KIADB ಭೂ ಡಿನೋಟಿಫಿಕೇಷನ್ ಪ್ರಕರಣ: ಸಿಎಂ ಬಿಎಸ್‌ವೈ, ಕಟ್ಟಾ ಸುಬ್ರಹ್ಮಣ್ಯನಾಯ್ಡುಗೆ ಎದುರಾಯ್ತು ಸಂಕಷ್ಟ

| Updated By: ಆಯೇಷಾ ಬಾನು

Updated on: Mar 18, 2021 | 7:20 AM

ಡಿನೋಟಿಫಿಕೇಷನ್​ ಭೂತ ಸಿಎಂ ಬಿ.ಎಸ್​.ಯಡಿಯೂರಪ್ಪ ಅವರನ್ನು ಮತ್ತೊಮ್ಮೆ ಕಾಡಲು ಮುಂದಾಗಿದೆ. ಇದೀಗ, ಇದೇ ವಿಚಾರದಲ್ಲಿ ಸಿಎಂ ಬಿಎಸ್‌ವೈ ಹಾಗೂ ಬಿಜೆಪಿ ನಾಯಕ ಕಟ್ಟಾ ಸುಬ್ರಹ್ಮಣ್ಯನಾಯ್ಡುಗೆ ಸಂಕಷ್ಟ ಎದುರಾಗಿದೆ.

KIADB ಭೂ ಡಿನೋಟಿಫಿಕೇಷನ್ ಪ್ರಕರಣ: ಸಿಎಂ ಬಿಎಸ್‌ವೈ, ಕಟ್ಟಾ ಸುಬ್ರಹ್ಮಣ್ಯನಾಯ್ಡುಗೆ ಎದುರಾಯ್ತು ಸಂಕಷ್ಟ
ಬಿ.ಎಸ್​. ಯಡಿಯೂರಪ್ಪ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ಡಿನೋಟಿಫಿಕೇಷನ್​ ಭೂತ ಸಿಎಂ ಬಿ.ಎಸ್​.ಯಡಿಯೂರಪ್ಪ ಅವರನ್ನು ಮತ್ತೊಮ್ಮೆ ಕಾಡಲು ಮುಂದಾಗಿದೆ. ಇದೀಗ, ಇದೇ ವಿಚಾರದಲ್ಲಿ ಸಿಎಂ ಬಿಎಸ್‌ವೈ ಹಾಗೂ ಬಿಜೆಪಿ ನಾಯಕ ಕಟ್ಟಾ ಸುಬ್ರಹ್ಮಣ್ಯನಾಯ್ಡುಗೆ ಸಂಕಷ್ಟ ಎದುರಾಗಿದೆ. ಹೌದು, ಕೆಐಎಡಿಬಿ ಭೂ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸ್‌ನಿಂದ ಕೈಬಿಟ್ಟ ಲೋಕಾಯುಕ್ತ ಕೋರ್ಟ್ ಆದೇಶವನ್ನು ಹೈಕೋರ್ಟ್​ ರದ್ದುಪಡಿಸಿದೆ. ಜೊತೆಗೆ, ಚಾರ್ಜ್‌ಶೀಟ್‌ ಆಧರಿಸಿ ಕ್ರಮ ಜರುಗಿಸುವಂತೆ ಹೈಕೋರ್ಟ್‌ನಿಂದ‌ ಆದೇಶ ಹೊರಬಿದ್ದಿದೆ.

ಏನಿದು ಪ್ರಕರಣ?
ಬೆಂಗಳೂರು ಉತ್ತರ ಜಾಲ ಹೋಬಳಿಯ ಹೂವಿನಾಯಕಹಳ್ಳಿಯಲ್ಲಿ ಕೆಐಎಡಿಬಿ ಜಮೀನನ್ನು ಅಕ್ರಮವಾಗಿ ಡಿನೋಟಿಫಿಕೇಷನ್​ ಮಾಡಲಾಗಿದೆ. ಸುಮಾರು 20 ಎಕರೆ ಜಮೀನನ್ನು ಅಕ್ರಮವಾಗಿ ಡಿನೋಟಿಫಿಕೇಷನ್ ಮಾಡಲಾಗಿದೆ ಎಂದು ಸಿಎಂ ಯಡಿಯೂರಪ್ಪ ಮತ್ತು ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯನಾಯ್ಡು ವಿರುದ್ಧ ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿ ಆರೋಪಪಟ್ಟಿ ಸಲ್ಲಿಸಿದ್ದರು.

ಇದೀಗ, 2012ರಲ್ಲಿ ಸಲ್ಲಿಸಿದ್ದ ದೋಷಾರೋಪ ಪಟ್ಟಿ ಅನುಸಾರ ಕ್ರಮ ಜರುಗಿಸಲು ಲೋಕಾಯುಕ್ತ ವಿಶೇಷ ಕೋರ್ಟ್‌ಗೆ ಹೈಕೋರ್ಟ್ ಸೂಚನೆ ನೀಡಿದೆ. ಹೈಕೋರ್ಟ್ ನ್ಯಾ.ಜಾನ್ ಮೈಕೆಲ್ ಕುನ್ಹಾರವರಿದ್ದ ಪೀಠದಿಂದ ಆದೇಶ ಹೊರಬಿದ್ದಿದೆ.

