ಚಿಕ್ಕಬಳ್ಳಾಪುರ:ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಕೋಟಾಲದಿನ್ನೆ ಗ್ರಾಮದಲ್ಲಿ ಅನಾರೋಗ್ಯದಿಂದ ಗ್ರಾಮಸ್ಥೆ ಚಿನ್ನಕ್ಕ (52)ಎಂಬುವವರು ನಿನ್ನೆ ಮೃತಪಟ್ಟಿದ್ದಾರೆ. ಚಿನ್ನಕ್ಕ ಶವ ಸಂಸ್ಕಾರಕ್ಕೆ ಸಂಬಂಧಿಗಳು ನಿನ್ನೆಯಿಂದ ಪರದಾಡುವಂತಾಗಿದೆ. ಗ್ರಾಮದ ಬಳಿ ಇರುವ ಸರ್ಕಾರಿ ಜಮೀನಿನಲ್ಲಿ ಸ್ಮಶಾನವಿದೆ. ಆದ್ರೆ ಸ್ಮಶಾನದ ಪಕ್ಕದ ತೋಟದ ಮಾಲೀಕರು ಅದು ತಮಗೆ ಸೇರಿದ್ದು ಎಂದು ಶವ ಸಂಸ್ಕಾರಕ್ಕೆ ಅಡ್ಡಿಪಡಿಸಿದ್ದಾರೆ.
ನಿನ್ನೆಯಿಂದ ಮನೆ ಬಳಿಯೇ ಮೃತಳ ಶವ:
ಸ್ಮಶಾನದಲ್ಲಿ ಗುಂಡಿ ಅಗೆಯಲು ಹೊದ್ರೆ ಪಕ್ಕದ ಜಮೀನಿನ ಮಾಲೀಕ ಅಡ್ಡಿಪಡಿಸುತ್ತಿದ್ದಾರೆ. ಹಾಗಾಗಿಯೇ ನಿನ್ನೆಯಿಂದ ಮನೆ ಬಳಿಯೇ ಮೃತಳ ಶವವನ್ನು ಇಡಲಾಗಿದೆ. ಗ್ರಾಮದ ಬಳಿ ಇರೊ ಸರ್ಕಾರಿ ಜಮೀನನ್ನು ಸ್ಮಶಾನನಕ್ಕೆ ಮೀಸಲು ಮಾಡುವಂತೆ ಗ್ರಾಮಸ್ಥರು ಚಿಕ್ಕಬಳ್ಳಾಪುರ ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡಿದ್ದಾರೆ. ಆದರೆ ಮನವಿ ಮಾಡಿದ್ದರೂ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಸ್ಪಂದಿಸಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಅಂದಹಾಗೆ, ಇದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಪ್ರತಿನಿಧಿಸುವ ಜಿಲ್ಲೆ.
(chikkaballapur district administration appathy villagers in gauribidanur not able to perform last rites of a woman)
ನಾಲ್ಕು ವರ್ಷದಿಂದ ರುದ್ರಭೂಮಿಯಲ್ಲಿಯೇ ವಾಸ; ಶವ ಸಂಸ್ಕಾರದಲ್ಲಿ ನಿರತ ಗಂಡನಿಗೆ ಹೆಗಲು ಕೊಟ್ಟು ನಿಂತ ಹೆಂಡತಿ
Published On - 9:19 am, Wed, 2 June 21