ಕೊಳ್ಳೆಗಾಲದ ಒಂಟಿ ಮಹಿಳೆ ಅನುಮಾನಸ್ಪದ ಸಾವು ಪ್ರಕರಣ ದಿನಕ್ಕೊಂದು ತಿರುವು ಪಡೆದು ಕೊಳ್ಳುತ್ತಿದೆ. ತಾಯಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದ ವೇಳೆ, ಇತ್ತ ಜೊತೆಗಿದ್ದ ಮಗಳು ಮಿಸ್ ಆಗಿದ್ದಳು. ತಾಯಿಯನ್ನ ಕೊಂದಂತೆ ಮಗಳ ಕಥೆಯನ್ನೂ ಮುಗಿಸಿದ್ದರಾ ಎಂಬ ಅನುಮಾನ ಮೂಡಿತ್ತು. ಆದ್ರೆ ಕಾಣೆಯಾಗಿದ್ದ ಬಾಲಕಿ ಈಗ ಪತ್ತೆಯಾಗಿದ್ದು ಆ ಬಾಲಕಿ ಹೇಳಿದ ಸ್ಪೋಟಕ ಸತ್ಯ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.
ಹೌದು ಕೊಳ್ಳೆಗಾಲ ಒಂಟಿ ಮಹಿಳೆಯ ಹತ್ಯೆ ಪ್ರಕರಣಕ್ಕೆ ಸಂಬಂಧಟ್ಟಂತೆ ದಿನಕಳೆದಂತೆ ರೋಚಕ ಟ್ವಿಸ್ಟ್ ಸಿಗ್ತಾಯಿದೆ. ಅತ್ತ ತಾಯಿ ರೇಖಾ ಸತ್ತು ಶವವಾಗಿದ್ರೆ ಇತ್ತ ರೇಖಾಳ ಪುತ್ರಿ ಮನ್ವಿತಾ ಮಿಸ್ಸಿಂಗ್ ಆಗಿದ್ಲು. ಅತ್ತ ಮಗಳನ್ನ ಕಳೆದು ಕೊಂಡು ಇತ್ತ ಮೊಮ್ಮಗಳ ಜಾಡು ಸಿಗದೆ ರೇಖಾಳ ಪೋಷಕರು ತಲೆ ಮೇಲೆ ಕೈ ಹೊತ್ತು ಕುಳಿತಿದ್ರು. ಮನ್ವಿತಾ ನಾಪತ್ತೆಯಾದ ವಿಚಾರ ಹಾಗೂ ರೇಖಾ ಅನುಮಾನಸ್ಪದವಾಗಿ ಸಾವನ್ನಪ್ಪಿದ ಸುದ್ದಿ ಕಾಡ್ಗಿಚ್ಚಿನಂತೆ ಹರಡುತ್ತಿದ್ದಂತೆ ಚಾಮರಾಜನಗರ ಬಾಲ ಮಂದಿರದಿಂದ ಕೊಳ್ಳೆಗಾಲ ಪೊಲೀಸರಿಗೆ ಮನ್ವಿತಾಳ ಕುರಿತು ಸುದ್ದಿ ಮುಟ್ಟಿಸಲಾಗಿದೆ. ಮನ್ವಿತಾಳನ್ಪ ತಾಯಿ ರೇಖಾಳೆ 5ನೇ ತಾರಿಖೀನಂದು ಚಾಮರಾಜನಗರದ ಬಾಲ ಮಂದಿರಕ್ಕೆ ತಂದು ಸೇರಿಸಿರುವ ವಿಚಾರವೀಗ ಬೆಳಕಿಗೆ ಬಂದಿದೆ.
ತಾಯಿ ರೇಖಾಳೇ ಯಾಕೆ ಮಗಳನ್ನ ಬಾಲಮಂದಿರಕ್ಕೆ ಸೇರಿಸಿದ್ಲು ಎಂದು ಸ್ವತಃ ಮನ್ವಿತಾಳೆ ಟಿವಿ9 ಕ್ಯಾಮರ ಮುಂದೆ ಮಾತನಾಡಿದ್ದಾಳೆ. ತಾಯಿ ರೇಖಾಳಿಗೆ ನಾಗೇಂದ್ರ ಏನೆಲ್ಲಾ ಟಾರ್ಚರ್ ಕೊಡ್ತಾಯಿದ್ದ, ಮಗು ಅಂತಾನೂ ನೋಡ್ದೆ ಹೇಗೆ ಧಮ್ಕಿ ಆಗ್ತಾಯಿದ್ದ ಅನ್ನೊ ವಿಚಾರವೀಗ ಈ ಪುಟ್ಟ ಕಂದನ ಬಾಯಿಯಿಂದ ರಿವೀಲ್ ಆಗಿದೆ.
