ಕೊಳ್ಳೇಗಾಲ ಒಂಟಿ ಮಹಿಳೆ ಹತ್ಯೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್, ತಾಯಿಯ ಕೊಂದು ಮಗಳನ್ನು ಅಪಹರಿಸಿದನಾ ಪ್ರಿಯಕರ?

ಈಗ ಸದ್ಯಕ್ಕೆ ಪ್ರಶ್ನೆ ಉಳಿದಿರುವುದು ತಾಯಿ ರೇಖಾ ಸಾವನ್ನಪ್ಪಿದ್ದಾರೆ, ಆದ್ರೆ ಮಗಳು ಮನ್ವಿತಾ ಕಿಡ್ನ್ಯಾಪ್ ಆಗಿದ್ದಾಳಾ, ಅಥವಾ ಕೊಲೆಯಾಗಿದ್ದಾಳಾ ಎಂಬುದೆ ಈಗ ಯಕ್ಷ ಪ್ರಶ್ನೆ. ಇವೆಲ್ಲದಕ್ಕೂ ಉತ್ತರ ಸಿಗಬೇಕಿದ್ರೆ ಕೊಳ್ಳೇಗಾಲ ಪೊಲೀಸರು ಆರೋಪಿ ನಾಗೇಂದ್ರನನ್ನ ಬಂಧಿಸಬೇಕಿದೆ.

ಕೊಳ್ಳೇಗಾಲ ಒಂಟಿ ಮಹಿಳೆ ಹತ್ಯೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್, ತಾಯಿಯ ಕೊಂದು ಮಗಳನ್ನು ಅಪಹರಿಸಿದನಾ ಪ್ರಿಯಕರ?
ಕೊಳ್ಳೇಗಾಲ ಒಂಟಿ ಮಹಿಳೆ ಹತ್ಯೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್, ಮಗಳು ಏನಾದಳು?
Follow us
TV9 Web
| Updated By: ಸಾಧು ಶ್ರೀನಾಥ್​

Updated on:Dec 20, 2023 | 10:24 AM

ಕೊಳ್ಳೇಗಾಲ ಒಂಟಿ ಮಹಿಳೆ ರೇಖಾ ಅನುಮಾನಸ್ಪದ ಸಾವು ಪ್ರಕರಣ ದಿನ ಕಳೆದಂತೆ ಹೊಸ ತಿರುವು ಪಡೆದು ಕೊಳ್ಳುತ್ತಿದೆ. ಅತ್ತ ತಾಯಿ ಸತ್ತು ಶವವಾಗಿದ್ರೆ – ಇತ್ತ 6 ವರ್ಷದ ಮಗಳು ಮಿಸ್ಸಿಂಗ್ ಆಗಿದ್ದಾಳೆ. ತಾಯಿಯನ್ನ ಕೊಂದು ಮಗಳನ್ನ ಅಪಹರಿಸಿದನಾ ಪ್ರಿಯಕರ ಎಂಬ ಪ್ರಶ್ನೆ ಈಗ ಎಲ್ಲರನ್ನ ಕಾಡುತ್ತಾ ಇದೆ. ಈ ಕುರಿತಾದ ಒಂದು ರಿಪೋರ್ಟ್ ನಿಮ್ಮ ಮುಂದೆ.

ಕೊಳ್ಳೇಗಾಲ ಒಂಟಿ ಮಹಿಳೆಯ ಅನುಮಾನಸ್ಪದ ಸಾವು ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಮೊನ್ನೆ ಶನಿವಾರ ಸಂಜೆ ಕೊಳ್ಳೆಗಾಲದ ಆದರ್ಶನಗರದಲ್ಲಿ ಕೊಳೆತ ಸ್ಥಿತಿಯಲ್ಲಿ ತಾಯಿ ರೇಖಾಳ ಮೃತ ದೇಹ ಪತ್ತೆಯಾದ್ರೆ ಇತ್ತ 6 ವರ್ಷದ ಮಗಳು ಮನ್ವಿತ ಈಗ ಮಿಸ್ಸಿಂಗ್ ಆಗಿದ್ದಾಳೆ. ಅಸಲಿಗೆ ರೇಖಾಳ ಸಾವಿನ ಪ್ರಕರಣ ಬೆಳಕಿಗೆ ಬಂದಿದ್ದೆ ಬಲು ರೋಚಕ.

