Karnataka Dams: ವಾಯುಭಾರ ಕುಸಿದು ಮಳೆ ಹೆಚ್ಚು, ಒಂದೊಂದೇ ಅಡಿ ನೀರಿನ ಮಟ್ಟ ಹೆಚ್ಚುತ್ತಿದೆ, 12 ಜಲಾಶಯ ನೀರಿನ ಮಟ್ಟ ಹೀಗಿದೆ

Karnataka Reservoirs: ಕೊಡಗು ಜಿಲ್ಲೆಯಾದ್ಯಂತ ಎರಡು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಭಾರೀ ಮಳೆಯ ಪರಿಣಾಮ ಹಾರಂಗಿ ಜಲಾಶಯಕ್ಕೆ ಒಳಹರಿವು ಕೂಡಾ ಹೆಚ್ಚಾಗಿರುವುದರಿಂದ ಜಲಾಶಯ ಭರ್ತಿಯಾಗಲು ಇನ್ನು ಎರಡೇ ಅಡಿ ಬಾಕಿ ಇದೆ. ಬಹುತೇಕ ಎಲ್ಲ ಜಲಾಶಗಳಲ್ಲಿಯೂ ಒಂದೊಂದೇ ಅಡಿ ನೀರಿನ ಮಟ್ಟ ಏರುತ್ತಿದೆ.

Karnataka Dams: ವಾಯುಭಾರ ಕುಸಿದು ಮಳೆ ಹೆಚ್ಚು, ಒಂದೊಂದೇ ಅಡಿ ನೀರಿನ ಮಟ್ಟ ಹೆಚ್ಚುತ್ತಿದೆ, 12 ಜಲಾಶಯ ನೀರಿನ ಮಟ್ಟ ಹೀಗಿದೆ
ಡ್ಯಾಂ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jul 23, 2021 | 9:04 AM

ಬೆಂಗಳೂರು: ಪೂರ್ವ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಇಂದು ರಾಜ್ಯಾದ್ಯಂತ ಭಾರೀ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದಿನಿಂದ ಜುಲೈ 18ರ ತನಕವೂ ರಾಜ್ಯದ ಉತ್ತರ ಒಳನಾಡು, ದಕ್ಷಿಣ ಒಳನಾಡು, ಮಲೆನಾಡು ಮತ್ತು ಕರಾವಳಿಯಲ್ಲಿ ಭಾರೀ ಮಳೆಯನ್ನು ನಿರೀಕ್ಷಿಸಲಾಗಿದೆ (Monsoon 2021).

ಕೊಡಗು ಜಿಲ್ಲೆಯಾದ್ಯಂತ ಎರಡು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಭಾರೀ ಮಳೆಯ ಪರಿಣಾಮ ಹಾರಂಗಿ ಜಲಾಶಯಕ್ಕೆ ಒಳಹರಿವು ಕೂಡಾ ಹೆಚ್ಚಾಗಿರುವುದರಿಂದ ಜಲಾಶಯ ಭರ್ತಿಯಾಗಲು ಇನ್ನು ಎರಡೇ ಅಡಿ ಬಾಕಿ ಇದೆ. ಬಹುತೇಕ ಎಲ್ಲ ಜಲಾಶಗಳಲ್ಲಿಯೂ ಒಂದೊಂದೇ ಅಡಿ ನೀರಿನ ಮಟ್ಟ ಏರುತ್ತಿದೆ.

ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ, ಬೆಳಗಾವಿ, ಧಾರವಾಡ, ಹಾವೇರಿ, ರಾಯಚೂರು, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ನಗರ ಪ್ರದೇಶಗಳಿಗೆ ಆರೇಂಜ್ ಅಲರ್ಟ್​ ಘೋಷಿಸಲಾಗಿದೆ (Weather Report). ಬಾಗಲಕೋಟೆ, ಬೀದರ್, ಗದಗ, ಕಲಬುರಗಿ, ಕೊಪ್ಪಳ, ವಿಜಯಪುರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ತುಮಕೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್​ ಘೋಷಣೆ ಮಾಡಲಾಗಿದೆ.

ರಾಜ್ಯದ ಅತಿ ದೊಡ್ಡ ಜಲಾಶಯವಾದ ಲಿಂಗನಮಕ್ಕಿ ಸೇರಿದಂತೆ ಇತರೆ ಪ್ರಮುಖ ಜಲಾಶಯಗಳಾದ ಕಾವೇರಿ ಕಣಿವೆ ಭಾಗದ ಕೆಆರ್​ಎಸ್​, ಕಬಿನಿ, ಹೇಮಾವತಿ, ಹಾರಂಗಿ ಮತ್ತು ಜಲ ವಿದ್ಯುತ್​ ಅಣೆಕಟ್ಟೆಗಳಾದ ಲಿಂಗನಮಕ್ಕಿ, ಸೂಪಾ ಮತ್ತು ಕೃಷ್ಣಾ ನದಿ ಭಾಗದ ಜಲಾಶಯಗಳಾದ ತುಂಗಭದ್ರಾ, ಭದ್ರಾ, ಘಟಪ್ರಭಾ, ಮಲಪ್ರಭಾ, ನಾರಾಯಣಪುರ, ಆಲಮಟ್ಟಿ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ?

