AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದು ಮಾದರಿ: ಕೊರೊನಾದಿಂದ ಮೃತಪಟ್ಟ ಸ್ನೇಹಿತನ ಹೆಂಡತಿಯ ವರಿಸಿದ ಗೆಳೆಯ, ದೃಢ ನಿರ್ಧಾರ ಮೆಚ್ಚಿಕೊಂಡ ಜನ

ಕೊರೊನಾದಿಂದಾಗಿ ಅಂಬಿಕಾಳ ಪತಿ ಚೇತನ್ ಮೃತಪಟ್ಟಿದ್ದಾರೆ. ಪತಿ ಇಲ್ಲದೆ ಜೀವನವೇ ಇಲ್ಲ ಎಂದು ಕಣ್ನೀರು ಹಾಕುತ್ತಿದ್ದ ಅಂಬಿಕಾಗೆ ಮೃತ ಚೇತನ್ ಸ್ನೇಹಿತ ಲೋಕೇಶ್ ಬಾಳು‌ ಕೊಟ್ಟಿದ್ದಾರೆ.

ಇದು ಮಾದರಿ: ಕೊರೊನಾದಿಂದ ಮೃತಪಟ್ಟ ಸ್ನೇಹಿತನ ಹೆಂಡತಿಯ ವರಿಸಿದ ಗೆಳೆಯ, ದೃಢ ನಿರ್ಧಾರ ಮೆಚ್ಚಿಕೊಂಡ ಜನ
ಮೃತ ಸ್ನೇಹಿನ ಹೆಂಡತಿಗೆ ಬಾಳು ಕೊಟ್ಟು ಮಾದರಿಯಾದ ವ್ಯಕ್ತಿ; ವಿಧವೆ ವರಿಸಿದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಜನ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Feb 08, 2022 | 8:32 PM

Share

ಚಾಮರಾಜನಗರ: ಮಹಾಮಾರಿ ಕೊರೊನಾದಿಂದ(Coronavirus) ಪತಿಯನ್ನು ಕಳೆದುಕೊಂಡು ವಿಧವೆಯಾಗಿದ್ದ(Widow Woman Marriage) ಮಹಿಳೆಗೆ ಮೃತನ ಆತ್ಮೀಯ ಸ್ನೇಹಿತ ಮದುವೆಯಾಗಿ ಬಾಳು ಕೊಟ್ಟ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಪತಿ ಚೇತನ್ ಕುಮಾರ್‌ನನ್ನು ಕಳೆದುಕೊಂಡು ಮನನೊಂದಿದ್ದ ಅಂಬಿಕಾಳನ್ನು ಚಾಮರಾಜನಗರ ತಾಲೂಕಿನ ನಂಜದೇವನಪುರ ನಿವಾಸಿ ಲೋಕೇಶ್ ಮದುವೆಯಾಗಿ ಹೊಸ ಬಾಳು ಕೊಟ್ಟಿದ್ದಾರೆ. ಮಹಾಮಾರಿ ಕಾಟದಿಂದ ಪತಿ ಕಳೆದುಕೊಂಡು ಬದುಕೇ ಬೇಡವಾಗಿದ್ದಾಗ ಪತಿಯ ಸ್ನೇಹಿತ ಮಹಿಳೆಯನ್ನು ಮದುವೆಯಾಗಿ ಹೊಸ ಜೀವನಕ್ಕೆ ದಾರಿ ಮಾಡಿ ಕೊಟ್ಟಿದ್ದಾರೆ.

