Chikkaballapur Gelatin Blast | ಚಿಕ್ಕಬಳ್ಳಾಪುರ ಸ್ಫೋಟ ಪ್ರಕರಣ: ಕರ್ತವ್ಯ ನಿರ್ಲಕ್ಷ್ಯ ಆರೋಪ PSI ಗೋಪಾಲ ರೆಡ್ಡಿ ಅಮಾನತು

| Updated By: ಸಾಧು ಶ್ರೀನಾಥ್​

Updated on: Feb 24, 2021 | 6:09 PM

Chikkaballapur Gelatin Blast :ಬೇಜವಾಬ್ದಾರಿತನ್ನು ತೋರ್ಪಡಿಸಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಗುಡಿಬಂಡೆ ಪೊಲೀಸ್ ಠಾಣಾ ಪಿಎಸ್ ಐ PSI ಆರ್. ಗೋಪಾಲ ರೆಡ್ಡಿ ಅವರನ್ನು ಅಮಾನತು ಮಾಡಲಾಗಿದೆ ಎಂದು ಕೇಂದ್ರ ವಲಯ ಐಜಿಪಿ (IGP- Central Range) ಚಂದ್ರಶೇಕರ್​ ಅವರು ತಿಳಿಸಿದ್ದಾರೆ.

Chikkaballapur Gelatin Blast | ಚಿಕ್ಕಬಳ್ಳಾಪುರ ಸ್ಫೋಟ ಪ್ರಕರಣ: ಕರ್ತವ್ಯ ನಿರ್ಲಕ್ಷ್ಯ ಆರೋಪ PSI ಗೋಪಾಲ ರೆಡ್ಡಿ ಅಮಾನತು
ಪಿಎಸ್​ಐ ಆರ್.ಗೋಪಾಲರೆಡ್ಡಿ
Follow us on

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲೆಟಿನ್ ಸ್ಪೋಟಕ್ಕೆ ಸಂಬಂಧಿಸಿದಂತೆ, ತನಿಖಾಧಿಕಾರಿಯಾದ ಪಿಎಸ್ಐ ಯಾವುದೇ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳದೇ ಕರ್ತವ್ಯದಲ್ಲಿ ಅತೀವ ನಿರ್ಲಕ್ಷತೆ ಮತ್ತು ಬೇಜವಾಬ್ದಾರಿತನ್ನು ತೋರ್ಪಡಿಸಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಗುಡಿಬಂಡೆ ಪೊಲೀಸ್ ಠಾಣಾ ಪಿಎಸ್ ಐ ಆರ್.ಗೋಪಾಲರೆಡ್ಡಿ ಅವರನ್ನು ಅಮಾನತು ಮಾಡಲಾಗಿದೆ ಎಂದು ಕೇಂದ್ರ ವಲಯ ಐಜಿಪಿ (IGP- Central Range) ಚಂದ್ರಶೇಕರ್​ ಅವರು ತಿಳಿಸಿದ್ದಾರೆ.

ಇದೇ ತಿಂಗಳು 07ನೇ ತಾರೀಕಿನಂದು ದಾಖಲಾಗಿದ್ದ ಪ್ರಕರಣದಲ್ಲಿ ಕರ್ತವ್ಯ ಲೋಪ ಕಂಡುಬಂದಿದೆ. ಪ್ರಕರಣದ ಆರೋಪಿಗಳಾದ ಮೂರ್ತಿ, ರಾಘವೇಂದ್ರ ಮತ್ತು ನಾಗರಾಜು ಪತ್ತೆ ಹಚ್ಚಿ ದಸ್ತಗಿರಿ ಮಾಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿರುವುದಿಲ್ಲ. ಸದರಿ ಪ್ರಕರಣವನ್ನು ದಾಖಲಿಸಿದ ಬಗ್ಗೆ ಪೊಲೀಸ್ ಐಟಿ ತಂತ್ರಾಂಶದಲ್ಲಿ ನಮೂದಿಸಿರುವುದಿಲ್ಲ.

ಇನ್ನು, ಮೇಲಧಿಕಾರಿಗಳಿಗೆ ಮಾಹಿತಿ ನೀಡದೇ 21ಮತ್ತು 22 ರಂದು ರಜೆಯ ಮೇಲೆ ತೆರಳಿದ್ದ PSI ಹಾಗೂ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಿ ದಸ್ತಗಿರಿ ಮಾಡದೇ ಇದ್ದುದ್ದರಿಂದ ಸ್ಪೋಟ ಪ್ರಕರಣ ಸಂಭವಿಸಿದೆ. ಮೊದಲೇ ಪ್ರಕರಣದ ತನಿಖೆಯ ಬಗ್ಗೆ ಹಾಗೂ ಆರೋಪಿಗಳನ್ನು ಪತ್ತೆ ಹಚ್ಚುವ ಬಗ್ಗೆ ಅಧೀನ ಸಿಬ್ಬಂದಿಗಳಿಗೆ ಸೂಕ್ತ ಸೂಚನೆಗಳನ್ನು ನೀಡಿರುವುದಿಲ್ಲ. ಎಲ್ಲಾ ಆರೋಪಿಗಳನ್ನು ಸೂಕ್ತ ಸಮಯದಲ್ಲಿ ದಸ್ತಗಿರಿ ಮಾಡಿದ್ದಲ್ಲಿ, ಸ್ಫೋಟದಲ್ಲಿ 06 ಜನ ಮೃತರಾಗಿರುವ ಘಟನೆಯನ್ನು ತಪ್ಪಿಸಬಹುದಾಗಿತ್ತು ಎಂಬ ವಿಚಾರ ಕೇಳಿಬರುತ್ತಿದೆ.

ತನಿಖಾಧಿಕಾರಿಯಾದ ಪಿಎಸ್ಐ ಯಾವುದೇ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳದೇ ಕರ್ತವ್ಯದಲ್ಲಿ ಅತೀವ ನಿರ್ಲಕ್ಷತೆ ಮತ್ತು ಬೇಜವಾಬ್ದಾರಿತನ್ನು ತೋರ್ಪಡಿಸಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಗುಡಿಬಂಡೆ ಪೊಲೀಸ್ ಠಾಣಾ ಪಿಎಸ್ ಐ ಆರ್.ಗೋಪಾಲರೆಡ್ಡಿ, ಅಮಾನತು ಮಾಡಲಾಗಿದೆ ಎಂದು ಕೇಂದ್ರ ವಲಯ ಐಜಿಪಿ ಚಂದ್ರಶೇಕರ್​ ಅವರು ಹೇಳಿದ್ದಾರೆ.

ಇದನ್ನೂ ಓದಿ: Chikkaballapura Gelatin Blast | ಚಿಕ್ಕಬಳ್ಳಾಪುರ ಜಿಲೆಟಿನ್ ಸ್ಫೋಟ: ಕ್ರಷರ್​ ಹಾವಳಿಗೆ ಮುಚ್ಚಿಹೋದ ಪುರಾತನ ಹನುಮ ದೇಗುಲ!

ಇದನ್ನೂ ಓದಿ: Chikkaballapura Gelatin Blast: ಚಿಕ್ಕಬಳ್ಳಾಪುರ ಕ್ವಾರಿ ಮಾಲೀಕನಿಗೆ ಇದೆ ಭಾರೀ ರಾಜಕೀಯ ನಂಟು! ರೈಲ್ವೇ ಕೇಂದ್ರ ಸಮಿತಿಗೆ ನೇಮಕ ಮಾಡಿದ್ದು ಸ್ಥಳೀಯ ಸಂಸದ

Published On - 5:12 pm, Wed, 24 February 21