ಅಷ್ಟಕ್ಕೂ ಸಿಎಂ ಬಿಎಸ್‌ವೈ ಮೇಲಿರುವ ಆರೋಪಗಳೇನು ಅಂತ ನೋಡೋದಾದ್ರೆ..
ಬಿಎಸ್‌ವೈ ಮೇಲಿರೋ ಆರೋಪಗಳೇನು?

ಬೆಂಗಳೂರು ಉತ್ತರ ತಾಲೂಕು ಜಾಲ ಹೋಬಳಿಯ ಹೂವಿನಾಯಕಹಳ್ಳಿಯಲ್ಲಿನ ಕೆಐಎಡಿಬಿಗೆ ಸೇರಿದ್ದ 20 ಎಕರೆ ಜಮೀನನ್ನು ಭೂ ಸ್ವಾಧೀನದಿಂದ ಕೈಬಿಟ್ಟ ಆರೋಪ ಬಿಎಸ್‌ವೈ ಮೇಲಿದೆ. ಹಾರ್ಡ್‌ವೇರ್‌ ಪಾರ್ಕ್‌ನ ಮಧ್ಯಭಾಗದ ಜಮೀನನ್ನು ಭೂ ಮಾಲೀಕರಿಗೆ ಡಿನೋಟಿಫಿಕೇಷನ್‌ ಮಾಡಿದ ಆರೋಪವಿದೆ. ಭೂಸ್ವಾಧೀನಗೊಂಡು ನಿವೇಶನ ಅಭಿವೃದ್ಧಿ ಪಡಿಸಿದ ಬಳಿಕವೂ ನಿಯಮ ಪಾಲಿಸದೇ ಡಿನೋಟಿಫಿಕೇಷನ್‌ ಮಾಡಿ ಸರ್ಕಾರದ ಬೊಕ್ಕಸಕ್ಕೆ 6 ಕೋಟಿ ರೂಪಾಯಿ ನಷ್ಟವುಂಟು ಮಾಡಿದ ಆರೋಪ ಹೊತ್ತಿದ್ದಾರೆ.

ಇನ್ನು ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಎದುರಿಸ್ತಿರೋ ಆರೋಪ ಏನು ಅಂತ ನೋಡಿದ್ರೆ..
ಕಟ್ಟಾ ವಿರುದ್ಧದ ಆರೋಪಗಳೇನು?

ಇನ್ನು ಆಗ ಸಚಿವರಾಗಿದ್ದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ದಾಬಸ್‌ಪೇಟೆ ಬಳಿಯ 4 ಎಕರೆ 6 ಗುಂಟೆ ಜಮೀನು ಡಿನೋಟಿಫಿಕೇಷನ್‌ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಸೋಂಪುರ ಕೈಗಾಗಿಕಾ ಪ್ರದೇಶದಲ್ಲಿನ ಅಭಿವೃದ್ಧಿ ಹೊಂದಿದ ನಿವೇಶನ ಭೂಮಾಲೀಕರಿಗೆ ಬಿಟ್ಟುಕೊಟ್ಟು ಸರ್ಕಾರದ ಬೊಕ್ಕಸಕ್ಕೆ 1 ಕೋಟಿ 30ಲಕ್ಷ ರೂಪಾಯಿ ನಷ್ಟ ಉಂಟು ಮಾಡಿದ ಆರೋಪ ಎದುರಿಸ್ತಿದ್ದಾರೆ.

ಒಟ್ನಲ್ಲಿ 10 ವರ್ಷಗಳ ಹಿಂದಿನ ಪ್ರಕರಣ ಸಿಎಂ ಹಾಗೂ ಮಾಜಿ ಸಚಿವರಿಗೆ ಇಕ್ಕಟ್ಟು ತಂದೊಡ್ಡಿದೆ. ಭ್ರಷ್ಟಾಚಾರ ತಡೆ ಕಾಯ್ದೆಯಡಿ ಇವರಿಬ್ಬರ ವಿಚಾರಣೆ ನಡೆಯಲಿದೆ. ಆದ್ರೆ ಬಿಎಸ್‌ವೈ ಹಾಗೂ ಕಟ್ಟಾಸುಬ್ರಹ್ಮಣ್ಯ ನಾಯ್ಡು ಇಬ್ಬರೂ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ ಮೆಟ್ಟಿಲೇರೋ ಸಾಧ್ಯತೆಯಿದೆ.

ಇದನ್ನೂ ಓದಿ: ಕೇಂದ್ರ ಸರ್ಕಾರದಿಂದ ವಾಹನಗಳ ನವೀಕರಣ ಶುಲ್ಕ ಏರಿಕೆಗೆ ಪ್ರಸ್ತಾಪ!

Published On - 5:45 pm, Wed, 17 March 21