ಮತ ಎಣಿಕಾ ಕೇಂದ್ರದಲ್ಲಿ ವಾಮಾಚಾರ ಮಾಡಿದ ಅಭ್ಯರ್ಥಿ
ಚುನಾವಣಾ ಅಭ್ಯರ್ಥಿಯೊಬ್ಬ ಮತ ಎಣಿಕಾ ಕೊಠಡಿಗೆ ಮಾಟದ ಚೀಟಿ ಎಸೆದು ಹೋಗಿದ್ದಾರೆ.
ಬೆಳಗಾವಿ: ಚುನಾವಣಾ ಅಭ್ಯರ್ಥಿ ಮತ ಎಣಿಕಾ ಕೇಂದ್ರದಲ್ಲೇ ವಾಮಾಚಾರ ಮಾಡಿದ ಘಟನೆ ಹುಕ್ಕೇರಿ ಪಟ್ಟಣದ ಎಸ್.ಕೆ ಹೈಸ್ಕೂಲ್ನಲ್ಲಿ ನಡೆದಿದೆ.
ರಾಜ್ಯದಲ್ಲಿಂದು ಗ್ರಾಮ ಪಂಚಾಯತಿ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಜಿಲ್ಲೆಯ ಎಲಿಮುನ್ನೋಳಿ ಗ್ರಾಮದ ಚುನಾವಣಾ ಅಭ್ಯರ್ಥಿಯೊಬ್ಬ ಮತ ಎಣಿಕೆಯಲ್ಲಿ ಹಿಂದೆ ಬೀಳುತ್ತಿದ್ದಂತೆ ಮತ ಎಣಿಕಾ ಕೊಠಡಿಗೆ ಮಾಟದ ಚೀಟಿ ಎಸೆದು ಹೋಗಿದ್ದಾರೆ. ಅನುಮಾನಗೊಂಡ ಪೊಲೀಸರು ಪರಿಶೀಲನೆ ನಡೆಸಿದ ಬಳಿಕ ಮಾಟ ಮಂತ್ರದ ಚೀಟಿ ಎಂದು ದೃಢವಾಗಿದೆ.
ಪರಿಶೀಲಿಸುತ್ತಿರುವ ಪೊಲೀಸ್
ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆ 60 ಮನೆ ಮುಂದೆ ವಾಮಾಚಾರ; ಗ್ರಾಮಸ್ಥರ ಆರೋಪ