ರೇಷನ್ ಕಾರ್ಡ್ ಕೆವೈಸಿ ಮಾಡುವಾಗ ಕೈ ಕೈ ಮಿಲಾಯಿಸಿದ ಜನರು: ಇಬ್ಬರಿಗೆ ಗಾಯ

| Updated By: ಗಂಗಾಧರ​ ಬ. ಸಾಬೋಜಿ

Updated on: Jul 15, 2023 | 4:35 PM

ಕೆವೈಸಿ ಮಾಡಿಸಲು ಗ್ರಾಮ ಪಂಚಾಯಿತಿಗೆ ಬಂದ ವೃದ್ಧನನ್ನು ಸರತಿ ಸಾಲಿನಲ್ಲಿ ನಿಲ್ಲಿಸದೆ ನೆರವಾಗಿ ಒಳಗೆ ಕರೆದುಕೊಂಡು ಹೋದ ವ್ಯಕ್ತಿಯ ಮೇಲೆ ಎಂಟಕ್ಕೂ ಹೆಚ್ಚು ಜನರಿಂದ ಹಲ್ಲೆ ಮಾಡಿರುವಂತಹ ಘಟನೆ ಹನೂರು ತಾಲೂಕಿ ದಿನ್ನಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ನಡೆದಿದೆ.

ರೇಷನ್ ಕಾರ್ಡ್ ಕೆವೈಸಿ ಮಾಡುವಾಗ ಕೈ ಕೈ ಮಿಲಾಯಿಸಿದ ಜನರು: ಇಬ್ಬರಿಗೆ ಗಾಯ
ಕೆವೈಸಿ ವೇಳೆ ಗಲಾಟೆ
Follow us on

ಚಾಮರಾಜನಗರ: ರೇಷನ್ ಕಾರ್ಡ್ (ration card) ಕೆವೈಸಿ ಮಾಡುವಾಗ ಜನರು ಕೈ ಕೈ ಮಿಲಾಯಿಸಿರುವಂತಹ ಘಟನೆ ಹನೂರು ತಾಲೂಕಿ ದಿನ್ನಹಳ್ಳಿ ಗ್ರಾಮದ ಪಂಚಾಯಿತಿಯಲ್ಲಿ ಇಂದು ಬೆಳಗ್ಗೆ 8.45 ಸುಮಾರಿಗೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವಾಟರ್ ಮೆನ್​ ಸುರೇಶ್ ಹಾಗೂ ರಾಮ್ ಕುಮಾರ್ ಎಂಬುವವರಿಗೆ ಗಾಯಗಳಾಗಿವೆ. ಕೆವೈಸಿ ಮಾಡುವಾಗ ಜನರನ್ನು ಸಾಲಿನಲ್ಲಿ ನಿಲ್ಲಿಸುತ್ತಿದ್ದ ಸುರೇಶ್​ ಓರ್ವ ವಯೋವೃದ್ಧ ಬಂದಾಗ ಆತನನ್ನ ಒಳಗೆ ಕರೆದುಕೊಂಡು ಹೋಗಲು ಮುಂದಾಗಿದ್ದಾರೆ.

ಈ ವೇಳೆ ಅಲ್ಲೇ ಸಾಲಿನಲ್ಲಿದ್ದ ಕೆವರಿಂದ ಗಲಾಟೆ ಮತ್ತು ಹಲ್ಲೆ ಮಾಡಲಾಗಿದೆ. ನಾವು ಸಾಲಲ್ಲಿ ನಿಂತಿದ್ದೇವೆ. ನೀವು ಕರೆದುಕೊಂಡು ಹೋದರೆ ಹೇಗೆ ಎಂದು ಈ ವೇಳೆ ಸುರೇಶ್ ಮೇಲೆ ಎಂಟಕ್ಕೂ ಹೆಚ್ಚು ಜನರಿಂದ ಹಲ್ಲೆ ಮಾಡಲಾಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Gruha Lakshmi Scheme: ಗೃಹಲಕ್ಷ್ಮೀ ಯೋಜನೆ ಜಾರಿಗೆ ಪ್ರಜಾಪ್ರತಿನಿಧಿ ನೇಮಕಕ್ಕೆ ಸರ್ಕಾರ ನಿರ್ಧಾರ: ಮಾರ್ಗಸೂಚಿ ಪ್ರಕಟ

ಗಲಾಟೆ ಬಿಡಿಸಲು ತೆರಳಿದ್ದ ರಾಮ್ ಕುಮಾರ್ ಮತ್ತು ತಂದೆ ನಾಗು ನಾಯ್ಕಗೂ ಜನರು ಥಳಿಸಿದ್ದಾರೆ. ಅಲೀಂ, ಸೌಕತ್, ಕಾಲು, ಮತ್ತೋರ್ವ ಸೌಕತ್, ಸಹೇಲ್, ಸಮೀವುಲ್ಲಾ ಎನ್ನುವವರುವ ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿದ್ದು, ಹಲ್ಲೆಗೊಳಗಾದ ರಾಮ್ ಕುಮಾರ್ ಹಾಗೂ ಸುರೇಶ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ.

ಇದನ್ನೂ ಓದಿ: ಗೃಹಲಕ್ಷ್ಮೀ ಯೋಜನೆಗೆ ಯಾವಾಗಿನಿಂದ ಅರ್ಜಿ ಸಲ್ಲಿಕೆ? ಯಾರು ಅರ್ಹರು? ಹೇಗೆ ಸಲ್ಲಿಸಬೇಕು? ಸಂಪೂರ್ಣ ಮಾಹಿತಿ ನೀಡಿದ ಲಕ್ಷ್ಮೀ ಹೆಬ್ಬಾಳ್ಕರ್​

ಕೆವೈಸಿ ಮಾಡುವ ಯಂತ್ರ ಕೂಡ ಧ್ವಂಸ ಮಾಡಿದ್ದು ಕೆವೈಸಿ ಕಾರ್ಯ ಕೂಡ ಸ್ಥಗಿತವಾಗಿದೆ. ರಾಮಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಪಕ್ರರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.