Chescom: ವಿದ್ಯುತ್ ಸ್ಪರ್ಶಿಸಿ ಕಂಬದಲ್ಲಿಯೇ ನರಳಾಟ; ಗ್ರಾಮಸ್ಥರ ಸಮಯಪ್ರಜ್ಞೆಯಿಂದ ಬದುಕುಳಿದ ಲೈನ್‌ಮನ್

| Updated By: ಸಾಧು ಶ್ರೀನಾಥ್​

Updated on: Jul 01, 2021 | 9:56 AM

ಲೈನ್‌ಮನ್ ಪ್ರದೀಪ್ ವಿದ್ಯುತ್ ಟ್ರಾನ್ಸ್‌ಫಾರ್ಮರ್ ದುರಸ್ತಿಗೆ ಕಂಬವೇರಿದ್ದರು. ಈ ವೇಳೆ ವಿದ್ಯುತ್ ಶಾಕ್‌ಗೆ ಸಿಲುಕಿ ಪ್ರದೀಪ್ ಕಂಬದಲ್ಲೇ ನರಳಾಡಿದ್ದಾರೆ. ಸ್ಥಳದಲ್ಲಿದ್ದವರು ಕೂಡಲೆ ಪ್ರಾಣದ ಹಂಗು ತೊರೆದು ಕಂಬವೇರಿ, ರಕ್ಷಿಸಿದ್ದಾರೆ.

Chescom: ವಿದ್ಯುತ್ ಸ್ಪರ್ಶಿಸಿ ಕಂಬದಲ್ಲಿಯೇ ನರಳಾಟ; ಗ್ರಾಮಸ್ಥರ ಸಮಯಪ್ರಜ್ಞೆಯಿಂದ ಬದುಕುಳಿದ ಲೈನ್‌ಮನ್
Chescom: ವಿದ್ಯುತ್ ಸ್ಪರ್ಶಿಸಿ ಕಂಬದಲ್ಲಿಯೇ ನರಳಾಟ; ಗ್ರಾಮಸ್ಥರ ಸಮಯಪ್ರಜ್ಞೆಯಿಂದ ಬದುಕುಳಿದ ಲೈನ್‌ಮನ್
Follow us on

ಹಾಸನ: ವಿದ್ಯುತ್ ಕಾಮಗಾರಿಗಾಗಿ ಲೈನ್‌ಮನ್ ಕಂಬವೇರಿದ್ದಾಗ ವಿದ್ಯುತ್ ಪ್ರವಹಿಸಿ ಲೈನ್‌ಮನ್ ನರಳಾಡಿದ್ದಾರೆ. ಆದರೆ ಗ್ರಾಮಸ್ಥರ ಸಮಯಪ್ರಜ್ಞೆಯಿಂದ ಲೈನ್‌ಮನ್ ಬದುಕುಳಿದಿದ್ದಾರೆ. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕೋಗೋಡು ಗ್ರಾಮದ ಪ್ರದೀಪ್ ರಕ್ಷಿಸಲ್ಪಟ್ಟ ಲೈನ್‌ಮನ್.

ಲೈನ್‌ಮನ್ ಪ್ರದೀಪ್ ವಿದ್ಯುತ್ ಟ್ರಾನ್ಸ್‌ಫಾರ್ಮರ್ ದುರಸ್ತಿಗೆ ಕಂಬವೇರಿದ್ದರು. ಈ ವೇಳೆ ವಿದ್ಯುತ್ ಶಾಕ್‌ಗೆ ಸಿಲುಕಿ ಪ್ರದೀಪ್ ಕಂಬದಲ್ಲೇ ನರಳಾಡಿದ್ದಾರೆ. ಕೂಡಲೇ ಕೆಲ ಗ್ರಾಮಸ್ಥರು ಕಂಬವೇರಿ ಲೈನ್‌ಮನ್ ಪ್ರದೀಪನನ್ನು ರಕ್ಷಿಸಿದ್ದಾರೆ. ಸ್ಥಳದಲ್ಲಿದ್ದವರು ಕೂಡಲೆ ಪ್ರಾಣದ ಹಂಗು ತೊರೆದು ಕಂಬವೇರಿ, ರಕ್ಷಿಸಿದ್ದಾರೆ. ಜಾಗೃತೆಯಿಂದ‌ ಕಂಬದಲ್ಲಿ ಸಿಲುಕಿದ್ದ ಲೈನ್ ಮನ್​ನನ್ನು ಕೆಳಗಿಳಿಸಿದ್ದಾರೆ.

ಅಸ್ವಸ್ಥಗೊಂಡಿದ್ದ ಲೈನ್‌ಮನ್ ಪ್ರದೀಪ್​ಗೆ ಬೇಲೂರು ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಜೂನ್ 29 ರಂದು ಈ ಘಟನೆ ನಡೆದಿದೆ. ಸೂಕ್ತ ಸುರಕ್ಷತಾ ಪರಿಕರ ನೀಡದೆ ಕೆಲಸ ಮಾಡಿಸೋ ಚೆಸ್ಕಾಂ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

(Chescom lineman pradeep rescued from live pole by villagers in kogodu belur taluk)

ವಿದ್ಯುತ್​ ಅವಘಡದಿಂದ ದಂಪತಿಯನ್ನು ಪಾರು ಮಾಡಲು ಬಂದ ಪಕ್ಕದ ಮನೆಯಾತ; ಮೂವರೂ ಸಾವು