ಚಾಮರಾಜನಗರ, (ಜುಲೈ.25): ವ್ಯಕ್ತಿಯೋರ್ವ ಕುಡಿದ ಮತ್ತಿನಲ್ಲಿ ನೀರೆಂದು (Water) ಆ್ಯಸಿಡ್(Acid )ಕುಡಿದು ಮೃತಪಟ್ಟಿರುವ ಘಟನೆ ಚಾಮರಾಜನಗರ(Chamarajnagar) ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ನಡೆದಿದೆ. ಸಿದ್ದರಾಜು (40) ಮೃತ ದುರ್ದೈವಿ. ಮೊನ್ನೆ(ಜುಲೈ 23) ರಾತ್ರಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕುಡಿದ ಮತ್ತಿನಲ್ಲಿ (Drunk Man) ನೀರು ಎಂದು ಭಾವಿಸಿ ಟಾಯ್ಲೆಟ್ ಕ್ಲೀನಿಂಗ್ಗೆ ಬಳಸುವ ಆ್ಯಸಿಡ್ ಕುಡಿದಿದ್ದಾನೆ. ಬಳಿಕ ಬಿದ್ದು ಒದ್ದಾಡುತ್ತಿದ್ದ ಸಿದ್ದರಾಜುನನ್ನು ಗ್ರಾಮಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ, ದುರದೃಷ್ಟವಶಾತ್ ನಿನ್ನೆ(ಜುಲೈ 24) ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ: ಪ್ರತ್ಯೇಕ ಘಟನೆ: ನಿರಂತರ ಮಳೆಯಿಂದಾಗಿ ದಾವಣಗೆರೆಯಲ್ಲಿ ಮಗು, ವಿಜಯಪುರದಲ್ಲಿ ವೃದ್ಧೆ ಸಾವು
ಕೋಲಾರ, (ಜುಲೈ 25): ಮಾವು ತುಂಬಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ ಕಾರ್ಮಿಕ ಮೃತಪಟ್ಟಿರುವ ಘಟನೆ ಕೋಲಾರ ಜಿಲ್ಲೆ ಶ್ರೀನಿವಾಸಪುರ ಪಟ್ಟಣದ ಮಾವು ಮಾರುಕಟ್ಟೆಯಲ್ಲಿ ನಡೆದಿದೆ. ಇಂದಿರಾನಗರ ನಿವಾಸಿ ಶಫಿ(35) ಮೃತಪಟ್ಟ ವ್ಯಕ್ತಿ. ಘಟನೆಯಲ್ಲಿ ಮತ್ತಿಬ್ಬರು ಕಾರ್ಮಿಕರಿಗೆ ಗಾಯಗಳಾಗಿದ್ದು ಅವರನ್ನು ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 11:37 am, Tue, 25 July 23