ಬೆಳಗಾವಿ ಬಿಮ್ಸ್ ಆಸ್ಪತ್ರೆ ಆವರಣದಲ್ಲಿ ವಿವಾಹಿತ ಮಹಿಳೆಯ ಬರ್ಬರ ಹತ್ಯೆ

ಪ್ರೀತಿಯನ್ನು ನಿರಾಕರಿಸಿದ್ದಕ್ಕೆ, ವಿವಾಹಿತ ಮಹಿಳೆ(ಸುಧಾ) ಇದ್ದ ಸ್ಥಳಕ್ಕೆ ಭಗ್ನ ಪ್ರೇಮಿ ಈರಣ್ಣ ಜಗಜಂಪಿ ಹೋಗಿ ತಲವಾರಿನಿಂದ ಕೊಚ್ಚಿ ಹತ್ಯೆ ಮಾಡಿದ್ದಾನೆ.

ಬೆಳಗಾವಿ ಬಿಮ್ಸ್ ಆಸ್ಪತ್ರೆ ಆವರಣದಲ್ಲಿ ವಿವಾಹಿತ ಮಹಿಳೆಯ ಬರ್ಬರ ಹತ್ಯೆ
ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ವಿವಾಹಿತ ಮಹಿಳೆಯನ್ನು ಕೊಲೆ ಮಾಡಿದ ಕಿರಾತಕ
Follow us
shruti hegde
| Updated By: ಸಾಧು ಶ್ರೀನಾಥ್​

Updated on: Dec 30, 2020 | 11:34 AM

ಬೆಳಗಾವಿ: ವಿವಾಹಿತ ಮಹಿಳೆ ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಬರ್ಬರವಾಗಿ ಕೊಲೆ ಮಾಡಿದ ಘಟನೆ ಬೆಳಗಾವಿ ಬಿಮ್ಸ್ ಆಸ್ಪತ್ರೆಯ ಆವರಣದಲ್ಲಿ ನಡೆದಿದೆ. ಕೊಲೆಯಾದ ಮಹಿಳೆ ಸುಧಾ ಹಡಪದ ಎಂದು ತಿಳಿದು ಬಂದಿದೆ.

ಸುಧಾ ಹಡಪದ ಬೈಲಹೊಂಗಲ ತಾಲೂಕಿನ ಮೊಗುಬಸವದ ವಿವಾಹಿತ ಮಹಿಳೆ. ಸುಧಾಳಿಗೆ ಪ್ರೀತಿಯನ್ನು ಒಪ್ಪಿಕೊಳ್ಳುವಂತೆ ಭಗ್ನ ಪ್ರೇಮಿ ಈರಣ್ಣ ಜಗಜಂಪಿ ಗೋಳು ನೀಡುತ್ತಿದ್ದ. ಪ್ರೀತಿಯನ್ನು ನಿರಾಕರಿಸಿದ್ದಕ್ಕೆ, ಸುಧಾ ಇದ್ದ ಸ್ಥಳಕ್ಕೆ ಹೋಗಿ ತಲವಾರಿನಿಂದ ಕೊಚ್ಚಿ ಹತ್ಯೆ ಮಾಡಿದ್ದಾನೆ.

ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸುಧಾ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಸಂಬಂಧಿಕನಿಂದಲೇ ಮಹಿಳೆಯ ಭೀಕರ ಕೊಲೆ, ಚಾಕುವಿನಿಂದ ಇರಿದು ಎಸ್ಕೇಪ್ ಆದ..