AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೃಹಲಕ್ಷ್ಮೀ ಯೋಜನೆಗೆ ಯಾವಾಗಿನಿಂದ ಅರ್ಜಿ ಸಲ್ಲಿಕೆ? ಯಾರು ಅರ್ಹರು? ಹೇಗೆ ಸಲ್ಲಿಸಬೇಕು? ಸಂಪೂರ್ಣ ಮಾಹಿತಿ ನೀಡಿದ ಲಕ್ಷ್ಮೀ ಹೆಬ್ಬಾಳ್ಕರ್​

ಗೃಹಲಕ್ಷ್ಮೀ ಯೋಜನೆಗೆ ಯಾವಾಗಿನಿಂದ ಅರ್ಜಿ ಸಲ್ಲಿಕೆ? ಯಾರು ಅರ್ಹರು? ಹೇಗೆ ಸಲ್ಲಿಸಬೇಕು? ಎನ್ನುವುದನ್ನು ಸ್ವತಃ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಸುದ್ದಿಗೋಷ್ಠಿ ನಡೆಸಿ ಸಂಪೂರ್ಣ ಮಾಹಿತಿ ನೀಡಿದ್ದಾರೆ. ​

ಗೃಹಲಕ್ಷ್ಮೀ ಯೋಜನೆಗೆ ಯಾವಾಗಿನಿಂದ ಅರ್ಜಿ ಸಲ್ಲಿಕೆ? ಯಾರು ಅರ್ಹರು? ಹೇಗೆ ಸಲ್ಲಿಸಬೇಕು? ಸಂಪೂರ್ಣ ಮಾಹಿತಿ ನೀಡಿದ ಲಕ್ಷ್ಮೀ ಹೆಬ್ಬಾಳ್ಕರ್​
ಲಕ್ಷ್ಮಿ ಹೆಬ್ಬಾಳ್ಕರ್
ಕಿರಣ್​ ಹನಿಯಡ್ಕ
| Edited By: |

Updated on: Jul 15, 2023 | 11:50 AM

Share

ಬೆಂಗಳೂರು, (ಜುಲೈ 15): ಮನೆ ಯಜಮಾನಿಗೆ 2000 ರೂ. ನೀಡುವ ಕಾಂಗ್ರೆಸ್ ಸರ್ಕಾರದ ಮತ್ತೊಂದು ಗ್ಯಾರಂಟಿಯಾಗಿರುವ ಗೃಹ ಲಕ್ಷ್ಮೀ ಯೋಜನೆಗೆ (Gruha Lakshmi Scheme) ಜುಲೈ 17 ಅಥವಾ 19ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಸ್ಪಷ್ಟಪಡಿಸಿದ್ದಾರೆ. ಇಂದು (ಜುಲೈ 15) ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್, ‘ಗೃಹಲಕ್ಷ್ಮೀ’ಗೆ ಚಾಲನೆ ನೀಡಲು ರಾಷ್ಟ್ರೀಯ ನಾಯಕರಿಗೆ ಆಹ್ವಾನ ನೀಡಲಾಗಿದೆ. ಈ ಸಂಬಂಧ ರಾಷ್ಟ್ರೀಯ ನಾಯಕರಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದು, ಆಗಸ್ಟ್​ 16 ಅಥವಾ 17ರಂದು ಯಜಮಾನಿ ಖಾತೆಗೆ 2000 ರೂ. ಹಣ ಹಾಕುತ್ತೇವೆ ಎಂದು ಸ್ಪಷ್ಟಪಡಿಸಿದರು.

ಫಲಾನುಭವಿಗಳ ನೋಂದಣಿ ಜುಲೈ 17 ಅಥವಾ ಜುಲೈ 19 ರಿಂದ ಆರಂಭವಾಗಲಿದೆ. ಪಡಿತರ ಚೀಟಿಯಲ್ಲಿ ಯಜಮಾನಿ ಮಹಿಳೆ ಎಂದು ಗುರುತಿಸಿರುವ ಮಹಿಳೆ ಯೋಜನೆಯ ಫಲಾನುಭವಿಯಾಗಿರುತ್ತಾರೆ. ಫಲಾನುಭವಿ ಮಹಿಳೆ ಅಥವಾ ಆಕೆಯ ಪತಿ ಆದಾಯ ತೆರಿಗೆ ಅಥವಾ ಜಿಎಸ್​ಟಿ ಪಾವತಿದಾರರಾಗಿರತಕ್ಕದ್ದಲ್ಲ. ರೇಷನ್ ಕಾರ್ಡ್​ನಲ್ಲಿ ಗುರುತಿಸಲಾಗಿರುವ ಪ್ರತಿಯೊಬ್ಬ ಯಜಮಾನಿ ಮಹಿಳೆಗೂ ದಿನಾಂಕ, ಸಮಯ ಮತ್ತು ನೋಂದಣಿ ಸ್ಥಳದ ವಿವರ ಎಸ್​ಎಂಎಸ್ ಮೂಲಕ ರವಾನೆ ಮಾಡಲಾಗುವುದು. ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ವನ್ ಕೇಂದ್ರ ಅಥವಾ ಬಾಪೂಜಿ ಸೇವಾ ಕೇಂದ್ರದಲ್ಲಿ ನೋಂದಣಿಗೆ ಅವಕಾಶ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

