ಅರ್ಥಿಕ ಹೊರೆ ನೆಪವೊಡ್ಡಿ 7 ವಿವಿಗಳ ವಿಲೀನಕ್ಕೆ ಶಿಕ್ಷಣ ಸಚಿವ ಸುಧಾಕರ್ ಚಿಂತನೆ- ವಿದ್ಯಾರ್ಥಿಗಳ ಪಾಲಿಗೆ ಕಂಟಕ

| Updated By: ಸಾಧು ಶ್ರೀನಾಥ್​

Updated on: Dec 12, 2023 | 2:03 PM

ಅರ್ಥಿಕ ಹೊರೆಯ ನೆಪವೊಡ್ಡುತ್ತಿರುವ ರಾಜ್ಯ ಸರ್ಕಾರ ಒಂದು ವೇಳೆ ಚಾಮರಾಜನಗರದ ಅಂಬೇಡ್ಕರ್ ವಿವಿಯನ್ನ ಮೈಸೂರಿನ ಮಾನಸ ಗಂಗೊತ್ರಿ ಮೂಲ ವಿವಿಗೆ ವಿಲೀನ ಮಾಡಿದ್ದೇ ಆದಲ್ಲಿ ಸಾವಿರಾರು ವಿದ್ಯಾರ್ಥಿಗಳು ಅತಂತ್ರಕ್ಕೆ ಸಿಲುಕಲಿದ್ದಾರೆ.

ಅರ್ಥಿಕ ಹೊರೆ ನೆಪವೊಡ್ಡಿ 7 ವಿವಿಗಳ ವಿಲೀನಕ್ಕೆ ಶಿಕ್ಷಣ ಸಚಿವ ಸುಧಾಕರ್ ಚಿಂತನೆ- ವಿದ್ಯಾರ್ಥಿಗಳ ಪಾಲಿಗೆ ಕಂಟಕ
ಅರ್ಥಿಕ ಹೊರೆ ನೆಪವೊಡ್ಡಿ 7 ವಿವಿಗಳ ವಿಲೀನಕ್ಕೆ ಶಿಕ್ಷಣ ಸಚಿವ ಸುಧಾಕರ್ ಚಿಂತನೆ-
Follow us on

ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆ ಎಂಬ ಅಪಖ್ಯಾತಿ ಹೊಂದಿರುವ ಗಡಿ ನಾಡು ಚಾಮರಾಜನಗರ (chamarajanagar) ಜಿಲ್ಲೆಯಲ್ಲಿ ನೂತನ ಅಂಬೇಡ್ಕರ್ ವಿಶ್ವ ವಿದ್ಯಾನಿಲಯ ಸ್ಥಾಪಿಸುವ ಮೂಲಕ ಶೈಕ್ಷಣಿಕವಾಗಿ ಮುಂದುವರೆಯಲು ಹಿಂದಿನ ಸರ್ಕಾರ ಮುಂದಾಗಿತ್ತು. ಅದೇ ರೀತಿ ನೂತನ ವಿವಿ ಸಹ ಸ್ಥಾಪನೆಯಾಗಿ ಕಾಡಂಚಿನ ಬಡ ವಿದ್ಯಾರ್ಥಿಗಳ (students) ಪಾಲಿಗೆ ಆಶಾಕಿರಣವಾಗಿತ್ತು. ಆದ್ರೆ ಈಗ ಉನ್ನತ ಶಿಕ್ಷಣ ಸಚಿವರ ( Higher Education Minister Dr M C Sudhakar) ಆ ಒಂದು ಮಾತು ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ನಿಮ್ಮ ಮುಂದೆ.

ಶೇಕಡ 52 ಪರ್ಸೆಂಟ್ ದಟ್ಟ ಕಾನನ ಇನ್ನುಳಿದ 48 ಶೇಕಡ ಭೂ ಪ್ರದೇಶ ಹೊಂದಿರುವ ಚಾಮರಾಜನಗರ ಜಿಲ್ಲೆಯು ಕೇರಳ ಹಾಗೂ ತಮಿಳುನಾಡಿನ ಗಡಿ ಹಂಚಿಕೊಳ್ಳುವ ಮೂಲಕ ಅಕ್ಷರಶಃ ಗಡಿನಾಡು ಎಂದು ಹೆಸರುವಾಸಿಯಾಗಿದೆ. ಇನ್ನು, ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆ, ಶಾಪಗ್ರಸ್ಥ ಜಿಲ್ಲೆ ಎಂಬ ಹಣೆಪಟ್ಟಿಗಳನ್ನೂ ಹೊಂದಿರುವ ಚಾಮರಾಜನಗರ ಜಿಲ್ಲೆಯನ್ನು ಶೈಕ್ಷಣಿಕವಾಗಿ ಮುಂದಕ್ಕೆ ತರಲು ಕಳೆದ ಬಿಜೆಪಿ ಸರ್ಕಾರವು ಮೈಸೂರು ವಿವಿಯಿಂದ (parent university) ಪ್ರತ್ಯೇಕ ಗೊಳಿಸಿ ನೂತನವಾಗಿ ಚಾಮರಾಜನಗರ ಅಂಬೇಡ್ಕರ್ ವಿವಿಯನ್ನ ಸ್ಥಾಪಿಸಿತ್ತು.

