ತಮಿಳುನಾಡು ಕರಾವಳಿಯಲ್ಲಿ ‘ಸ್ನೇಕ್ ರೈನ್’ ಬೆಂಗಳೂರು ಗಢಗಢ!
ಚೆನ್ನೈ: ಚೆನ್ನೈ ಮಹಾನಗರದಲ್ಲಿ ಬೆಳಗಿನ ಜಾವದಿಂದ ಭಾರಿ ಮಳೆಯಾಗುತ್ತಿದೆ. ತಮಿಳುನಾಡಿನ ಇತರೆ ಭಾಗಗಳಾದ ಕಾಂಚಿಪುರಂ, ವೆಲ್ಲೂರಿನಲ್ಲಿಯೂ ಭಾರಿ ಮಳೆಯಾಗುತ್ತಿದೆ. ಪುದುಚೇರಿಯಲ್ಲೂ ಮಳೆ ಬೀಳುತ್ತಿದೆ. ಮಳೆಯಾಗುತ್ತಿರುವ ಹಲವು ಪ್ರದೇಶಗಳಲ್ಲಿ ಅಂಗಡಿಗಳು ಮುಳುಗಡೆಯಾಗಿವೆ. ಹಲವೆಡೆ ಮನೆಗಳಿಗೆ ನೀರು ನುಗ್ಗಿದ್ದು, ಜನ ಪರದಾಡುವಂತಾಗಿದೆ. ಈ ಮಧ್ಯೆ, ಹಾವಿನ ಆಕಾರದಲ್ಲಿ ಚಕ್ರಸುಳಿಯಲ್ಲಿ ಮಳೆ ಚೆನ್ನೈನತ್ತ ಸುಳಿಯುತ್ತಿದೆ. ಹಾಗಾಗಿ ಇದು ಚೆನ್ನೈನಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇನ್ನು ಚೆನ್ನೈನಲ್ಲಿ ಮಳೆಯಾದ್ರೆ ಬೆಂಗಳೂರಿನಲ್ಲಿಯೂ ಮಳೆ ಆಗ್ಲೇಬೇಕು. ಹಾಗಾಗಿ ಬೆಳಗ್ಗೆಯಿಂದ ಮೋಡ ಕವಿದ […]
ಚೆನ್ನೈ: ಚೆನ್ನೈ ಮಹಾನಗರದಲ್ಲಿ ಬೆಳಗಿನ ಜಾವದಿಂದ ಭಾರಿ ಮಳೆಯಾಗುತ್ತಿದೆ. ತಮಿಳುನಾಡಿನ ಇತರೆ ಭಾಗಗಳಾದ ಕಾಂಚಿಪುರಂ, ವೆಲ್ಲೂರಿನಲ್ಲಿಯೂ ಭಾರಿ ಮಳೆಯಾಗುತ್ತಿದೆ. ಪುದುಚೇರಿಯಲ್ಲೂ ಮಳೆ ಬೀಳುತ್ತಿದೆ. ಮಳೆಯಾಗುತ್ತಿರುವ ಹಲವು ಪ್ರದೇಶಗಳಲ್ಲಿ ಅಂಗಡಿಗಳು ಮುಳುಗಡೆಯಾಗಿವೆ. ಹಲವೆಡೆ ಮನೆಗಳಿಗೆ ನೀರು ನುಗ್ಗಿದ್ದು, ಜನ ಪರದಾಡುವಂತಾಗಿದೆ.
ಈ ಮಧ್ಯೆ, ಹಾವಿನ ಆಕಾರದಲ್ಲಿ ಚಕ್ರಸುಳಿಯಲ್ಲಿ ಮಳೆ ಚೆನ್ನೈನತ್ತ ಸುಳಿಯುತ್ತಿದೆ. ಹಾಗಾಗಿ ಇದು ಚೆನ್ನೈನಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇನ್ನು ಚೆನ್ನೈನಲ್ಲಿ ಮಳೆಯಾದ್ರೆ ಬೆಂಗಳೂರಿನಲ್ಲಿಯೂ ಮಳೆ ಆಗ್ಲೇಬೇಕು. ಹಾಗಾಗಿ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ ನೆಲೆಸಿತ್ತು.
ಇದೀಗ ಅಲ್ಲಲ್ಲಿ ಮಳೆಯಾಗುತ್ತಿರುವ ವರದಿಗಳು ಬರುತ್ತಿವೆ. ಚಳಿಗಾಲದಲ್ಲಿ ಮಳೆಯಾದ್ರೆ ಚಳಿ ಕೊರೆತ ಇನ್ನೂ ತೀವ್ರವಾದೀತು. ಆದ್ರೆ ಬೆಂಗಳೂರು ಮಂದಿ ವೀಕೆಂಡ್ ಮೂಡ್ನಲ್ಲಿದ್ದು, ಹ್ಯಾಪಿ ಸ್ನೇಕ್ ರೈನ್ಸ್ ಅನ್ನುತ್ತಿದ್ದಾರೆ.
ಅರಬ್ಬೀ ಸಮುದ್ರದ ಆಗ್ನೇಯ ಭಾಗದಲ್ಲಿ ಕಡಿಮೆ ಒತ್ತಡ ಹಿನ್ನೆಲೆ ಬೆಂಗಳೂರಿನಲ್ಲಿ ನಾಳೆ, ನಾಡಿದ್ದು ಇನ್ನೂ ಹೆಚ್ಚು ಮಳೆ ಬೀಳುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನಲ್ಲಿ 3 ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನಲ್ಲಿ ಸಾಧಾರಣ, ಕರಾವಳಿ ಭಾಗದಲ್ಲೂ ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
Published On - 10:54 am, Sat, 30 November 19