ಸಿಎಂ ಬೊಮ್ಮಾಯಿ ಅ.11ರಂದು ತಿರುಪತಿಯಲ್ಲಿ ವಾಸ್ತವ್ಯ, ತಿಮ್ಮಪ್ಪನ ದರ್ಶನ; ವೇಂಕಟೇಶ್ವರ ಭಕ್ತಿ ಚಾನೆಲ್ ಇನ್ನು ಕನ್ನಡದಲ್ಲೂ ಪ್ರಸಾರ

| Updated By: ಸಾಧು ಶ್ರೀನಾಥ್​

Updated on: Oct 09, 2021 | 9:40 AM

ಸಿಎಂ ಬಸವರಾಜ ಬೊಮ್ಮಾಯಿ ಅಕ್ಟೋಬರ್ 11ರಂದು ಮಧ್ಯಾಹ್ನ ತಿರುಪತಿಗೆ ತೆರಳಲಿದ್ದಾರೆ. ಅ.12ರಂದು ತಿಮ್ಮಪ್ಪನ ದರ್ಶನ ಪಡೆಯಲಿದ್ದಾರೆ. ತಿರುಮಲದಲ್ಲಿ ತಿಮ್ಮಪ್ಪನಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಸಿಎಂ ಆದ ನಂತರ ಬಸವರಾಜ ಬೊಮ್ಮಾಯಿ ಮೊದಲ ಬಾರಿಗೆ ತಿಮ್ಮಪ್ಪನ ದರ್ಶನ ಪಡೆಯಲಿದ್ದಾರೆ.

ಸಿಎಂ ಬೊಮ್ಮಾಯಿ ಅ.11ರಂದು ತಿರುಪತಿಯಲ್ಲಿ ವಾಸ್ತವ್ಯ, ತಿಮ್ಮಪ್ಪನ ದರ್ಶನ; ವೇಂಕಟೇಶ್ವರ ಭಕ್ತಿ ಚಾನೆಲ್ ಇನ್ನು ಕನ್ನಡದಲ್ಲೂ ಪ್ರಸಾರ
ಸಿಎಂ ಬಸವರಾಜ ಬೊಮ್ಮಾಯಿ ಅಕ್ಟೋಬರ್ 11ರಂದು ತಿರುಪತಿಯಲ್ಲಿ ವಾಸ್ತವ್ಯ, ತಿಮ್ಮಪ್ಪನ ದರ್ಶನ
Follow us on

ದೆಹಲಿ: ಪ್ರಸ್ತುತ ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಯಿಂದ ಇಂದು ಮಧ್ಯಾಹ್ನ ವಾಪಸಾಗಲಿದ್ದಾರೆ. ಈ ಮೊದಲು ಬೆಳಗ್ಗೆ 8ಕ್ಕೆ ದೆಹಲಿಯಿಂದ ಹೊರಡಬೇಕಿದ್ದ ಸಿಎಂ ಬೊಮ್ಮಾಯಿ ದೆಹಲಿಯಲ್ಲಿಂದು ಕೇಂದ್ರ ಸಚಿವರಾದ ಪಿಯೂಶ್ ಗೋಯಲ್. ಜ್ಯೋತಿರಾದಿತ್ಯ ಸಿಂಧಿಯಾ ಅವರುಗಳನ್ನು ಭೇಟಿ ಮಾಡಲಿದ್ದಾರೆ. ಈ ಮಧ್ಯೆ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಭೇಟಿಗೆ ಸಮಯ ಕೇಳಿದ್ದಾರೆ.

ಇನ್ನು ದೆಹಲಿಯಿಂದ ವಾಪಸಾದ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಅಕ್ಟೋಬರ್ 11ರಂದು ಮಧ್ಯಾಹ್ನ ತಿರುಪತಿಗೆ ತೆರಳಲಿದ್ದಾರೆ. ಕೆಲ ಸಚಿವರು ಸಹ ಸಿಎಂ ಬೊಮ್ಮಾಯಿ ಜೊತೆ ತಿರುಪತಿಗೆ ತೆರಳಲಿದ್ದಾರೆ. ಅಕ್ಟೋಬರ್ 11ರಂದು ರಾತ್ರಿ ತಿರುಪತಿಯಲ್ಲಿ ಸಿಎಂ ವಾಸ್ತವ್ಯ ಹೂಡಲಿದ್ದು, ಅ.12ರಂದು ತಿಮ್ಮಪ್ಪನ ದರ್ಶನ ಪಡೆಯಲಿದ್ದಾರೆ. ತಿರುಮಲದಲ್ಲಿ ತಿಮ್ಮಪ್ಪನಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಸಿಎಂ ಆದ ನಂತರ ಬಸವರಾಜ ಬೊಮ್ಮಾಯಿ ಮೊದಲ ಬಾರಿಗೆ ತಿಮ್ಮಪ್ಪನ ದರ್ಶನ ಪಡೆಯಲಿದ್ದಾರೆ. ಅ. 12ರಂದು ಬೆಂಗಳೂರಿಗೆ ವಾಪಸಾಗಲಿದ್ದಾರೆ.

ಶ್ರೀವೇಂಕಟೇಶ್ವರ ಭಕ್ತಿ ಚಾನೆಲ್ ಇನ್ನು ಕನ್ನಡದಲ್ಲಿಯೂ:
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಪತಿ ಆಡಳಿತ ಮಂಡಳಿಯ (ಟಿಟಿಡಿ) ಕನ್ನಡ ಮತ್ತು ಹಿಂದಿ ಚಾನಲ್​​ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಈವರೆಗೆ ತೆಲುಗಿನಲ್ಲಿ ಪ್ರಸಾರವಾಗುತ್ತಿದ್ದ ಶ್ರೀವೆಂಕಟೇಶ್ವರ ಭಕ್ತಿ ಚಾನೆಲ್ ಅಕ್ಟೋಬರ್ 11ರಿಂದ ಕನ್ನಡ ಮತ್ತು ಹಿಂದಿ ಭಾಷೆಯಲ್ಲೂ ಪ್ರಸಾರವಾಗಲಿದೆ.

ಸಿಎಂ ಬೊಮ್ಮಾಯಿ ಅವರು ಅಕ್ಟೋಬರ್ 11ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಆಂಧ್ರ ಮುಖ್ಯಮಂತ್ರಿ ಜಗನ್ ಜತೆ ವೇದಿಕೆ ಹಂಚಿಕೊಳ್ಳಲಿದ್ದಾರೆ. ತಿರುಮಲ ತಿರುಪತಿ ದೇವಸ್ಥಾನಂ ನಿರ್ವಹಿಸುತ್ತಿರುವ ಭಕ್ತಿ ಚಾನಲ್​ಗಳು ಅಂದು ಉದ್ಘಾಟನೆಗೊಳ್ಳಲಿವೆ.

Published On - 8:54 am, Sat, 9 October 21