ಆಗಮಿಸುತ್ತಿದ್ದಾರೆ. ಅದರಲ್ಲಿ ರೈತರ ಮಕ್ಕಳಿಗೆ ಕನ್ಯೆ ಸಿಗಲಿ ಅಂತ ಪಾದಯಾತ್ರೆ ಮಾಡುತ್ತಿರುವವರ ಸಂಖ್ಯೆಯೇ ಹೆಚ್ಚು.

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಅಂಚೆದೊಡ್ಡಿ ಗ್ರಾಮಕ್ಕೆ ಗ್ರಾಮವೇ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದು ಈ ಗ್ರಾಮದ ರೈತ ಮಹಿಳೆಯರು ತಮ್ಮ ಗಂಡು ಮಕ್ಕಳಿಗೆ ಒಳ್ಳೆ ಕನ್ಯೆ ಸಿಗಲಿ ಅಂತ ಹರಕೆ ಕಟ್ಟಿ ಪಾದಯಾತ್ರೆ ನಡೆಸಿದ್ರೆ ಬೆಂಗಳೂರಿನ ಕೆಂಗೇರಿ ನಿವಾಸಿಗಳು ತಮ್ಗೆ ಒಳ್ಳೆದಾಗ್ಲಿ ಕುಟುಂಬಕ್ಕೆ ಶುಭವಾಗ್ಲಿ ಅಂತ ಪಾದಯಾತ್ರೆಯಲ್ಲಿ ಭಾಗಿಯಾಗುತ್ತಿದ್ದಾರೆ. ಇನ್ನು ಕೆಲವರು ಅವರ ತಾತ ಮುತ್ತಾತ ಕಾಲದಿಂದ ಪಾದಯಾತ್ರೆ ನಡೆಸುತ್ತಿದ್ದು ಈಗಿನವರೂ ಸಹ ಪಾದಯಾತ್ರೆಯನ್ನ ಮುಂದುವರೆಸುತ್ತಿದ್ದಾರೆ.

Also Read: 4 ಲಕ್ಷ ದೇವಸ್ಥಾನಗಳಿವೆ, ಅವುಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಿಗೊಳಿಸಲು ಸಂಘಟಿತರಾಗಬೇಕು- ಉಡುಪಿ ಸಮಾವೇಶ

ಮಹಾ ಶಿವರಾತ್ರಿಯೆಂದು ಮಾದಪ್ಪನ ಸನ್ನಿಧಾನದಲ್ಲಿ ವಿಶೇಷ ಪೂಜಾ ಕೈಂಕರ್ಯ ಹಾಗೂ ರಥೋತ್ಸವ ಕಾರ್ಯಕ್ರಮವಿದೆ. ಈ ವೇಳೆ ಮಾದಪ್ಪನ ದರ್ಶನ ಪಡೆದರೆ ಒಳಿತಾಗುತ್ತದೆ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಭಕ್ತರು ಪ್ರತಿ ವರ್ಷ ದೀಪಾವಳಿ, ಯುಗಾದಿ ಹಾಗೂ ಶಿವರಾತ್ರಿ ಸಂದರ್ಭದಲ್ಲಿ ಪಾದಯಾತ್ರೆ ನಡೆಸಿ ಮಾದಪ್ಪನ ಕೃಪೆಗೆ ಪಾತ್ರವಾಗುವ ವಾಡಿಕೆಯಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:02 pm, Tue, 13 February 24