ಕೊರೊನಾ ಹೊಸ ಪ್ರಭೇದದ ಬಗ್ಗೆ ಕಟ್ಟೆಚ್ಚರವಹಿಸಿ : ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ

ವಿದೇಶದಿಂದ ಬಂದ ಕೆಲವರು ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ. ಈ ರೀತಿಯ ಬೇಜವಾಬ್ದಾರಿ ಮಾಡದೇ ತಾವಾಗಿಯೇ ಬಂದು ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಸಿಎಂ ತಿಳಿಸಿದ್ದಾರೆ.

ಕೊರೊನಾ ಹೊಸ ಪ್ರಭೇದದ ಬಗ್ಗೆ ಕಟ್ಟೆಚ್ಚರವಹಿಸಿ : ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
Follow us
sandhya thejappa
| Updated By: ಸಾಧು ಶ್ರೀನಾಥ್​

Updated on: Dec 30, 2020 | 12:35 PM

ಬೆಂಗಳೂರು: ಕೊರೊನಾ ಹೊಸ ಪ್ರಭೇದದ ಬಗ್ಗೆ ಕಟ್ಟೆಚ್ಚರವಹಿಸುವ ಜೊತೆಗೆ ವಿದೇಶದಿಂದ ಬಂದವರು ಕೊವಿಡ್ ಟೆಸ್ಟ್ ಮಾಡಿಸಿಕೊಳ್ಳಿ ಎಂದು ರಾಜ್ಯದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸೂಚಿಸಿದ್ದಾರೆ.

ವಿದೇಶದಿಂದ ಬಂದ ಕೆಲವರು ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ. ಈ ರೀತಿಯ ಬೇಜವಾಬ್ದಾರಿ ಮಾಡದೇ ತಾವಾಗಿಯೇ ಬಂದು ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಸಿಎಂ ತಿಳಿಸಿದ್ದಾರೆ. ಜೊತೆಗೆ 2 ತಿಂಗಳ ಹಿಂದೆಯೇ ರಾಜ್ಯಕ್ಕೆ ಬಂದವರು ಟೆಸ್ಟ್ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.

ಈಗಿರುವ ಕೊರೊನಾ ವಿರುದ್ಧದ ಹೋರಾಟದ ಮಾರ್ಗಸೂಚಿಯಲ್ಲಿ ಯಾವುದೇ ಬದಲಾವಣೆ ಸದ್ಯಕ್ಕೆ ಮಾಡುವುದಿಲ್ಲ. ದೆಹಲಿಯಿಂದ ಸೂಚನೆ ಬಂದರೆ ಮಾತ್ರ ಬದಲಾವಣೆ ಮಾಡುತ್ತೇವೆಂದು ಸಿಎಂ ಸ್ಪಷ್ಟಪಿಸಿದರು.

ಹೊಸ ವೈರಸ್ ಬಗ್ಗೆ ಆತಂಕ ಬೇಡ, ನಿಗದಿಯಂತೆ ಶಾಲಾ ಕಾಲೇಜು ಆರಂಭ: ಡಾ.ಕೆ. ಸುಧಾಕರ್