ಮೃತ ಚೇತನ್ ಕಳೆದ ಎಂಟು ವರ್ಷದ ಹಿಂದೆ ಹನೂರಿನ ಅಂಬಿಕಾ ಜೊತೆಗೆ ವಿವಾಹವಾಗಿದ್ದರು. ಇವರ ಸಂಸಾರ ಚನ್ನಾಗಿ ಸಾಗುತಿದ್ದಾಗಲೇ ಮಹಾಮಾರಿ ಕೊರೊನಾ ಇವರ ಜೀವನದಲ್ಲಿ ವಿಲನ್ ಆಗಿ ಎಂಟ್ರಿ ಕೊಟ್ಟಿದೆ. ಕೊರೊನಾದಿಂದಾಗಿ ಅಂಬಿಕಾಳ ಪತಿ ಚೇತನ್ ಮೃತಪಟ್ಟಿದ್ದಾರೆ. ಪತಿ ಇಲ್ಲದೆ ಜೀವನವೇ ಇಲ್ಲ ಎಂದು ಕಣ್ನೀರು ಹಾಕುತ್ತಿದ್ದ ಅಂಬಿಕಾಗೆ ಮೃತ ಚೇತನ್ ಸ್ನೇಹಿತ ಲೋಕೇಶ್ ಬಾಳು‌ ಕೊಟ್ಟಿದ್ದಾರೆ. ಲೋಕೇಶ್ ಮೃತ ಚೇತನ್ ಕುಮಾರ್ ಗೆಳೆಯ. ಪತಿ ಕಳೆದುಕೊಂಡು ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಅಂಬಿಕಾ, ಆತ್ಮಹತ್ಯೆಗೂ‌ ಯತ್ನಿಸಿದ್ದರು. ಅಂಬಿಕಾಳ ನೋವನ್ನು ಕಣ್ಣಾರೆ ಕಂಡ ಲೋಕೇಶ್ ಆಕೆಗೆ ಬಾಳು ಕೊಡುವ ನಿರ್ಧಾರ ಮಾಡಿ ಬೆಂಗಳೂರಿನ ಸರ್ಪಭೂಷಣ ಮಠದಲ್ಲಿ ಇತ್ತೀಚೆಗೆ ವಿವಾಹವಾಗಿದ್ದಾರೆ. ಅಂಬಿಕಾಗೆ ಈಗಾಗಲೇ ಏಳು ವರ್ಷದ ಗಂಡು ಮಗುವಿದೆ. ಮಗು, ತಾಯಿ ಅಂಬಿಕಾಗೆ ಆಸರೆಯಾಗುವ ನಿಟ್ಟಿನಲ್ಲಿ ಲೋಕೇಶ್ ಬಾಳು ಕೊಟ್ಟಿದ್ದಾರೆ.

ಸದ್ಯ ಬೆಂಗಳೂರಿನಲ್ಲಿ ಈ ಕುಟುಂಬ ವಾಸವಿದೆ. ಲೋಕೇಶ್ ಸರ್ಪಭೂಷಣ ಮಠದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಲೋಕೇಶ್ ಕಾರ್ಯಕ್ಕೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಮೃತ ಚೇತನ್ ಕುಮಾರ್ ಗೆ ಆತ್ಮೀಯ ಗೆಳೆಯರಾಗಿದ್ದ ಲೋಕೇಶ್, ಮೃತ ಚೇತನ್ ಕುಟುಂಬಸ್ಥರು, ಅಂಬಿಕಾ ಕುಟುಂಬಸ್ಥರ ಸಮ್ಮುಖದಲ್ಲೇ ಮದುವೆಯಾಗಿ ಕುಟುಂಬಗಳಲ್ಲಿದ್ದ ನೋವನ್ನು ಮರೆಸಿದ್ದಾರೆ. ವಿಧವೆಗೆ ಬಾಳು‌ ಕೊಡುವ ಮೂಲಕ ಮಾದರಿಯಾಗಿದ್ದಾರೆ.

ಇದನ್ನೂ ಓದಿ: ಹಸಿರು ಬಟಾಣಿ ತಿನ್ನುವುದು ಆರೋಗ್ಯಕ್ಕೆ ಎಷ್ಟು ಮುಖ್ಯ ಗೊತ್ತಾ? ಇಲ್ಲಿದ ಸಂಪೂರ್ಣ ಮಾಹಿತಿ

Published On - 7:47 am, Tue, 8 February 22