‘ರಾಮ ಮಂದಿರ ಏಕೆ ಬೇಡ?’ ಪುಸ್ತಕಗಳ ಖರೀದಿ ನಡೆದಿಲ್ಲ -ಸಚಿವ ಎಸ್.ಸುರೇಶ್ ಕುಮಾರ್ ಸ್ಪಷ್ಟನೆ
‘ರಾಮ ಮಂದಿರ ಏಕೆ ಬೇಡ?’ ಪುಸ್ತಕಗಳ ಖರೀದಿ ನಡೆದಿಲ್ಲ. ರಾಜ್ಯದ ಯಾವುದೇ ಗ್ರಂಥಾಲಯಗಳಲ್ಲಿ ಪುಸ್ತಕ ಸಿಗುತ್ತಿಲ್ಲ. ಈ ಪುಸ್ತಕ ಓದಲು ಸಿಗುವಂತೆ ಸರ್ಕಾರ ವ್ಯವಸ್ಥೆ ಮಾಡಿಲ್ಲ ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಸ್ಪಷ್ಟನೆ ಕೊಟ್ಟಿದ್ದಾರೆ.
ಬೆಂಗಳೂರು: ‘ರಾಮ ಮಂದಿರ ಏಕೆ ಬೇಡ?’ ಪುಸ್ತಕಗಳ ಖರೀದಿ ನಡೆದಿಲ್ಲ. ರಾಜ್ಯದ ಯಾವುದೇ ಗ್ರಂಥಾಲಯಗಳಲ್ಲಿ ಪುಸ್ತಕ ಸಿಗುತ್ತಿಲ್ಲ. ಈ ಪುಸ್ತಕ ಓದಲು ಸಿಗುವಂತೆ ಸರ್ಕಾರ ವ್ಯವಸ್ಥೆ ಮಾಡಿಲ್ಲ ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಸ್ಪಷ್ಟನೆ ಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಸಚಿವರಿಂದ ಸ್ಪಷ್ಟನೆ ಸಿಕ್ಕಿದೆ.
ರಾಮ ಮಂದಿರ ಏಕೆ ಬೇಡ? ಪುಸ್ತಕ ಗ್ರಂಥಾಲಯ ಇಲಾಖೆಯಿಂದ ಸ್ವೀಕೃತವಾಗಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ, ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ಕೊಟ್ಟಿದ್ದಾರೆ.
ಪುಸ್ತಕ ಸ್ವೀಕೃತ ಪಟ್ಟಿಯಲ್ಲಿ 4,062ನೇ ಕ್ರಮಸಂಖ್ಯೆಯಲ್ಲಿದೆ. 2018ರಲ್ಲಿ 10,571 ಪುಸ್ತಕಗಳು ಮಾತ್ರ ಸ್ವೀಕೃತವಾಗಿವೆ. ಆಯ್ಕೆ ಸಮಿತಿ ಆಯ್ಕೆ ಮಾಡಿದ್ದ 5,109 ಪುಸ್ತಕಗಳ ಪೈಕಿ ಮೊದಲು 350 ಪುಸ್ತಕ ಖರೀದಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಉಳಿದಂತೆ ಯಾವುದೇ ಪುಸ್ತಕ ಖರೀದಿಗೆ ಅನುದಾನ ನೀಡಿಲ್ಲ ಎಂದು ಸಚಿವ ಸ್ಪಷ್ಟನೆ ನೀಡಿದ್ದಾರೆ. ಮೊದಲ ಹಂತದಲ್ಲಿ 350 ಪುಸ್ತಕ ಮಾತ್ರ ಖರೀದಿ ಪ್ರಕ್ರಿಯೆಯಲ್ಲಿದೆ ಎಂದು ಸುರೇಶ್ ಕುಮಾರ್ ಹೇಳಿದರು.
ರಾಮಮಂದಿರ ಏಕೆ ಬೇಡ? ಹೆಸರಿನ ಪುಸ್ತಕ ಖರೀದಿಮಾಡಿಲ್ಲ. ಈ ವಿಚಾರ ಗಮನಕ್ಕೆ ಬಂದ ಕೂಡಲೇ ಪಟ್ಟಿ ಪರಿಶೀಲಿಸಿ ವರದಿ ಮಂಡಿಸಲು ನಿರ್ಧರಿಸಲಾಗಿದೆ. ಸಮಾಜಕ್ಕೆ ಧಕ್ಕೆಯಾಗುವ ಪುಸ್ತಕ ಖರೀದಿಗೆ ನಿರ್ಧರಿಸಿಲ್ಲ ಎಂದು ಸಚಿವ ಎಸ್.ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ವಿವಿಧ ಪ್ರಕಾಶನಗಳು ಪ್ರತಿ ವರ್ಷ ಆಯಾ ಸಾಲಿನಲ್ಲಿ ಪ್ರಕಟಿಸುವ ಹತ್ತಾರು ಸಾವಿರ ಪುಸ್ತಕಗಳು ರಾಜ್ಯ ಕೇಂದ್ರ ಗ್ರಂಥಾಲಯದ ಗ್ರಂಥಸ್ವಾಮ್ಯ…
Posted by Suresh Kumar S on Monday, January 18, 2021