ಕಾವೇರಿ ಕಣಿವೆ ಭಾಗದ ಜಲಾಶಯಗಳು:

1) ಕೆಆರ್​ಎಸ್​ ಜಲಾಶಯ | KRS Dam ಇಂದಿನ ನೀರಿನ ಮಟ್ಟ: 92.08 ಅಡಿ ಗರಿಷ್ಠ ಸಾಮರ್ಥ್ಯ: 124.80 ಅಡಿ

2) ಹಾರಂಗಿ ಜಲಾಶಯ | Harangi Dam ಇಂದಿನ ನೀರಿನ ಮಟ್ಟ: 2857 ಅಡಿ ಗರಿಷ್ಠ ಸಾಮರ್ಥ್ಯ: 2859 ಅಡಿ

3) ಹೇಮಾವತಿ ಜಲಾಶಯ | Hemavathi Dam ಇಂದಿನ ನೀರಿನ ಮಟ್ಟ: 2900 ಅಡಿ ಗರಿಷ್ಠ ಸಾಮರ್ಥ್ಯ: 2922 ಅಡಿ

4) ಕಬಿನಿ ಜಲಾಶಯ | Kabini Dam ಇಂದಿನ ನೀರಿನ ಮಟ್ಟ: 2279 ಅಡಿ ಗರಿಷ್ಠ ಸಾಮರ್ಥ್ಯ: 2284 ಅಡಿ

ಜಲ ವಿದ್ಯುತ್​ ಅಣೆಕಟ್ಟೆಗಳು:

5) ಲಿಂಗನಮಕ್ಕಿ ಜಲಾಶಯ | Linganamakki Dam ಇಂದಿನ ನೀರಿನ ಮಟ್ಟ: 1788 ಅಡಿ ಗರಿಷ್ಠ ಸಾಮರ್ಥ್ಯ: 1819 ಅಡಿ

6) ಸೂಪಾ ಜಲಾಶಯ | Supa Dam ಇಂದಿನ ನೀರಿನ ಮಟ್ಟ: 540 ಅಡಿ ಗರಿಷ್ಠ ಸಾಮರ್ಥ್ಯ: 564 ಅಡಿ

ಕೃಷ್ಣಾ ನದಿ ಭಾಗದ ಜಲಾಶಯಗಳು:

7) ತುಂಗಾಭದ್ರಾ ಜಲಾಶಯ | Tungabhadra Dam ಇಂದಿನ ನೀರಿನ ಮಟ್ಟ: 1611 ಅಡಿ ಗರಿಷ್ಠ ಸಾಮರ್ಥ್ಯ: 1633 ಅಡಿ

8) ಭದ್ರಾ ಜಲಾಶಯ | Bhadra Dam ಇಂದಿನ ನೀರಿನ ಮಟ್ಟ: 159 ಅಡಿ ಗರಿಷ್ಠ ಸಾಮರ್ಥ್ಯ: 186 ಅಡಿ

9) ಮಲಪ್ರಭಾ ಜಲಾಶಯ | Malaprabha Dam ಇಂದಿನ ನೀರಿನ ಮಟ್ಟ: 2140 ಅಡಿ ಗರಿಷ್ಠ ಸಾಮರ್ಥ್ಯ: 2063 ಅಡಿ

10) ಘಟಪ್ರಭಾ ಜಲಾಶಯ | Ghataprabha Dam ಇಂದಿನ ನೀರಿನ ಮಟ್ಟ: 2139 ಅಡಿ ಗರಿಷ್ಠ ಸಾಮರ್ಥ್ಯ: 2175 ಅಡಿ

11) ನಾರಾಯಣಪುರ ಜಲಾಶಯ | Narayanpur Dam ಇಂದಿನ ನೀರಿನ ಮಟ್ಟ: 492 ಮೀಟರ್ ಗರಿಷ್ಠ ಸಾಮರ್ಥ್ಯ: 492.25 ಮೀಟರ್

12) ಆಲಮಟ್ಟಿ ಜಲಾಶಯ | Almatti Dam ಇಂದಿನ ನೀರಿನ ಮಟ್ಟ: 518 ಮೀಟರ್ ಗರಿಷ್ಠ ಸಾಮರ್ಥ್ಯ: 519.69 ಮೀಟರ್

(Monsoon 2021 Karnataka 12 reservoirs and dams water level as on 16th July 2021)

Published On - 8:55 am, Fri, 16 July 21