ಅಂಬೇಡ್ಕರ್ ವಿವಿ ಸ್ಥಾಪನೆಯಾದ ಬೆನ್ನಲ್ಲೆ ಮೈಸೂರಿಗೆ ತೆರಳಿ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗದ ಬಡ ವಿದ್ಯಾರ್ಥಿಗಳು ಚಾಮರಾಜನಗದ ನೂತನ ವಿವಿಗೆ ಅಡ್ಮಿಷನ್ ಆಗುವ ಮೂಲಕ ವ್ಯಾಸಾಂಗ ಮಾಡುವ ಆಸಕ್ತಿ ತೋರಿಸಿದ್ದರು. ಎಲ್ಲವೂ ಸರಿ ಹೋಯ್ತು ಅನ್ನುವಷ್ಟರಲ್ಲಿ ಈಗ ಸಾವಿರಾರು ವಿದ್ಯಾರ್ಥಿಗಳ ಪಾಲಿಗೆ ಬರ ಸಿಡಿಲು ಬಡಿತಂದಾಗಿದೆ. ಉನ್ನತ ಶಿಕ್ಷಣ ಸಚಿವ ಎಂ.ಸಿ ಸುಧಾಕರ್ ಅವರು ನೂತನ 7 ವಿವಿಯನ್ನ ಮೂಲ ವಿವಿಗೆ ವಿಲೀನ ಗೊಳಿಸುವ (merger of 7 universities with parent university) ಮಾತನ್ನಾಡಿದ್ದು, ಈಗ ಸಾವಿರಾರು ಬಡ ವಿದ್ಯಾರ್ಥಿಗಳು ಸಂಕಷ್ಟದಲ್ಲಿ ಸಿಲುಕುವಂತಾಗಿದೆ.

ಅಸಲಿಗೆ ಚಾಮರಾಜನಗರ ಅಂಬೇಡ್ಕರ್ ವಿವಿ ಸ್ಥಾಪನೆಯಾದ ಬೆನ್ನಲ್ಲೆ ಕಾಡಂಚಿನ ಬಡ ಸೋಲಿಗ ಹಾಗೂ ಬುಡಕಟ್ಟು ವಿದ್ಯಾರ್ಥಿಗಳು ಹೆಚ್ಚುಹೆಚ್ಚಾಗಿ ಅಡ್ಮಿಷನ್ ಆಗುವ ಮೂಲಕ ಉನ್ನತ ಶಿಕ್ಷಣ ವ್ಯಾಸಂಗ ಮಾಡಲು ಮುಂದಾಗಿದ್ದರು. ಬಿಳಿಗಿರಿರಂಗನ ಬೆಟ್ಟ, ಮಲೆ ಮಹದೇಶ್ವರ ಬೆಟ್ಟದ ಗೋಪಿನಾಥಂ ನಿಂದಲೂ ಸಹ ವಿದ್ಯಾರ್ಥಿಗಳು ಬಂದು ವ್ಯಾಸಾಂಗ ಮಾಡುತ್ತಿದ್ದಾರೆ. 22 ಕಾಲೇಜ್ ಗಳು ಸಹ ಈ ಅಂಬೇಡ್ಕರ್ ವಿವಿಯ ಅಡಿಯಲ್ಲಿ ಬರುತ್ತೆ. 7 ಸಾವಿರ ವಿದ್ಯಾರ್ಥಿಗಳು ಸಹ ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅಂತಹುದರಲ್ಲಿ ಈಗ ಇದ್ದಕ್ಕಿದ್ದಂತೆ ಅಂಬೇಡ್ಕರ್ ವಿವಿಯನ್ನ ಮೂಲ ವಿವಿಯಾದ ಮೈಸೂರು ವಿವಿಗೆ ವಿಲೀನಗೊಳಿಸಿದ್ರೆ ವಿದ್ಯಾರ್ಥಿಗಳ ಬದುಕು ಅಡ್ಡಕತ್ತರಿಗೆ ಸಿಲುಕುವಂತಾಗುತ್ತೆ ಎನ್ನುತ್ತಾರೆ ಇಲ್ಲಿನ ವಿದ್ಯಾರ್ಥಿನಿಯರು.

ಅರ್ಥಿಕ ಹೊರೆಯ ನೆಪವೊಡ್ಡುತ್ತಿರುವ ರಾಜ್ಯ ಸರ್ಕಾರ ಒಂದು ವೇಳೆ ಚಾಮರಾಜನಗರದ ಅಂಬೇಡ್ಕರ್ ವಿವಿಯನ್ನ ಮೈಸೂರಿನ ಮಾನಸ ಗಂಗೊತ್ರಿ ಮೂಲ ವಿವಿಗೆ ವಿಲೀನ ಮಾಡಿದ್ದೇ ಆದಲ್ಲಿ ಸಾವಿರಾರು ವಿದ್ಯಾರ್ಥಿಗಳು ಅಂತಂತ್ರಕ್ಕೆ ಸಿಲುಕುವಂತಾಗೊದ್ರಲ್ಲಿ ಎರಡು ಮಾತಿಲ್ಲ. ಉನ್ನತ ಶಿಕ್ಷಣ ಸಚಿವರ ಆ ಒಂದು ಮಾತು ವಿದ್ಯಾರ್ಥಿಗಳ ಪಾಲಿಗೆ ಮುಳುವಾಗುವುದಂತೂ ಸುಳ್ಳಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