ಚಾರ್ಮಾಡಿ ಘಾಟ್ನಲ್ಲಿ ಧಗಧಗನೆ ಹೊತ್ತಿ ಉರಿದ ಕಾರು! ನಾಲ್ವರು ಬದುಕಿದ್ದೇ ಪವಾಡ
ಕೂಡಲೆ ನಾಲ್ವರು ಕಾರಿನಿಂದ ಇಳಿದು ಪ್ರಾಣ ಉಳಿಸಿಕೊಂಡಿದ್ದಾರೆ. ಮುಂಜಾನೆ 3 ಗಂಟೆ ಸಮಯದಲ್ಲಿ ಈ ಅವಘಡ ನಡೆದಿದೆ. ಸ್ಥಳಕ್ಕೆ ಬಣಕಲ್ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಘಾಟ್ನಲ್ಲಿ (Charmadi Ghat) ಮಳೆ ಮಧ್ಯೆಯೂ ಕಾರೊಂದು (Car) ಧಗಧಗನೆ ಹೊತ್ತಿ ಉರಿದಿದೆ. ಜಿಲ್ಲೆಯ ಮೂಡಿಗೆರೆ ತಾಲೂಕಿನ ಜೇನ್ ಕಲ್ ದೇವಸ್ಥಾನದ ಬಳಿ ಈ ಘಟನೆ ಸಂಭವಿಸಿದೆ. ಒಂದೇ ಕುಟುಂಬದ ನಾಲ್ವರು ಮಂಗಳೂರಿನಿಂದ ಬೆಂಗಳೂರಿಗೆ ಕಾರಿನಲ್ಲಿ ತೆರಳುತ್ತಿದ್ದರು. ಚಾರ್ಮಾಡಿ ಘಾಟ್ನಲ್ಲಿ ಹೋಗುವ ವೇಳೆ ಕಾರಿನ ಎಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೆ ನಾಲ್ವರು ಕಾರಿನಿಂದ ಇಳಿದು ಪ್ರಾಣ ಉಳಿಸಿಕೊಂಡಿದ್ದಾರೆ. ಮುಂಜಾನೆ 3 ಗಂಟೆ ಸಮಯದಲ್ಲಿ ಈ ಅವಘಡ ನಡೆದಿದೆ. ಸ್ಥಳಕ್ಕೆ ಬಣಕಲ್ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ‘ಹೆಣ್ಣು ಮಗು ಬೇಕು’: ಮನದ ಆಸೆ ತಿಳಿಸಿ, ಮಕ್ಕಳನ್ನು ನೋಡಿಕೊಳ್ಳುವುದು ಕಲಿಯುತ್ತಿರುವ ರಣಬೀರ್ ಕಪೂರ್
Latest Videos