ಕಳೆದ ಒಂದು ವಾರದಿಂದ ಮಗಳು ಮಾನ್ವಿತ ಶಾಲೆಗೆ ಗೈರು ಹಾಜರಾಗಿದ್ದಳು. ಈ ಕುರಿತು ಮಾಹಿತಿ ತಿಳಿಯಲು ಶಾಲೆಯ ಶಿಕ್ಷಕ ರೇಖಾಳಿಗೆ ಕರೆ ಮಾಡಿದ್ರು. ಆದ್ರೆ ಎಷ್ಟೇ ಕರೆ ಮಾಡಿದ್ರು ರೇಖಾ ಫೋನ್ ರಿಸೀವ್ ಮಾಡಿರಲಿಲ್ಲ. ಇದರಿಂದ ಖುದ್ದು ಶಿಕ್ಷಕ ಮನೆಗೆ ಭೇಟಿ ಕೊಟ್ಟು ಮಾಹಿತಿ ಪಡೆಯಲು ಮುಂದಾಗಿದ್ದ. ಯಾವಾಗ ಶಿಕ್ಷಕ ಮನೆಗೆ ಭೇಟಿ ಕೊಟ್ನೊ ಆಗ ರೇಖಾಳ ಸಾವಿನ ಪ್ರಕರಣ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಮಗು ಅಳುವ ಕಾರಣಕ್ಕೆ ಪತ್ನಿಯ ಕೊಂದು ರಾತ್ರಿ ಹೆಣದ ಜೊತೆ ಕಾಲ ಕಳೆದ, ಬೆಳಗಾನೆದ್ದು ಆತ್ಮಹತ್ಯೆ ಎಂದು ಬಿಂಬಿಸಿದ್ದ

ಅಸಲಿಗೆ ರೇಖಾಳ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಕೆಇಬಿ ಲೈನ್ ಮ್ಯಾನ್ ನಾಗೇಂದ್ರ ನ ವಿಚಾರ ರೇಖಾಳ ಪತಿ ಸುನೀಲ್ ಗೆ ತಿಳಿದಿತ್ತು. ಈ ವಿಚಾರ ತಿಳಿದ ಸುನೀಲ್ ಆತ್ಮಹತ್ಯೆ ಮಾಡಿಕೊಂಡಿದ್ಧ. ಆಗಿನಿಂದಲೂ ರೇಖಾ ಜೊತೆ ನಾಗೇಂದ್ರ ಲವ್ವಿ ಡವ್ವಿ ಮುಂದುವರೆಸಿದ್ದ. ಆದ್ರೆ ರೇಖಾಳನ್ನ ಮದ್ವೆ ಆಗ್ತೀನಿ ಎಂದು ಹೇಳಿ ಕೊಂಡಿದ್ದ ನಾಗೇಂದ್ರ ಕೊಳ್ಳೆಗಾಲದಲ್ಲಿ ಪ್ರತ್ಯೇಕವಾದ ಮನೆ ಮಾಡಿ ಇಟ್ಟಿದ್ದ. ಆದ್ರೆ ಕೆಲದಿನಗಳ ಹಿಂದೆ ರೇಖಾ ಮತ್ತು ನಾಗೇಂದ್ರ ಮಧ್ಯೆ ಕಿರಿಕ್ ಆಗಿತ್ತು. ಜಗಳ ವಿಕೋಪಕ್ಕೆ ತಿರುಗಿದ ಪರಿಣಾಮ ನಾಗೇಂದ್ರ ರೇಖಾಳನ್ನ ಕೊಂದು, ಬಳಿಕ 6 ವರ್ಷದ ಮಗಳು ಮನ್ವಿತಾಳನ್ನ ಅಪಹರಿಸಿದ್ದಾನೆ ಎಂಬ ವಿಚಾರ ಈಗ ಬೆಳಕಿಗೆ ಬಂದಿದೆ.

ಈಗ ಸದ್ಯಕ್ಕೆ ಪ್ರಶ್ನೆ ಉಳಿದಿರುವುದು ತಾಯಿ ರೇಖಾ ಸಾವನ್ನಪ್ಪಿದ್ದಾರೆ, ಆದ್ರೆ ಮಗಳು ಮನ್ವಿತಾ ಕಿಡ್ನ್ಯಾಪ್ ಆಗಿದ್ದಾಳಾ, ಅಥವಾ ಕೊಲೆಯಾಗಿದ್ದಾಳಾ ಎಂಬುದೆ ಈಗ ಯಕ್ಷ ಪ್ರಶ್ನೆ ಕಾಣ್ತಾಯಿದೆ. ಇವೆಲ್ಲದಕ್ಕೂ ಉತ್ತರ ಸಿಗಬೇಕಿದ್ರೆ ನಾಗೇಂದ್ರನ ಬಂಧನ ಆಗ್ಬೇಕಿದೆ. ಪೊಲೀಸರ ಇನ್ವೆಷ್ಟಿಗೇಷನ್ ಈ ಎಲ್ಲಾ ಪ್ರಶ್ನೆಗೆ ಉತ್ತರ ನೀಡಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:55 pm, Mon, 18 December 23

Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