ಚಾಮರಾಜಪೇಟೆ ಮಗು ಕಳ್ಳತನ ಪ್ರಕರಣ; ಡಿಎನ್ಎ ಟೆಸ್ಟ್ ಮೂಲಕ ಮಗುವಿನ ಪೋಷಕರನ್ನು ಪತ್ತೆ ಹಚ್ಚಿದ ಖಾಕಿ

| Updated By: ಆಯೇಷಾ ಬಾನು

Updated on: Jul 16, 2021 | 8:47 AM

ಮಗುವಿನ ಮೂಲ ತಂದೆ ತಾಯಿ ಯಾರು ಎಂದು ಪತ್ತೆ ಹಚ್ಚಲು ಪಾದರಾಯನಪುರ ದಂಪತಿಗಳಾದ ಉಸ್ಮಾಭಾನು ಹಾಗೂ ನವೀದ್ ಪಾಷಾ. ಜೊತೆಗೆ ಕೊಪ್ಪಳ ಮೂಲದ ದಂಪತಿಯನ್ನು ಡಿಎನ್ಎ‌ ಪರೀಕ್ಷೆಗೆ ಒಳಪಡಿಸಲಾಗಿದ್ದು ವರದಿ ಬಂದಿದೆ.

ಚಾಮರಾಜಪೇಟೆ ಮಗು ಕಳ್ಳತನ ಪ್ರಕರಣ; ಡಿಎನ್ಎ ಟೆಸ್ಟ್ ಮೂಲಕ ಮಗುವಿನ ಪೋಷಕರನ್ನು ಪತ್ತೆ ಹಚ್ಚಿದ ಖಾಕಿ
ನವಜಾತ ಶಿಶು ಕದ್ದ ಮಹಿಳೆ ಸ್ಕೆಚ್ ಮತ್ತು ಅಂದಿನ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ
Follow us on

ಬೆಂಗಳೂರು: ಚಾಮರಾಜಪೇಟೆ ಬಿಬಿಎಂಪಿ ಹೆರಿಗೆ ಆಸ್ಪತ್ರೆಯಿಂದ ಮಗು ಕಳ್ಳತನವಾಗಿದ್ದ(newborn baby stolen) ಪ್ರಕರಣಕ್ಕೆ ಸಂಬಂಧಿಸಿ ನಿರಂತರ ಒಂದು ವರ್ಷದ ಕಾರ್ಯಾಚರಣೆ ಬಳಿಕ ತಲಘಟ್ಟಪುರ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಆದ್ರೆ ಕಳ್ಳತನವಾಗಿದ್ದ ಮಗುವಿನ ಪೋಷಕರು ಯಾರು ಎಂಬ ಬಗ್ಗೆ ಹಲವು ಅನುಮಾನಗಳು ಮೂಡಿದ್ದವು. ಸದ್ಯ ಈಗ ಡಿಎನ್ಎ ವರದಿ ಈ ಅನುಮಾನವನ್ನು ನಿವಾರಿಸಿದೆ.

ಡಿಎನ್ಎ ಟೆಸ್ಟ್ ಮೂಲಕ ಮಗುವಿನ ಪೋಷಕರನ್ನು ಪತ್ತೆ ಹಚ್ಚಿದ ಖಾಕಿ
ಆರೋಪಿ ಮಹಿಳೆ ಸಿಕ್ಕ ಬಳಿಕ ಮಗು ಎಲ್ಲಿದೆ ಎಂಬುವುದು ಪತ್ತೆಯಾಗಿತ್ತು. ಆದ್ರೆ ಮಗುವನ್ನು ಒಂದು ವರ್ಷ ಸಾಕಿ ಬೆಳೆಸಿದ್ದ ಪೋಷಕರು ನಮ್ಮ ಮಗು ಎಂದು ಪೊಲೀಸರನ್ನು ಗೊಂದಕ್ಕೆ ತಳ್ಳಿದ್ದರು. ಹೀಗಾಗಿ ಜೂ 16 ರಂದು ಒಂದು ವರ್ಷದ ಮಗುವಿಗೆ ಡಿಎನ್ಎ ಟೆಸ್ಟ್ ಮಾಡಲಾಗಿದೆ. ಜೊತೆಗೆ ಪೊಲೀಸರು ಮಗು ಸೇರಿ ಐವರನ್ನ ಡಿಎನ್ಎ ಟೆಸ್ಟ್ಗೆ ಒಳಪಡಿಸಿದ್ದಾರೆ.

ಮಗುವಿನ ಮೂಲ ತಂದೆ ತಾಯಿ ಯಾರು ಎಂದು ಪತ್ತೆ ಹಚ್ಚಲು ಪಾದರಾಯನಪುರ ದಂಪತಿಗಳಾದ ಉಸ್ಮಾಭಾನು ಹಾಗೂ ನವೀದ್ ಪಾಷಾ. ಜೊತೆಗೆ ಕೊಪ್ಪಳ ಮೂಲದ ದಂಪತಿಯನ್ನು ಡಿಎನ್ಎ‌ ಪರೀಕ್ಷೆಗೆ ಒಳಪಡಿಸಲಾಗಿದ್ದು ವರದಿ ಬಂದಿದೆ.

