ಬೆಳಗಾವಿ ಕುಕ್ಕರ್ ಒಡೆದರೆ ಕೇವಲ ಅದೊಂದು ಕುಟುಂಬ ಒಡೆಯುತ್ತೆ, ಮಂಗಳೂರು ಕುಕ್ಕರ್ ಒಡೆದರೆ ದೇಶವೇ ಸಿಡಿಯುತ್ತೆ -ನಳಿನ್ ಕುಮಾರ್ ಕಟೀಲು ವ್ಯಾಖ್ಯಾನ
ಭ್ರಷ್ಟಾಚಾರಕ್ಕೆ ಅತಿ ಹೆಚ್ಚು ಆದ್ಯತೆ ಕೊಟ್ಟಿದ್ದು ಕಾಂಗ್ರೆಸ್. ಮೋದಿ ಬಂದ ಮೇಲೆ ಭ್ರಷ್ಟಾಚಾರ ಇಲ್ಲವಾಗಿದೆ. ರಾಜ್ಯದ ಕಾಂಗ್ರೆಸ್ ಅಧ್ಯಕ್ಷರೇ ಬೇಲ್ ಮೇಲಿದ್ದಾರೆ. ಸಿಬಿಐ ರೈಡ್ ಆದರೆ ಪ್ರತಿಭಟನೆ ಮಾಡುತ್ತಾರೆ.
ಭಟ್ಕಳ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ವಿರುದ್ಧ ರಾಜ್ಯ ಬಿಜೆಪಿ ಘಟಕ ಅಧ್ಯಕ್ಷ ನಳಿನ್ ಕುಮಾರ್ ಕಟೀಲು(Nalin Kumar Kateel) ವಾಗ್ದಾಳಿ ನಡೆಸಿದ್ದಾರೆ. ಬೆಳಗಾವಿ ಕುಕ್ಕರ್, ಮಂಗಳೂರು ಕುಕ್ಕರ್ ಒಂದೇ ಎಂದುಕೊಂಡಿದ್ದಾರೆ. ಬೆಳಗಾವಿ ಕುಕ್ಕರ್ ಒಡೆದರೆ ಕೇವಲ ಕುಟುಂಬ ಒಡೆಯುತ್ತೆ. ಮಂಗಳೂರು ಕುಕ್ಕರ್ ಒಡೆದರೆ ದೇಶ ಒಡೆಯುತ್ತೆ ಅಂತಾ ಗೊತ್ತಿಲ್ಲ. ದೇಶ ವಿರೋಧಿಗಳ ಬೆಂಬಲಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ನಿಲ್ಲುತ್ತಾರೆ. ಅದಕ್ಕಾಗಿಯೇ ಕಾಂಗ್ರೆಸ್ ಭಯೋತ್ಪಾದಕ ಪಾರ್ಟಿಯಾಗಿದೆ ಎಂದು ನಳಿನ್ ಕುಮಾರ್ ಕಟೀಲು ವಾಗ್ದಾಳಿ ನಡೆಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರದಲ್ಲಿ ನಡೆದ ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ರಾಜ್ಯ ಬಿಜೆಪಿ ಘಟಕ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಡಿಕೆಶಿ ವಿರುದ್ಧ ಕಿಡಿಕಾರಿದ್ದಾರೆ. ಉಗ್ರನ ಎನ್ ಕೌಂಟರ್ ಮಾಡಿದಾಗ ಕಾಂಗ್ರೆಸ್ ರಾಷ್ಟ್ರೀಯ ಮುಖಂಡರೊಬ್ಬರು ಕಣ್ಣೀರು ಹಾಕ್ತಾರೆ. ಆದ್ರೆ ಸೈನಿಕರು ಸತ್ತಾಗ ಇವರು ಕಣ್ಣೀರು ಹಾಕುವುದಿಲ್ಲ. ಭ್ರಷ್ಟಾಚಾರಕ್ಕೆ ಅತಿ ಹೆಚ್ಚು ಆದ್ಯತೆ ಕೊಟ್ಟಿದ್ದು ಕಾಂಗ್ರೆಸ್. ಮೋದಿ ಬಂದ ಮೇಲೆ ಭ್ರಷ್ಟಾಚಾರ ಇಲ್ಲವಾಗಿದೆ. ರಾಜ್ಯದ ಕಾಂಗ್ರೆಸ್ ಅಧ್ಯಕ್ಷರೇ ಬೇಲ್ ಮೇಲಿದ್ದಾರೆ. ಸಿಬಿಐ ರೈಡ್ ಆದರೆ ಪ್ರತಿಭಟನೆ ಮಾಡುತ್ತಾರೆ. ನರೇಂದ್ರ ಮೋದಿ, ಅಮಿತ್ ಶಾ ಮೇಲೆ ದೂರು ದಾಖಲಾದಾಗ ಹೋರಾಟ ಮಾಡಲಿಲ್ಲ. ಕಾನೂನಿನ ಮೂಲಕ ಗೆಲುವನ್ನ ಪಡೆದರು. ಆದರೆ ಕಾಂಗ್ರೆಸ್ಗೆ ಸಂವಿಧಾನದ ಮೇಲೆಯೇ ನಂಬಿಕೆ ಇಲ್ಲವಾಗಿದೆ. ಡಿಕೆ ಶಿವಕುಮಾರ್ ರೌಡಿಸಂ ರಾಜಕಾರಣ ಬಿಟ್ಟು ಭಯೋತ್ಪಾದಕ ರಾಜಕಾರಣ ಪ್ರಾರಂಭಿಸಿದ್ದಾರೆ ಎಂದರು.
ಇದನ್ನೂ ಓದಿ: ರೈಲ್ವೆ ನಿಲ್ದಾಣದಲ್ಲಿ ಈ ಚಳಿಯಲ್ಲೂ ಕಷ್ಟದ ಜೀವನ ನಡೆಸುತ್ತಿರುವ ವಲಸೆ ಕಾರ್ಮಿಕರು
ಕಾಂಗ್ರೆಸ್ ಮತ ಬ್ಯಾಂಕಿನ ಆಸೆಯಲ್ಲಿ ಭೌತಿಕವಾಗಿ ದಿವಾಳಿಯಾಗಿದೆ. ಈ ದೇಶದಲ್ಲಿ ಯಾವ ವಿಷಯಕ್ಕೆ ಬೆಂಬಲವಾಗಿ ಇರಬೇಕು ಯಾವುದಕ್ಕೆ ಬೆಂಬಲವಾಗಿ ನಿಲ್ಲಬೇಕು ಎಂಬ ಮಾನಸಿಕತೆಯಿಂದ ಇನ್ನೂ ಹೊರಬಂದಿಲ್ಲ. ಕಾಂಗ್ರೆಸ್ ಕೇವಲ ಸಾವರ್ಕರ್ ವಿಷಯದಲ್ಲಿ ಮಾತ್ರ ವಿರೋಧ ಮಾಡುತ್ತಿಲ್ಲ. ದೇಶದ ನಮ್ಮ ಭದ್ರತೆ ವಿಷಯದಲ್ಲಿ ಪ್ರಶ್ನೆ ಮಾಡುತ್ತೆ ಸೈನಿಕರು, ವಿದೇಶಿ ನೀತಿಗಳ ಬಗ್ಗೆ ಪ್ರಶ್ನೆ ಮಾಡುತ್ತೆ. ಎಲ್ಲವನ್ನೂ ವಿರೋಧ ಮಾಡಿ ಕಾಂಗ್ರೆಸ್ ಭೌತಿಕ ದಿವಾಳಿಯಾಗಿದೆ ಎಂದು ಕಾಂಗ್ರೆಸ್ ವಿರುದ್ಧ ಕಟೀಲ್ ಕುಡುಗಿದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:29 pm, Tue, 20 December 22