ಚಾಮರಾಜನಗರ, ನವೆಂಬರ್ 21: ಗಡಿ ಜಿಲ್ಲೆ ಚಾಮರಾಜನಗರದಲ್ಲಿ (Chamarajanagar) ಸರ್ಕಾರಿ ಶಾಲೆಗಳ (Government Schools) ದುಸ್ಥಿತಿ ಒಂದೆರಡಲ್ಲ. ಈ ನಡುವೆ ಜಿಲ್ಲೆಯಲ್ಲಿ 10 ಕ್ಕೂ ಹೆಚ್ಚು ಶತಮಾನ ಪೂರೈಸಿದ ಸರ್ಕಾರಿ ಶಾಲೆಗಳಿವೆ. ಅದಷ್ಟೇ ಅಲ್ಲದೆ ಸಾವಿರಕ್ಕೂ ಹೆಚ್ಚು ಶಾಲಾ ಕೊಠಡಿಗಳ ದುರಸ್ತಿ ನಡೆಯಬೇಕಿದೆ. ಖಾಸಗಿಯವರ ನೆರವಿನ ಮೂಲಕ ಶಾಲೆಗಳ ದುರಸ್ತಿ ಮಾಡುವ ವಿನೂತನ ಕಾರ್ಯಕ್ಕೆ ಜಿಲ್ಲಾಡಳಿತ ಮುಂದಾಗಿದೆ.
ಜಿಲ್ಲೆಯಲ್ಲಿ ಶತಮಾನ ಪೂರೈಸಿದ ಹಾಗೂ ಶಿಥಿಲಾವಸ್ಥೆಯಲ್ಲಿರುವ ಶಾಲೆ ಹಾಗೂ ಕೊಠಡಿಗಳ ದುರಸ್ತಿಗೆ ಖಾಸಗಿ ಪ್ರಯೋಜಕತ್ವದಲ್ಲಿ ಮಾಡುವ ಪ್ರಯೋಗಕ್ಕೆ ಜಿಲ್ಲಾಡಳಿತ ಮುಂದಾಗಿದೆ. ಸದ್ಯ ಈ ಯೋಜನೆಗೆ ಚಾಮರಾಜನಗರದ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇದೀಗ ಈ ಶಾಲೆಯ ಅಭಿವೃದ್ಧಿಗೆ ಖಾಸಗಿ ಸಂಸ್ಥೆಯೊಂದು ಮುಂದೆ ಬಂದಿದೆ. ಇಂಟೆಕ್ ಸಂಸ್ಥೆಯ ಅಧಿಕಾರಿಗಳು ಈ ಶಾಲೆಯ ದುರಸ್ತಿಗೆ ಈಗಾಗ್ಲೇ ಪ್ಲ್ಯಾನ್ ಸಿದ್ದಪಡಿಸಿದ್ದಾರೆ. ಈ ಶಾಲೆಗೆ ಈಗಾಗ್ಲೇ 118 ವರ್ಷ ಪೂರೈಸಿದೆ.ಶಾಲೆಯ ಪಾರಂಪರಿಕತೆ ಉಳಿಸಿಕೊಳ್ಳುವ ಜೊತೆಗೆ ಹಳೆಯ ಮಾದರಿಯಲ್ಲಿ ಶಾಲೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ದುರಸ್ತಿ ಕಾರ್ಯಕ್ಕೆ ಸಿದ್ದತೆ ನಡೆದಿದೆ.ಖಾಸಗಿ ಸಂಸ್ಥೆಗಳ ಸಿಎಸ್ಆರ್ ನಿಧಿ ಮೂಲಕ ಹಣ ತೊಡಗಿಸಲು ಚಿಂತನೆ ನಡೆದಿದೆ.
ಇನ್ನೂ ಈ ಶಾಲೆಯ ದುರಸ್ತಿ ಖಾಸಗಿ ನೆರವಿನ ಮೂಲಕ ಯಶಸ್ವಿಯಾದ್ರೆ ಜಿಲ್ಲೆಯಲ್ಲಿರುವ ಎಲ್ಲಾ ಶತಮಾನ ಪೂರೈಸಿರುವ ಶಾಲೆಗಳ ಜೊತೆಗೆ ಜಿಲ್ಲೆಯಲ್ಲಿ ಎಷ್ಟು ಶಾಲೆಗಳ ಕೊಠಡಿ ದುರಸ್ತಿ ಅಗತ್ಯವಿದೆಯೋ ಅಷ್ಟು ಕಟ್ಟಡಗಳನ್ನು ದುರಸ್ತಿ ಮಾಡುವ ಚಿಂತನೆ ಕೂಡ ಜಿಲ್ಲಾಡಳಿತ ಮುಂದಿದೆ.ಜಿಲ್ಲೆಯಲ್ಲೂ ಕೂಡ ಸಾಕಷ್ಟು ಸಂಖ್ಯೆಯಲ್ಲಿ ಗ್ರಾನೈಟ್ ಕಾರ್ಖಾನೆ ಹಾಗೂ ಕೈಗಾರಿಕೆಗಳಿದೆ.ಇವರೆಲ್ಲರ ಜೊತೆಗೆ ಶೀಘ್ರದಲ್ಲೇ ಸಭೆ ನಡೆಸಿ ಜಿಲ್ಲೆಯ ಆರೋಗ್ಯ, ಶಿಕ್ಷಣ,ಆಸ್ಪತ್ರೆ ದುರಸ್ತಿಗೆ ಅಗತ್ಯವಿರುವ ಕಡೆ ಖಾಸಗೀಯವರ ಸಿಎಸ್ಆರ್ ನಿಧಿ ಮೂಲಕ ಸಾಮಾಜಿಕ ಕಾರ್ಯಕ್ಕೆ ಬಳಸಿಕೊಂಡು ಜಿಲ್ಲೆಯ ಶಾಲೆಗಳ ಕಟ್ಟಡ ದುರಸ್ತಿಗೆ ಮುಂದಾಗ್ತಿವಿ ಅಂತಾರೆ ಡಿಸಿ ಶಿಲ್ಪಾನಾಗ್.
ಇದನ್ನೂ ಓದಿ: ರಾಜಧಾನಿ ಬೆಂಗಳೂರಿನ ಜನರೇ ನೀವು ಕಾವೇರಿ ನೀರನ್ನ ಕುಡಿಯುತ್ತಿದ್ದೀರಾ? ಹಾಗಿದ್ರೆ ಮಿಸ್ ಮಾಡ್ದೆ ಈ ಸ್ಟೋರಿ ಓದಿ
ಒಟ್ನಲ್ಲಿ ಸರ್ಕಾರಿ ಶಾಲೆಯ ಮಕ್ಕಳು ಗುಣಮಟ್ಟದ ಶಿಕ್ಷಣ ಕೊರತೆಯಿಂದ ಖಾಸಗಿ ಶಾಲೆಗಳತ್ತ ಮುಖ ಮಾಡ್ತಿದ್ದಾರೆ. ಜಿಲ್ಲೆಯಲ್ಲಿ ವಿಧ್ಯಾರ್ಥಿಗಳ ಶೂನ್ಯ ದಾಖಲಾತಿಯಿಂದ 14 ಶಾಲೆ ಮುಚ್ಚಿದೆ. ಇದನ್ನೆಲ್ಲಾ ಅರಿತು ಶಾಲೆಯ ಕಟ್ಟಡ ದುರಸ್ತಿ ಜೊತೆಗೆ ಗುಣಮಟ್ಟದ ಶಿಕ್ಷಣ ಕೊಡುವತ್ತ ಗಮನಹರಿಸಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