ಚಾಮರಾಜನಗರ, ಮಾ.07: ಕಳೆದ ಭಾನುವಾರ ಟಿವಿ9, ಚಾಮರಾಜನಗರ(Chamarajanagar) ಜಿಲ್ಲೆಯ ಹನೂರು ತಾಲೂಕಿನ ಪಾಲಾರ್ ಗ್ರಾಮಸ್ಥರು ಹನಿ ನೀರಿಗಾಗಿ ಪರದಾಡುವ ವರದಿ ಬಿತ್ತರಿಸಿತ್ತು. ಪಾಲಾರ್ ಗ್ರಾಮದ ಮಹಿಳೆಯರು ಕುಡಿಯಲು ನೀರು ತರಲು ಕಿಲೋ ಮೀಟರ್ ಗಟ್ಟಲೇ ಕಾಡಿನ ದುರ್ಗಮ ಪ್ರದೇಶದಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಕಾಡು ಪ್ರಾಣಿಗಳ ಭಯದಲ್ಲೇ ಬತ್ತಿದ ನದಿಯಲ್ಲಿ ಮರಳನ್ನ ತೋಡಿ ಅದರಲ್ಲಿ ಬರುವ ನೀರನ್ನ ತೆಗೆದು ಸೋಸಿ ಕುಡಿಯುವ ದೃಶ್ಯ ಕರಳು ಕಿವುಚುವಂತಿತ್ತು. ಈ ಕುರಿತು ಟಿವಿ9, ಬಿಟ್ಟು ಬಿಡದೆ ವರದಿ ಮಾಡಿತ್ತು. ಟಿವಿ9 ವರದಿ ಪ್ರಸಾರ ಮಾಡಿದ ಬೆನ್ನಲ್ಲೇ ಈಗ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಗ್ರಾಮಸ್ಥರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದೆ.
ಪಾಲಾರ್ ಗ್ರಾಮಕ್ಕೆ ಜಲ ಜೀವನ್ ಮಿಷನ್ ಅಡಿಯಲ್ಲಿ ನಲ್ಲಿ ವ್ಯವಸ್ಥೆ ಮಾಡಿದರೂ ಅದಕ್ಕೆ ಕನೆಕ್ಷನ್ ನೀಡಿಲ್ಲ. ಆ ನಲ್ಲಿಗಳಲ್ಲಿ ಒಂದೇ ಒಂದು ಹನಿ ನೀರು ಬರುತ್ತಿರಲಿಲಲ್ಲ, ಮತ್ತೊಂದೆಡೆ ಬೋರ್ವೆಲ್ನಲ್ಲಿ ನೀರು ಬರುತ್ತಿಲ್ಲ. ಈ ಕುರಿತು ಭಾನುವಾರ ಟಿವಿ9 ಸುದ್ದಿ ಬಿತ್ತರಿಸಿತ್ತು. ಈ ವರದಿ ಬಿತ್ತರವಾದ ಬೆನ್ನಲ್ಲೇ ಈಗ ಜಿಲ್ಲಾಡಳಿತ ಪಾಲಾರ್ ಗ್ರಾಮಕ್ಕೆ ಭೇಟಿ ನೀಡಿ ಬೋರ್ವೆಲ್ ಸರಿ ಪಡಿಸಿದ್ದು, ಬೋರ್ವೆಲ್ನಲ್ಲಿ ನೀರು ಬರುವಂತೆ ಮಾಡಿದ್ದಾರೆ.
ಇದನ್ನೂ ಓದಿ: ಕೃಷ್ಣಾ ನದಿ ಕೂಗಳತೆ ದೂರದಲ್ಲೇ ನೀರಿಗಾಗಿ ಪರದಾಟ; ಜನಪ್ರತಿನಿಧಿಗಳ ವಿರುದ್ದ ಆಕ್ರೋಶ ಹೊರ ಹಾಕುತ್ತಿರುವ ಗ್ರಾಮಸ್ಥರು
ಟ್ಯಾಂಕರ್ ಮುಖಾಂತರ ನೀರು ಪೂರೈಸಿ, ಕೊಳಾಯಿಗಳಲ್ಲಿ ನೀರು ಬರುವಂತೆ ಮಾಡಿದೆ. ನೀರು ಬರುತ್ತಿದ್ದಂತೆ ಪಾಲಾರ್ ಜನತೆ ಖುಷಿ ಪಟ್ಟಿದ್ದು ಟಿವಿ9 ವರದಿ ಈಗ ಪಲಶೃತಿ ನೀಡಿದೆ. ಅದೇನೆ ಹೇಳಿ ಕಾಡಿನ ಮಕ್ಕಳು ಕುಡಿಯುವ ನೀರಿಗೆ ಪರಿತಪಿಸುವ ಪರಿಸ್ಥಿತಿ ಟಿವಿ9 ವರದಿಯಿಂದ ಬದಲಾಗಿದೆ. ಗ್ರಾಮಸ್ಥರಿಗೆ ಕುಡಿಯುವ ನೀರಿನ ಸೌಕರ್ಯ ಸಿಕ್ಕಿದೆ. ಟಿವಿ9 ವರದಿಯಿಂದ ಕಾಡಿನ ದುರ್ಗಮ ಪ್ರದೇಶದಲ್ಲಿ ಕಿಲೋ ಮೀಟರ್ ತಿರುಗುವುದಕ್ಕೆ ಬ್ರೇಕ್ ಬಿದ್ದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