‘ಗೃಹಲಕ್ಷ್ಮೀ’ಯೋಜನೆಗೆ ನೋಂದಣಿಗೆ ಪಡಿತರ ಚೀಟಿ ಸಂಖ್ಯೆ, ಆಧಾರ್ ಕಾರ್ಡ್ ಸಂಖ್ಯೆ, ಬ್ಯಾಂಕ್ ಖಾತೆಯ ಪಾಸ್ ಬುಕ್ ಅಗತ್ಯ. ಒಂದು ವೇಳೆ ಆಧಾರ್ ನಂಬರ್ ಜೋಡಣೆಯಾಗಿರುವ ಬೇರೆ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಬಯಸಿದಲ್ಲಿ ಆ ಖಾತೆಯ ಪಾಸ್ ಬುಕ್ ಅಗತ್ಯ. ಗ್ರಾಮ ವನ್, ಬಾಪೂಜಿ ಕೇಂದ್ರ, ಕರ್ನಾಟಕ ವನ್, ಬೆಂಗಳೂರು ವನ್ ಕೇಂದ್ರಗಳಲ್ಲಿ ನೋಂದಾಯಿಸಿಕೊಂಡಾಗ ಮಂಜೂರಾತಿ ಪತ್ರ ನೀಡಲಾಗುತ್ತದೆ. ಪ್ರಜಾಪ್ರತಿನಿಧಿ ಮೂಲಕ ನೊಂದಾಯಿಸಿಕೊಂಡಲ್ಲಿ ಮಂಜೂರಾತಿ ಪತ್ರ ಮನೆಗೆ ತಲುಪಿಸಲಾಗುವುದು. ಅರ್ಜಿದಾರರು ನೀಡಿದ ಮೊಬೈಲ್ ಸಂಖ್ಯೆಗೆ ಎಸ್ ಎಂಎಸ್ ಮೂಲಕ ಮಂಜೂರಾತಿ ಸಂದೇಶ ರವಾನೆ ಮಾಡಲಾಗುತ್ತದೆ. ಫಲಾನುಭವಿಯ ಆಧಾರ್ ಜೋಡಣೆಯಾಗಿರುವ ಖಾತೆಗೆ ಡಿಬಿಟಿ ಮೂಲಕ ಹಣ ಜಮೆ ಮಾಡುತ್ತೇವೆ. ಬೇರೆ ಖಾತೆಗೆ ಆರ್ ಟಿಜಿಎಸ್ ಮೂಲಕ ಹಣ ಜಮೆ ಮಾಡಲಾಗುತ್ತದೆ. ನೋಂದಣಿಗೆ ಯಾವುದೇ ಶುಲ್ಕ, ಯಾವುದೇ ಅಂತಿಮ ದಿನಾಂಕ ಮತ್ತು ಸಮಯ ನಿಗದಿಪಡಿಸಿಲ್ಲ ಎಂದು ಹೇಳಿದರು.

ಫಲಾನುಭವಿಯು ನೋಂದಣಿಗೆ ನಿಗದಿ ಮಾಡಿರುವ ದಿನಾಂಕ, ಸಮಯ ಮತ್ತು ಸ್ಥಳದ ಮಾಹಿತಿಗೆ 1902 ಸಂಖ್ಯೆಗೆ ಕರೆ ಮಾಡಿ ಅಥವಾ 8147500500 ಸಂಖ್ಯೆಗೆ ಎಸ್ ಎಂಎಸ್ ಮೂಲಕ ಸಂದೇಶ ಕಳುಹಿಸಿ ಮಾಹಿತಿ ಪಡೆಯಬಹುದು. ನಿಗದಿಪಡಿಸಿದ ದಿನಾಂಕದಂದು ನೋಂದಣಿಗೆ ಹೋಗಲು ಸಾಧ್ಯವಾಗದೇ ಇದ್ದಲ್ಲಿ ಅದೇ ಸೇವಾ ಕೇಂದ್ರಗಳಿಗೆ ಯಾವುದೇ ದಿನಾಂಕದಂದು ಸಂಜೆ 5 ರಿಂದ 7 ಗಂಟೆಯೊಳಗೆ ಭೇಟಿ ನೀಡಿ ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.

ಸೋನಿಯಾ ಗಾಂಧಿಯವರನ್ನು ಸಂಪರ್ಕ ಮಾಡಿದ್ದೇವೆ, ಸಿಎಂ ಕೂಡಾ ಪತ್ರ ಬರೆದಿದ್ದಾರೆ. ರಾಷ್ಟ್ರೀಯ ನಾಯಕರ ಸಮಯ ಸಿಕ್ಕಿದರೆ ಜುಲೈ 17 ಸಂಜೆ 5 ಗಂಟೆಗೆ ಯೋಜನೆ ಪ್ರಾರಂಭವಾಗುತ್ತದೆ. ಇಲ್ಲದಿದ್ದಲ್ಲಿ ಜುಲೈ 19 ರಂದು ಮುಖ್ಯಮಂತ್ರಿಗಳಿಂದ ಚಾಲನೆ ಸಿಗಲಿದೆ ಎಂದು ತಿಳಿಸಿದರು.

ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ
ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ
ಇಂದು ಈ ರಾಶಿಯವರ ವ್ಯವಹಾರಗಳಲ್ಲಿ ಯಶಸ್ಸು ಲಭಿಸಲಿದೆ
ಇಂದು ಈ ರಾಶಿಯವರ ವ್ಯವಹಾರಗಳಲ್ಲಿ ಯಶಸ್ಸು ಲಭಿಸಲಿದೆ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