ಹುಟ್ಟಿನಿಂದ ಎಲ್ಲರೂ ಸಮಾನರು ಎಂಬ ಸತ್ಯವನ್ನು ತಿಳಿದವನೇ ಸರ್ವಶ್ರೇಷ್ಠ -ಮಹಾಯೋಗಿ ವೇಮನರನ್ನು ಹೊಗಳಿದ ಸಿಎಂ BSY
ಮಹಾಯೋಗಿ ವೇಮನ ಏರಿದ ಎತ್ತರ ಅನನ್ಯವಾದುದು ಎಂದು ವೇಮನ ಜಯಂತಿ ಕಾರ್ಯಕ್ರಮದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಮಾತನಾಡಿದರು.
ಬೆಂಗಳೂರು: ಮಹಾಯೋಗಿ ವೇಮನ ಏರಿದ ಎತ್ತರ ಅನನ್ಯವಾದುದು ಎಂದು ವೇಮನ ಜಯಂತಿ ಕಾರ್ಯಕ್ರಮದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಮಾತನಾಡಿದರು.
ಹುಟ್ಟಿನಿಂದ ಎಲ್ಲರೂ ಸಮಾನರು ಎಂಬ ಸತ್ಯವನ್ನು ತಿಳಿದವನೇ ಸರ್ವಶ್ರೇಷ್ಠನೆಂಬ ಉನ್ನತ ಚಿಂತನೆ ವೇಮನರು ಹೊಂದಿದ್ದರು. ತ್ರಿಪದಿಗಳ ಮೂಲಕ ಜನಪ್ರಿಯರಾದ ಸರ್ವಜ್ಞರಂತೆ ಮಹಾಯೋಗಿ ವೇಮನರು ತೆಲುಗಿನಲ್ಲಿ ಪದ್ಯ ರಚಿಸಿದರು. ವೇಮನರು ಉತ್ಕಟ ಜೀವನ ಪ್ರೇಮ ಹೊಂದಿದ್ರು ಎಂದು ಸಿಎಂ ಯಡಿಯೂರಪ್ಪ ಹೇಳಿದರು.
ವೇಮನರ ಕೆಲವು ಪದ್ಯವನ್ನು ಸಂಗ್ರಹಿಸಿ ಎಲ್ಲರೂ ಓದಲು ಅವಕಾಶ ಮಾಡಿಕೊಡುವ ಅವಶ್ಯಕತೆ ಇದೆ. ಯುವಕರಿಗೆ ವೇಮನ ಪದ್ಯಗಳನ್ನು ಅಧ್ಯಯನ ಮಾಡಲು, ಸಂಶೋಧನೆ ಮಾಡಲು ಅವಕಾಶ ಒದಗಿಸಬೇಕಿದೆ ಎಂದು ಬಿಎಸ್‌ವೈ ಹೇಳಿದರು. ಮಹಾಯೋಗಿ ವೇಮನರ ಚಿಂತನೆ ಎಲ್ಲಾ ಕಾಲಕ್ಕೂ ಪ್ರಸ್ತುತ. ವೇಮನರ ಕಾವ್ಯ ನಮಗೆಲ್ಲರಿಗೂ ದಾರಿದೀಪ ಎಂದು ವೇಮನ ಜಯಂತಿ ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ ಹೇಳಿದರು.
ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ಶಾಸಕ ಸತೀಶ್ ರೆಡ್ಡಿ ಮತ್ತು ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.