ಕಾಂಗ್ರೆಸ್ ಕಳ್ಳರು, ಭ್ರಷ್ಟಾಚಾರಿಗಳು, ಭಯೋತ್ಪಾದಕರ ಪಾರ್ಟಿ: ನಳಿನ್ ಕುಮಾರ್ ಕಟೀಲ್ ವಾಗ್ದಾಳಿ
ಕಾಂಗ್ರೆಸ್ ಕಳ್ಳರು, ಭ್ರಷ್ಟಾಚಾರಿಗಳು, ಭಯೋತ್ಪಾದಕರ ಪಾರ್ಟಿ ಎಂದು ರಾಜ್ಯ ಬಿಜೆಪಿ ಘಟಕ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ವಾಗ್ದಾಳಿ ಮಾಡಿದರು.
ಚಾಮರಾಜನಗರ: ಕಾಂಗ್ರೆಸ್ ಕಳ್ಳರು, ಭ್ರಷ್ಟಾಚಾರಿಗಳು, ಭಯೋತ್ಪಾದಕರ ಪಾರ್ಟಿ ಎಂದು ರಾಜ್ಯ ಬಿಜೆಪಿ ಘಟಕ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್(Nalin Kumar Kateel) ವಾಗ್ದಾಳಿ ಮಾಡಿದರು. ಪ್ರಕೋಷ್ಟಗಳ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿ, ಸ್ವಾತಂತ್ರ್ಯ ಸಿಕ್ಕ ಮೇಲೆ ಕಾಂಗ್ರೆಸ್ ವಿಸರ್ಜನೆ ಮಾಡಬೇಕೆಂದು ಮಹಾತ್ಮ ಗಾಂಧಿ ಹೇಳಿದ್ದರು. ಯಾಕೆಂದರೆ ಕಾಂಗ್ರೆಸ್ ಆಡಳಿತ ಮಾಡಿದರೆ ರಾಮರಾಜ್ಯ ನಿರ್ಮಾಣ ಆಗಲ್ಲ, ರಾವಣನ ರಾಜ್ಯ ನಿರ್ಮಾಣ ಆಗುತ್ತೆ ಅಂತ ಅವರಿಗೆ ಗೊತ್ತಿತ್ತು. ಇಂದಿರಾಗಾಂಧಿ ಕಾಲಾವಧಿಯಲ್ಲಿ ಭಯೋತ್ಪಾದನೆ ಆರಂಭವಾಯಿತು. ಆಗ ಬಾಂಬ್ನ ಕಾರ್ಖಾನೆಗಳು ಆರಂಭವಾದವು. ಭ್ರಷ್ಟಾಚಾರದ ಪಿತಾಮಹ ಕಾಂಗ್ರೆಸ್, ಪರ್ಸಂಟೇಜ್ ಅಂದ್ರೆ ಕಾಂಗ್ರೆಸ್ ಎಂದು ಕಟೀಲ್ ತೀವ್ರವಾಗಿ ಕಿಡಿಕಾರಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಜೈಲಿಗೆ ಹೋಗ್ತಾರೆ
ಲಾಲ್‌ಬಹದ್ದೂರು ಶಾಸ್ತ್ರಿ ಹೊರತುಪಡಿಸಿ ನೆಹರುಯಿಂದ ಹಿರಿದು ಮನಮೋಹನ್ ಸಿಂಗ್ವರಗಿನ ಕಾಂಗ್ರೆಸ್ ಪ್ರಧಾನ ಮಂತ್ರಿಗಳ ಕಾಲದಲ್ಲಿ ಅತಿ ಹೆಚ್ಚು ಹಗರಣಗಳು ನಡೆದಿವೆ. ಆರೋಪ ಮಾಡಿದ್ದ ಕೆಂಪಣ್ಣ ದಾಖಲೆ ನೀಡಲಾಗದೆ ಜೈಲಿಗೆ ಹೋಗಿದ್ರು. ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಜೈಲಿಗೆ ಹೋಗ್ತಾರೆ. ಜೈಲಿಗೆ ಹೋಗುವ ಭಯದಿಂದಲೇ ಲೋಕಾಯುಕ್ತ ಮುಚ್ಚಿಸಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಇಂದಿರಾಗಾಂಧಿಗೂ ಮಹಾತ್ಮ ಗಾಂಧಿಗೂ ಏನ್ ಸಂಬಂಧ?
ಇಂದಿರಾಗಾಂಧಿಗೂ ಮಹಾತ್ಮ ಗಾಂಧಿಗೂ ಏನ್ ಸಂಬಂಧ? ಇಂದಿರಾಗಾಂಧಿ ಪತಿ ಹೆಸರು ಫಿರೋಜ್‌ಖಾನ್. ಹಾಗಿದ್ರೆ ಅವರ ಹೆಸರಿನ ಮುಂದೆ ಖಾನ್ ಬರಬೇಕು. ರಾಜೀವ್ ಗಾಂಧಿ ಹೆಸರು ರಾಜೀವ್ ಖಾನ್ ಆಗಬೇಕು. ರಾಹುಲ್‌ಗಾಂಧಿ ಹೆಸರು ರಾಹುಲ್‌ಖಾನ್ ಆಗಬೇಕಿತ್ತು. ಆದರೆ ಗಾಂಧಿ ಪರಿವಾರದ ಹೆಸರಿನಲ್ಲಿ ರಾಷ್ಟ್ರ ಭಕ್ತಿ ಮೆರೆಯುತ್ತಿದ್ದಾರೆ ಎಂದು ನಳೀನ್‌ಕುಮಾರ್ ವ್ಯಂಗ್ಯ ಮಾಡಿದ್ದಾರೆ.