ಇದನ್ನೂ ಓದಿ: ಕೊಳ್ಳೇಗಾಲ ಒಂಟಿ ಮಹಿಳೆ ಹತ್ಯೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್, ತಾಯಿಯ ಕೊಂದು ಮಗಳನ್ನು ಅಪಹರಿಸಿದನಾ ಪ್ರಿಯಕರ?
ಅಸಲಿಗೆ ನಾಗೇಂದ್ರ ಕಂಠಪೂರ್ತಿ ಕುಡ್ದು ರೇಖಾಳ ಮನೆಗೆ ಬರ್ತಾಯಿದ್ನಂತೆ. ಬಂದವನೆ ಕಬಾಬ್ ಹಾಗೂ ಬಿರಿಯಾನಿ ಮಾಡು ಅಂತ ಹೇಳ್ತಾಯಿದ್ನಂತೆ. ಆಗಾಗ ಹಣ ಬೇಕೆಂದು ರೇಖಾಗೆ ಪೀಡಿಸುವ ಜೊತೆಗೆ ಮನ ಬಂದಂತೆ ಬಡಿತಾಯಿದ್ನಂತೆ. ಈ ವಿಚಾರ ಹೊರಗೆ ಯಾರಿಗಾದ್ರು ಹೇಳಿದ್ರೆ ಮೂಟೆ ಕಟ್ಟಿ ಹೊಳೆಗೆ ಎಸೆಯುತ್ತೇನೆಂದು ಬೆದರಿಸ್ಥಾಯಿದ್ನಂತೆ. ಇದರಿಂದ ಮನ ನೊಂದ ರೇಖಾ ಎಲ್ಲಿ ತನ್ನ ಮಗಳಿಗೆ ನಾಗೇಂದ್ರ ಏನಾದ್ರು ಮಾಡಿಬಿಡ್ತಾನೋ ಎಂಬ ಭಯದ ಮೇಲೆ ಸ್ವತಃ ರೇಖಾಳೇ 5ನೇ ತಾರೀಖು ಮಗುವನ್ನ ಬಾಲಮಂದಿರಕ್ಕೆ ತಂದು ಸೇರಿಸಿದ್ದಾಳೆ.
ಇದನ್ನೂ ಓದಿ: ಮಗು ಅಳುವ ಕಾರಣಕ್ಕೆ ಪತ್ನಿಯ ಕೊಂದು ರಾತ್ರಿ ಹೆಣದ ಜೊತೆ ಕಾಲ ಕಳೆದ, ಬೆಳಗಾನೆದ್ದು ಆತ್ಮಹತ್ಯೆ ಎಂದು ಬಿಂಬಿಸಿದ್ದ
ಅದೇನೆ ಹೇಳಿ ಅತ್ತ ಎರಡು ವರ್ಷದ ಹಿಂದೆ ತಂದೆಯನ್ನ ಕಳೆದುಕೊಂಡು ತಾಯಿಯ ಆಸರೆಯಲ್ಲಿದ್ದ ಕಂದಮ್ಮ ಈಗ ತಾಯಿಯನ್ನು ಕಳೆದುಕೊಂಡು ಅನಾಥಳಾಗಿದ್ದಾಳೆ. ಅಜ್ಜಿ-ತಾತನ ಆಶ್ರಯ ಪಡೆದಿದ್ದಾಳೆ. ಅತ್ತ ದುರುಳ ನಾಗೇಂದ್ರ ತಲೆ ಮರೆಸಿಕೊಂಡಿದ್ದು ಹಂತಕನಿಗಾಗಿ ಜಾಲ ಬೀಸಿದೆ. ಇವೆಲ್ಲದರ ಮಧ್ಯೆ 6 ವರ್ಷದ ಕಂದಮ್ಮ ತನ್ನವರು ಅಂತಾ ಯಾರೂ ಇಲ್ಲದೆ ಹೋದರೆ ಎಂದು ಪರಿತಪ್ಪಿಸುತ್ತಿರುವುದು ನಿಜಕ್ಕೂ ದುರಂತವೇ ಸರಿ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:44 am, Wed, 20 December 23