ಡಿಎನ್ಎ ರಿಪೋರ್ಟ್ನಲ್ಲಿ ಉಸ್ಮಾಭಾನು ಹಾಗೂ ನವೀದ್ ಪಾಷಾ ದಂಪತಿ ಮಗು ಎಂಬುವುದು ದೃಢಪಟ್ಟಿದೆ. ಜುಲೈ 5ರಂದು ಡಿಎನ್ಎ ರಿಪೋರ್ಟ್ ಪೊಲೀಸರ ಕೈ ಸೇರಿದ್ದು ವರದಿ ಪರಿಶೀಲನೆ ನಡೆಸಿ ಕೋರ್ಟ್ಗೆ ರಿಪೋರ್ಟ್ ಸಲ್ಲಿಸಲಾಗಿದೆ. ಕೋರ್ಟ್ ಆದೇಶದಂತೆ ಕ್ರಮ ಕೈಗೊಳ್ಳಲು ಪೊಲೀಸರು ನಿರ್ಧರಿಸಿದ್ದು. ಸದ್ಯ ಕೆಲವು ದಾಖಲೆ ಪತ್ರಗಳ ತಯಾರಿ ನಡೆಸಿದ್ದಾರೆ. ಮಾನವೀಯತೆ ಮೇರೆಗೆ ವಿಶೇಷ ಪ್ರಕರಣ ಎಂದು ತ್ವರಿತವಾಗಿ ರಿಪೋರ್ಟ್ ನೀಡಲು ಸೂಚಿಸಲಾಗಿದೆ. ಸ್ಯಾಂಪಲ್ ಪಡೆದ 20 ದಿನದಲ್ಲಿ ಎಫ್ಎಸ್ಎಲ್ ತಜ್ಞರು ರಿಪೋರ್ಟ್ ನೀಡಿದ್ದಾರೆ.

ಘಟನೆ ಹಿನ್ನಲೆ
2020 ರ ಮೇನಲ್ಲಿ ಚಾಮರಾಜಪೇಟೆಯ ಬಿಬಿಎಂಪಿ ಹೆರಿಗೆ ಆಸ್ಪತ್ರೆಯಲ್ಲಿ ಆಗ ತಾನೇ ಜನ್ಮ ನೀಡಿದ್ದ ಮಗುವನ್ನು ಕಳ್ಳತನ ಮಾಡಲಾಗಿತ್ತು. ಮಹಿಳೆಯೊಬ್ಬಳು ಮಗುವನ್ನು ಎತ್ತಿಕೊಂಡು ಆಟೋದಲ್ಲಿ ಪರಾರಿಯಾಗಿದ್ದಳು. ಆರೋಪಿ ಮಹಿಳೆಯ ಸ್ಕೆಚ್ ತಯಾರಿಸಿ ನೂರಾರು ಜನರ ವಿಚಾರಣೆ ನಡೆಸಲಾಗಿತ್ತು. ನೂರಾರು ಫೋನ್ ನಂಬರ್ ಟ್ರ್ಯಾಕ್ ಮಾಡಲಾಗಿತ್ತು. ಅಲ್ಲದೆ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ, ಆರೋಪಿಯ ಪತ್ತೆಗೆ ವಿಶೇಷ ತಂಡ ರಚನೆ ಮಾಡಿದ್ದರು.

ಆರೋಪಿಯ ರೇಖಾ ಚಿತ್ರ ರಚಿಸಿ ತಲಘಟ್ಟಪುರ ಪಿಎಸ್ಐ ಶ್ರೀನಿವಾಸ್ ಮತ್ತು ತಂಡ ಕಾರ್ಯಾಚರಣೆಗೆ ಇಳಿದಿದ್ರು. ಒಂದು ವರ್ಷದ ಬಳಿಕ ಆರೋಪಿ ಸಿಕ್ಕಿದ್ದು ಮಗುವನ್ನು ಕಳ್ಳತನ ಮಾಡಿದ್ದು ಓರ್ವ ಮನೋವೈದ್ಯೆ ಎಂಬುವುದು ತಿಳಿದು ಬಂದಿದೆ. ಉತ್ತರ ಕರ್ನಾಟಕ ಮೂಲದ ಮನೋವೈದ್ಯೆಯೇ ಆಟೋದಲ್ಲಿ ಬಂದು ಮಗು ಕದ್ದು ಹೋಗಿದ್ದು 15 ಲಕ್ಷಕ್ಕೆ ಮಗು ಕೊಡೋದಾಗಿ ದುಡ್ಡು ಪಡೆದಿದ್ದರು. ಸದ್ಯ ಪೊಲೀಸರ ತಂಡ ಮಗು ರಕ್ಷಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಮೇ 29, 2020 ರಂದು ಚಾಮರಾಜಪೇಟೆ ಹೆರಿಗೆ ಆಸ್ಪತ್ರೆಯಿಂದ ಮಗು ಕಳ್ಳತನವಾಗಿದ್ದು ಮೇ 29, 2021 ರಂದು ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದರು.

ಇದನ್ನೂ ಓದಿ: ಸೆಕೆಂಡ್ ಹ್ಯಾಂಡ್ ಕಾರ್ ಖರೀದಿಸಲು ನವಜಾತ ಶಿಶುವನ್ನೇ ಮಾರಿದರು!