
ಬೆಂಗಳೂರು: ಚಾಮರಾಜಪೇಟೆಲ್ಲಿರುವ ಈದ್ಗಾ ಮೈದಾನ ಆಟದ ಮೈದಾನವಾಗಿಯೇ ಉಳಿಯಬೇಕು ಎಂದು ಆಗ್ರಹಿಸಿ ಚಾಮರಾಜಪೇಟೆ ನಾಗರಿಕರ ಒಕ್ಕೂಟದ ನೇತೃತ್ವದಲ್ಲಿ 50ಕ್ಕೂ ಹೆಚ್ಚು ಸಂಘಟನೆಗಳು ಬಂದ್ ನಡೆಸುತ್ತಿದ್ದು, ಶಾಂತಿಯುತ ಪ್ರತಿಭಟನಾ ರ್ಯಾಲಿ ನಡೆಯುತ್ತಿದೆ. ಬೆಳಗ್ಗೆ 8 ಗಂಟೆಯಿಂದ ಬಂದ್ ಮತ್ತು ಪ್ರತಿಭಟನೆಗಳು ಆರಂಭಗೊಂಡಿದ್ದು, ಸಂಜೆ 5 ಗಂಟೆವರೆಗೆ ಇರಲಿದೆ. ಇನ್ನೊಂದೆಡೆ ಮೈದಾನದಲ್ಲಿ ಗುಂಪಾಗಿ ನಿಂತಿದ್ದವರನ್ನ ಪೊಲೀಸರ ಚದುರಿಸುವ ಕಾರ್ಯ ನಡೆಸುತ್ತಿದ್ದಾರೆ. ಈ ವೇಳೆ ಪೊಲೀಸರ ಜೊತೆ ಸಾರ್ವಜನಿಕರ ಮಾತಿನ ಚಕಮಕಿ ನಡೆದಿದೆ. ಅದಾಗ್ಯೂ ಮೈದಾನ ಉಳಿಸಿ ಎಂದು ಘೋಷಣೆ ಕೂಗುತ್ತಿರುವ ಪ್ರತಿಭಟನಾಕಾರರು ಮೈದಾನದ ಸುತ್ತ ರ್ಯಾಲಿ ನಡೆಸುತ್ತಿದ್ದು, ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ದಾರೆ.
Published On - 10:30 am, Tue, 12 July 22