Chamarajanagar: ಕಲುಷಿತ ಆಹಾರ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥ ಪ್ರಕರಣ: ವಸತಿ ಶಾಲೆಯ ಪ್ರಿನ್ಸಿಪಾಲ್ ಸಸ್ಪೆಂಡ್
ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಯಡವನಹಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಜು.18 ರಂದು ಕಲುಷಿತ ಆಹಾರ ಸೇವಿಸಿ ಒಟ್ಟು 24 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿಂದಂತೆ ಇದೀಗ ವಸತಿ ಶಾಲೆಯ ಪ್ರಿನ್ಸಿಪಾಲ್ ಅವರನ್ನು ಅಮಾನತು ಮಾಡಲಾಗಿದೆ.
ಚಾಮರಾಜನಗರ, ಜು.20: ಜಿಲ್ಲೆಯ ಗುಂಡ್ಲುಪೇಟೆ(Gundlupet) ತಾಲೂಕಿನ ಯಡವನಹಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆ (Morarji Desai Residential School) ಯಲ್ಲಿ ಜು.18 ರಂದು ಕಲುಷಿತ ಆಹಾರ ಸೇವಿಸಿ ಒಟ್ಟು 24 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿಂದಂತೆ ಯಡವನಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಿನ್ಸಿಪಾಲ್ ಆಗಿರುವ ಕುಮಾರಸ್ವಾಮಿ ಎನ್ನುವವರನ್ನ ಅಮಾನತು ಮಾಡಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಿಇಒ ಡಾ.ನವೀನ್‌ಕುಮಾರ್ ಆದೇಶ ಹೊರಡಿಸಿದ್ದಾರೆ. ಇನ್ನು ಕಲುಷಿತ ಆಹಾರ ಸೇವಿಸಿ ಅಸ್ವಸ್ಥಗೊಂಡಿದ್ದ ವಿದ್ಯಾರ್ಥಿಗಳನ್ನು ಬೇಗೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿತ್ತು.
ವಿದ್ಯಾರ್ಥಿಗಳಿಗೆ ಸಮರ್ಪಕ ಊಟ ವಸತಿ ನೀಡದ ಆರೋಪ
ಇನ್ನು ವಸತಿ ನಿಲಯದ ಶುಚಿತ್ವ, ಆಹಾರ ಸಾಮಾಗ್ರಿಗಳ ನಿರ್ವಹಣೆಯಲ್ಲಿ ಕರ್ತವ್ಯ ಲೋಪ ಆರೋಪ ಕೇಳಿಬಂದಿತ್ತು. ವಿದ್ಯಾರ್ಥಿಗಳಿಗೆ ಸಮರ್ಪಕ ಊಟ ವಸತಿ ನೀಡದೇ, ಜೊತೆಗೆ ವಸತಿ ನಿಲಯ ಪಾಲಕರ ಪ್ರಭಾರವನ್ನು ಬೇರೆ ಶಿಕ್ಷಕರಿಗೆ ವಹಿಸದೆ ಪ್ರಾಂಶುಪಾಲ ತಾವೇ ನಿರ್ವಹಿಸುತ್ತಿದ್ದರು. ಅದರಂತೆ ಭಾನುವಾರ ರಾತ್ರಿ ಊಟ ಸೇವಿಸಲು ಬಂದ ಮಕ್ಕಳು, ಇವತ್ತು ಊಟದಲ್ಲಿ ಉಪ್ಪು, ಕಾರ ಕಡಿಮೆಯಿದೆಯೆಂದು ಹೇಳಿ ಹಾಕಿಸಿಕೊಂಡಿದ್ದಾರೆ. ಬಳಿಕ ಹೊಟ್ಟೆ ನೋವು, ವಾಂತಿ ಸುರುವಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿತ್ತು.
ಇದನ್ನೂ ಓದಿ:Kalaburagi News: ಬಾಡಿಗೆ ಶಿಕ್ಷಕಿ ಮೂಲಕ ಮಕ್ಕಳಿಗೆ ಪಾಠ ಮಾಡಿಸಿದ ಶಿಕ್ಷಕ ಅಮಾನತು
ದಾವಣಗೆರೆ ಜಿಲ್ಲೆಯಲ್ಲೂ ಮಕ್ಕಳಿಗೆ ಕಳಪೆ ಆಹಾರ ಆರೋಪ
ದಾವಣಗೆರೆ: ಜಿಲ್ಲೆಯ ಜಗಳೂರು ತಾಲೂಕಿನ ಮೆದಗಿನಕೆರೆ ಗ್ರಾಮದ ಬಳಿ ಇರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲೂ ಮಕ್ಕಳಿಗೆ ಕಳಪೆ ಆಹಾರ ನೀಡುತ್ತಿರುವ ಆರೋಪ ಕೇಳಿಬಂದಿದೆ. ಈ ಹಿನ್ನಲೆ ಪಾಲಕರಿಂದ ದೂರು ಬರುತ್ತಿದ್ದಂತೆ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿದ್ದ ಜಿಲ್ಲಾ ಸಮಾಜ ಇಲಾಖೆ ಕಲ್ಯಾಣಾಧಿಕಾರಿ ನಾಗರಾಜ್ ‘ ಹಲವಾರು ದಿನಗಳಿಂದ ಮಕ್ಕಳಿಗೆ ಗುಣ ಮಟ್ಟಣದ ಆಹಾರ ನೀಡುತ್ತಿಲ್ಲ. ಎಲ್ಲಿ ನೋಡಿದರಲ್ಲಿ ಕಳಪೆ ತರಕಾರಿ ಹಾಗೂ ದವಸ ದಾನ್ಯ ಬಳಸುವುದು ಕಂಡು ಬರುತ್ತಿದೆ ಎಂದು ಪಾಲಕರ ಆರೋಪಿಸಿದ್ದಾರೆ. ದೂರು ಬಂದ ಹಿನ್ನೆಲೆ ಮಕ್ಕಳ ಜೊತೆಗೆ ಪ್ರತ್ಯಕವಾಗಿ ಮಾತಾಡಿ ಮಾಹಿತಿ ಸಂಗ್ರಹಿಸಿದ್ದು, ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