ಸಾವರ್ಕರ್ ಫೋಟೋ ಹಾಕಿದ್ದನ್ನು ಸಮರ್ಥಿಸಿಕೊಂಡ ನಳೀನ್‌ಕುಮಾರ್
ಸುವರ್ಣಸೌಧದಲ್ಲಿ ಸಾವರ್ಕರ್ ಫೋಟೋ ಅಲ್ಲದೇ ಭಯೋತ್ಪಾದಕರ ಫೋಟೋ ಹಾಕಬೇಕಿತ್ತಾ ಎಂದು ಕಾಂಗ್ರೆಸ್ ಟೀಕೆಗೆ ನಳಿನ್‌ಕುಮಾರ್ ಕಟೀಲ್ ಕೆಂಡಾಮಂಡಲವಾಗಿದ್ದಾರೆ. ಸಾವರ್ಕರ್ ಫೋಟೋ ಹಾಕಿದ್ದನ್ನು ಸಮರ್ಥಿಸಿಕೊಂಡರು. ಸಾವರ್ಕರ್ ದೇಶಭಕ್ತ. ನಾವು ರಾಷ್ಟ್ರಭಕ್ತರ ಪರವಾಗಿ ವಾದ ಮಾಡುತ್ತೇವೆ. ಆದ್ರೆ ಕಾಂಗ್ರೆಸ್‌ನವರು ರಾಷ್ಟ್ರ ವಿರೋಧಿಗಳ ಪರವಾಗಿ ವಾದ ಮಾಡ್ತಾರೆ. ಕುಕ್ಕರ್ ಹಿಡಿದುಕೊಂಡು ಬಂದವನ ಪರವಾಗಿ ವಾದ ಮಾಡುತ್ತಾರೆ ಎಂದರು.
ಇದನ್ನೂ ಓದಿ: ನಳಿನ್ ಕುಮಾರ್ ಕಟೀಲು ಓರ್ವ ಭಯೋತ್ಪಾದಕ: ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿ
ಉತ್ತರ ಕರ್ನಾಟಕ ಕಡೆಗಣನೆ ಆರೋಪ
ಉತ್ತರ ಕರ್ನಾಟಕದ ಬಗ್ಗೆ ವಿಧಾನಸಭೆಯಲ್ಲಿ ಕಡೆಗಣನೆ ಬಗ್ಗೆ ಸತೀಶ್ ಜಾರಕಿಹೊಳಿ ಆರೋಪ ವಿಚಾರವಾಗಿ ಅವರು ಮಾತನಾಡಿ, ಚರ್ಚೆಗೆ ಅವರೇ ಅವಕಾಶ ಕೊಡಬೇಕು. ಹೊರಗಡೆ ನಿಂತು ಮಾತನಾಡುವುದಲ್ಲ. ಸತೀಶ್ ಜಾರಕಿಹೊಳಿ ಒಬ್ಬ ಜವಬ್ದಾರಿಯುತ ಶಾಸಕ. ಸತೀಶ್ ಜಾರಕಿಹೊಳಿ ಉತ್ತರ ಕರ್ನಾಟಕದ ಬಗ್ಗೆ ಏನು ಮಾತನಾಡಿದ್ದಾರೆ. ಅವರು ವಿಧಾನಸಭೆಯಲ್ಲಿ ಮಾತನಾಡಬೇಕು. ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಮಾಡಬೇಕು ಅವರು ಅವಕಾಶ ಕೇಳಿಲ್ಲ. ಅವಕಾಶ ಸಿಕ್ಕಾಗ ಕಾಂಗ್ರೆಸ್ ನವರು ಬೀದಿಯಲ್ಲಿ ಹೋರಾಟ ಮಾಡುತ್ತಾರೆ. ವಿಧಾನಸಬೆಯಲ್ಲಿ ಅವಕಾಶ ಸಿಕ್ಕಾಗ ಅವರು ಮಾತನಾಡಲ್ಲ. 4 ವರ್ಷದಿಂದ ಯಾವ ಜನಪರ ಹೋರಾಟ ಮಾಡಿದ್ದಾರೆ. ಅವಕಾಶ ಸಿಕ್ಕಾಗ ಚರ್ಚೆ ಮಾಡದೇ ಕಾಂಗ್ರೆಸ್‌ನವರು ಪಲಾಯನವಾದ ಮಾಡ್ತಿದ್ದಾರೆ ಎಂದು ಹೇಳಿದರು.
ರಾಜ್ಯದ ಮತಷ್ಟು ಸುದ್ದಿಗಳನ್ನು ಓದಲು ಓದಲು ಇಲ್ಲಿ ಕ್ಲಿಕ್ ಮಾಡಿ.