ಚಿಕ್ಕಬಳ್ಳಾಪುರ: ಉಪಚುನಾವಣೆ ಸಮೀಪಿಸುತ್ತಿದ್ದಂತೆ ತಮ್ಮ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಹೊಲದಲ್ಲಿ ರಾಗಿ ತೆನೆ ಕಟಾವು ಮಾಡುವ ಮೂಲಕ ವಿಭಿನ್ನ ರೀತಿಯಲ್ಲಿ ಮತ ಪ್ರಚಾರ ಮಾಡ್ತಿದ್ದಾರೆ.
ಚೀಮನಗಳ್ಳಿ ಗ್ರಾಮದ ರೈತರ ಜಮೀನಿನಲ್ಲಿ ತೆನೆ ಕಟಾವು ಮಾಡುತ್ತಾ ಡಾ.ಕೆ.ಸುಧಾಕರ್ ಮಹಿಳೆಯರ ಸಮಸ್ಯೆಗಳನ್ನು ಆಲಿಸಿದ್ದಾರೆ.
ಹೆಚ್ಡಿಕೆ-ಡಿಕೆಶಿ ಜೋಡೆತ್ತು ಆಟ ಇಲ್ಲಿ ನಡೆಯಲ್ಲ:
ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಮಾಜಿ ಸಚಿವ ಡಿ.ಕೆ.ಶಿವಕುಮಾರ್ಗೆ ರೈತರ ಕಷ್ಟ ಗೊತ್ತಿಲ್ಲ. ಅವರಿಬ್ಬರ ಆಟ ಇಲ್ಲಿ ನಡೆಯುವುದಿಲ್ಲ. ರೈತರ ಬಗ್ಗೆ ಕಾಳಜಿ ಇದ್ದಿದ್ರೆ ಹೆಚ್ಡಿಕೆ ಎತ್ತಿನಹೊಳೆ ಯೋಜನೆ ನಿಲ್ಲಿಸ್ತಿರಲಿಲ್ಲ. ಅವರು ನೂರು ಕೋಟಿ ರೂಪಾಯಿ ತಂದು ಸುರಿದ್ರೂ ನಾನೇ ಇಲ್ಲಿ ಗೆಲ್ಲುವುದು ಎನ್ನುವ ಮೂಲಕ ಡಾ.ಕೆ.ಸುಧಾಕರ್ ತಿರುಗೇಟು ನೀಡಿದ್ದಾರೆ.
ನನಗೆ ರೈತರ ಕಷ್ಟ ಏನೆಂದು ಚೆನ್ನಾಗಿ ಗೊತ್ತು. ಜನ ನನಗೇ ಮತ ಹಾಕೋದು. 80 ವರ್ಷಗಳ ಹಿಂದೆಯೇ ನಮ್ಮ ತಾತ ಹಗಲು ರಾತ್ರಿ ಕಷ್ಟಪಟ್ಟು ಕೃಷಿ ಮಾಡ್ತಿದ್ರು ಎಂದು ಬಡಗನೂರಿನಲ್ಲಿ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಸುಧಾಕರ್ ಹೇಳಿದ್ದಾರೆ.
Published On - 2:38 pm, Wed, 20 November 19