ಹೊಸ ವೈರಸ್ ಬಗ್ಗೆ ಆತಂಕ ಬೇಡ, ನಿಗದಿಯಂತೆ ಶಾಲಾ ಕಾಲೇಜು ಆರಂಭ: ಡಾ.ಕೆ. ಸುಧಾಕರ್

ಹೊಸ ವೈರಸ್ ಬಗ್ಗೆ ತಜ್ಞರೊಂದಿಗೆ ಚರ್ಚೆ ನಡಿಸಿದ್ದು, ಭಯ ಪಡುವ ಅಗತ್ಯವಿಲ್ಲ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ.

ಹೊಸ ವೈರಸ್ ಬಗ್ಗೆ ಆತಂಕ ಬೇಡ, ನಿಗದಿಯಂತೆ ಶಾಲಾ ಕಾಲೇಜು ಆರಂಭ: ಡಾ.ಕೆ. ಸುಧಾಕರ್
ಡಾ. ಕೆ ಸುಧಾಕರ್, ಸಾಂದರ್ಭಿಕ ಚಿತ್ರ
sandhya thejappa

| Edited By: sadhu srinath

Dec 30, 2020 | 12:27 PM

ಬೆಂಗಳೂರು: ಜನವರಿ 1 ರಿಂದ ನಿಗದಿಯಂತೆ ಶಾಲಾ ಕಾಲೇಜು ಆರಂಭವಾಗುತ್ತದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ತಿಳಿಸಿದ್ದಾರೆ.

ಕೊರೊನಾ ಹಾವಳಿಗೆ 9 ತಿಂಗಳಿನಿಂದ ಶಾಲೆ ಕಾಲೇಜುಗಳು ನಡೆಯದೆ ಬಹುತೇಕ ವಿದ್ಯಾರ್ಥಿಗಳು ತೊಂದರೆಗೆ ಸಿಲುಕಿದ್ದಾರೆ. ಹೊಸ ವೈರಸ್ ಬಗ್ಗೆ ತಜ್ಞರೊಂದಿಗೆ ಚರ್ಚೆ ನಡಿಸಿದ್ದು, ಭಯ ಪಡುವ ಅಗತ್ಯವಿಲ್ಲ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಶಾಲೆ ಹಾಗೂ ವಿದ್ಯಾಗಮ ಪ್ರಾರಂಭಿಸಬಹುದೆಂದು ಸಲಹೆಯನ್ನು ಪಡೆದಿದ್ದೇವೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.

ಆತಂಕ ಬೇಡ: ಕೊರೊನಾ ಸೋಂಕಿನ ಬಗ್ಗೆ ಪೋಷಕರು ಆತಂಕ ಪಡುವ ಅಗತ್ಯವಿಲ್ಲ. ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಒತ್ತಾಯ ಕೂಡಾ ಮಾಡುವುದಿಲ್ಲ. ಆದರೆ ಶಾಲೆಗೆ ಬರುವ ಮಕ್ಕಳು ಪೋಷಕರ ಒಪ್ಪಿಗೆ ಪತ್ರವನ್ನು ಕಡ್ಡಾಯವಾಗಿ ತರಬೇಕು ಎಂದರು.

ವಿದ್ಯಾರ್ಥಿಗಳ ಮನವಿ ಜನವರಿ 1ರಿಂದ ಶಾಲಾ-ಕಾಲೇಜುಗಳ ಆರಂಭ ಹಿನ್ನೆಲೆ ಬೆಂಗಳೂರಿನ ಮಲ್ಲೇಶ್ವರಂನ ಕಾಲೇಜಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಭೇಟಿ ನೀಡಿದರು. ಆನ್​ಲೈನ್ ಕ್ಲಾಸ್ ಮುಂದುವರೆಸಬೇಕಾ? ಅಥವಾ ಬೇಡವಾ? ಎಂದು ಸಚಿವರು ಕೇಳಿದ ಪ್ರಶ್ನೆಗೆ ಬೇಡ ಎಂದು  ವಿದ್ಯಾರ್ಥಿಗಳು ಉತ್ತರಿಸಿದ್ದು, ಪಾಠಕ್ಕೆ ಸಂಬಂಧಿಸಿದ ಗೊಂದಲಗಳನ್ನು ಕೇಳಲು ಕಷ್ಟವಾಗುತ್ತಿದೆ. ಹೀಗಾಗಿ ಶಾಲೆಗಳನ್ನು ತೆರೆಯಿರಿ ಎಂದು ವಿದ್ಯಾರ್ಥಿಗಳು ಸಚಿವ ಸುರೇಶ್ ಕುಮಾರ್​ಗೆ  ಮನವಿ ಮಾಡಿದರು.

60 ಕೋಟಿ ಡೋಸ್ Covid-19 ಲಸಿಕೆ ವಿತರಣೆಗೆ ಸಜ್ಜಾಗಿದೆ ದೇಶ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada