ಚು. ಆಯೋಗ ಅಸ್ತು ಅಂದ್ರೂ ತುಂಗಭದ್ರಾ ಸಮಿತಿಯ ವಿಳಂಬ ಧೋರಣೆ
ರಾಯಚೂರು: ತುಂಗಭದ್ರಾ ಅಚ್ಚುಕಟ್ಟು ವ್ಯಾಪ್ತಿಯ 8 ಲಕ್ಷ ರೈತರು ಎಡದಂಡೆ ಕಾಲುವೆ ನೀರಿಗೆ ಪರಿತಪಿಸ್ತಿದ್ದಾರೆ. ಬೆಳೆ ಉಳಿಸಿಕೊಳ್ಳಲು ಪರದಾಡ್ತಿದ್ದಾರೆ. ಪ್ರತಿ ವರ್ಷ ಇಷ್ಟೊತ್ತಿಗೆ ನೀರು ನೋಡ್ತಿದ್ದ ರೈತರು ವಿಜಯನಗರ ಕ್ಷೇತ್ರದ ಬೈ ಎಲೆಕ್ಷನ್ನಿಂದಾಗಿ ನೀರಿಲ್ಲದೆ ನರಳಾಡ್ತಿದ್ದಾರೆ. ಸದ್ಯ ಚುನಾವಣಾ ಆಯೋಗ ನೀರು ಹರಿಸಲು ಗ್ರೀನ್ ಸಿಗ್ನಲ್ ಕೊಟ್ಟಿದೆ. ಆದ್ರೆ, ರೈತರ ಪಾಡು ದೇವರು ಕೊಟ್ಟರು ಪೂಜಾರಿ ಕೊಡಲಿಲ್ಲ ಎನ್ನುವಂತಾಗಿದೆ. ನೀರು ಹರಿಸಲು ತುಂಗಭದ್ರಾ ಸಲಹಾ ಸಮಿತಿಗೆ ‘ಇಸಿ’ ಸೂಚನೆ: ಕಾಲುವೆ ನೀರು ರಿಲೀಸ್ ಮಾಡಲು ಚುನಾವಣಾ ನೀತಿ […]
ರಾಯಚೂರು: ತುಂಗಭದ್ರಾ ಅಚ್ಚುಕಟ್ಟು ವ್ಯಾಪ್ತಿಯ 8 ಲಕ್ಷ ರೈತರು ಎಡದಂಡೆ ಕಾಲುವೆ ನೀರಿಗೆ ಪರಿತಪಿಸ್ತಿದ್ದಾರೆ. ಬೆಳೆ ಉಳಿಸಿಕೊಳ್ಳಲು ಪರದಾಡ್ತಿದ್ದಾರೆ. ಪ್ರತಿ ವರ್ಷ ಇಷ್ಟೊತ್ತಿಗೆ ನೀರು ನೋಡ್ತಿದ್ದ ರೈತರು ವಿಜಯನಗರ ಕ್ಷೇತ್ರದ ಬೈ ಎಲೆಕ್ಷನ್ನಿಂದಾಗಿ ನೀರಿಲ್ಲದೆ ನರಳಾಡ್ತಿದ್ದಾರೆ. ಸದ್ಯ ಚುನಾವಣಾ ಆಯೋಗ ನೀರು ಹರಿಸಲು ಗ್ರೀನ್ ಸಿಗ್ನಲ್ ಕೊಟ್ಟಿದೆ. ಆದ್ರೆ, ರೈತರ ಪಾಡು ದೇವರು ಕೊಟ್ಟರು ಪೂಜಾರಿ ಕೊಡಲಿಲ್ಲ ಎನ್ನುವಂತಾಗಿದೆ.
ನೀರು ಹರಿಸಲು ತುಂಗಭದ್ರಾ ಸಲಹಾ ಸಮಿತಿಗೆ ‘ಇಸಿ’ ಸೂಚನೆ: ಕಾಲುವೆ ನೀರು ರಿಲೀಸ್ ಮಾಡಲು ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗಿತ್ತು. ತುಂಗಭದ್ರ ನೀರಾವರಿ ಸಲಹಾ ಸಮಿತಿ ಸಭೆ ಕರೆಯಲು ಸಮಸ್ಯೆಯಾಗಿತ್ತು. ಹೀಗಾಗಿ, ಸಭೆ ನಡೆಸೋ ಬಗ್ಗೆ ನೀರಾವರಿ ಇಲಾಖೆ ಆಯೋಗಕ್ಕೆ ಪತ್ರ ಬರೆದಿತ್ತು. ಸದ್ಯ ಸಭೆ ಸೇರಲು ಆಯೋಗ ಅನುಮತಿ ನೀಡಿದೆ.
ಇದ್ರಿಂದ ಎಡದಂಡೆ, ಬಲದಂಡೆ, ವಿಜಯನಗರ ಕಾಲುವೆಗಳಿಗೆ ನೀರು ರಿಲೀಸ್ಗೆ ದಾರಿ ಸುಗಮವಾಗಿದೆ. ಆದ್ರೆ, ಕರ್ನಾಟಕ ನೀರಾವರಿ ನಿಗಮದ ಆಫೀಸರ್ಸ್ ವಿಳಂಬ ಧೋರಣೆ ಅನುಸರಿಸ್ತಿದ್ದಾರೆ ಅಂತಾ ಆರೋಪಿಸಲಾಗಿದೆ. ವಿಳಂಬ ಮಾಡದೆ ಸಲಹಾ ಸಮಿತಿ ಸಭೆ ಕರೆದು ಕಾಲುವೆಗೆ ನೀರು ಹರಿಸಲು ಟೈಂ ಟೇಬಲ್ ಫಿಕ್ಸ್ ಮಾಡ್ಬೇಕು ಅಂತಾ ರೈತರು ಆಗ್ರಹಿಸಿದ್ದಾರೆ.
ಇನ್ನು ನೀರು ಹರಿಸೋ ವಿಚಾರವನ್ನ ರಾಜಕೀಯ ಪ್ರಚಾರಕ್ಕೆ ಬಳಸದಂತೆ ಆಯೋಗ ಕಂಡೀಷನ್ ಹಾಕಿದೆ. ಇದು ನಾಯಕರಿಗೆ ಕೊಂಚ ಹಿನ್ನಡೆಯಾಗಿದಂತಾಗಿದೆ. ಇನ್ನು ಬೆಳೆಗಳಿಗೆ ನೀರು ಸಿಗುತ್ತೋ…? ಹೇಗೋ ಅಂತಾ ರೈತರಲ್ಲಿ ಆತಂಕ ಮನೆ ಮಾಡಿತ್ತು. ವಿಳಂಬದ ಬಳಿಕವೂ ಕಾಲುವೆ ನೀರು ಹರಿಸಲು ಆಯೋಗದ ಅಪ್ಪಣೆ ನೀಡಿದೆ. ಹೀಗಾಗಿ, ನವೆಂಬರ್ 25 ರೊಳಗೆ ಸಭೆ ಕರೆದು ನೀರು ಹರಿಸಬೇಕು. ಇಲ್ಲದಿದ್ರೆ, ರಾಯಚೂರು ಜಿಲ್ಲೆ ಬಂದ್ ಮಾಡೋದಾಗಿ ನಾಯಕರು ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
Published On - 2:09 pm, Wed, 20 November 19