PM-CM-President ಗಳಿಗೆ ಚಿಕ್ಕಬಳ್ಳಾಪುರ ಸರ್ಕಾರಿ ಕಾಲೇಜಿನ ನೂರಾರು ವಿದ್ಯಾರ್ಥಿನಿಯರು ಸಾಲು ಸಾಲು ಪತ್ರ ಬರೆದರು! ಉದ್ದೇಶವೇನು?

| Updated By: ಸಾಧು ಶ್ರೀನಾಥ್​

Updated on: Dec 30, 2022 | 5:08 PM

ಸ್ಥಳೀಯ ಜನಪ್ರತಿನಿಧಿಗಳಿಗೆ ಕಾಡಿ ಬೇಡಿ ಪ್ರಾರ್ಥನೆ ಮಾಡಿ ಸಾಕಾಗಿದೆ ಆದ್ರೂ ತಮ್ಮ ಸಮಸ್ಯೆ ಬಗೆಯರಿದಿಲ್ಲ ಅಂತ ಆಕ್ರೋಶಗೊಂಡ ಚಿಕ್ಕಬಳ್ಳಾಪುರ ಸರ್ಕಾರಿ ಮಹಿಳಾ ಪ್ರಥಮ ದರ್ಜೆ  ಕಾಲೇಜಿನ ವಿದ್ಯಾರ್ಥಿನಿಯರು ಪತ್ರ ಚಳುವಳಿ ನಡೆಸಿದ್ರು.

PM-CM-President ಗಳಿಗೆ ಚಿಕ್ಕಬಳ್ಳಾಪುರ ಸರ್ಕಾರಿ ಕಾಲೇಜಿನ ನೂರಾರು ವಿದ್ಯಾರ್ಥಿನಿಯರು ಸಾಲು ಸಾಲು ಪತ್ರ ಬರೆದರು! ಉದ್ದೇಶವೇನು?
ಚಿಕ್ಕಬಳ್ಳಾಪುರ ಸರ್ಕಾರಿ ಕಾಲೇಜಿನ ನೂರಾರು ವಿದ್ಯಾರ್ಥಿನಿಯರ ಸಾಲು ಸಾಲು ಪತ್ರ ಬರೆದರು!
Follow us on

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರದಲ್ಲಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು (Chikkaballapur government college for women) ಆಗಿ ದಶಕವೇ ಕಳೆದರೂ ಇದುವರೆಗೂ ಸೂಕ್ತ ಕಟ್ಟಡವಾಗಲೀ, ಕುಡಿಯುವ ನೀರು, ಶೌಚಾಲಯ, ವಿಶ್ರಾಂತಿ ತಾಣ, ಲೈಬ್ರರಿ ಸೇರಿದಂತೆ ಯಾವೊಂದು ಮೂಲಭೂತ ಸೌಕರ್ಯಗಳಿಲ್ಲ. ಸ್ಥಳೀಯ ಜನಪ್ರತಿನಿಧಿಗಳಿಗೆ ಕಾಡಿ ಬೇಡಿ ಪ್ರಾರ್ಥನೆ ಮಾಡಿ ಸಾಕಾಗಿದೆ ಆದ್ರೂ ತಮ್ಮ ಸಮಸ್ಯೆ ಬಗೆಯರಿದಿಲ್ಲ ಅಂತ ಆಕ್ರೋಶಗೊಂಡ ಕಾಲೇಜಿನ ವಿದ್ಯಾರ್ಥಿನಿಯರು ಪತ್ರ ಚಳುವಳಿ ನಡೆಸಿದ್ರು.

ಯಾರಿಗೆಲ್ಲ ಪತ್ರ ಬರೆದು ಪತ್ರ ಚಳುವಳಿ ನಡೆಸಿದರು?

ಚಿಕ್ಕಬಳ್ಳಾಪುರ ನಗರದಲ್ಲಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿರುವ ಸಮಸ್ಯೆಗಳು ಹಾಗೂ ವಯಕ್ತಿಕವಾಗಿ ತಮಗೆ ಆಗುತ್ತಿರುವ ತೊಂದರೆಗಳನ್ನು ಪೋಸ್ಟ್ ಕಾರ್ಡಿನಲ್ಲಿ ವೈಯಕ್ತಿಕವಾಗಿ ಬರೆದ ವಿದ್ಯಾರ್ಥಿನಿಯರು ಕಾರ್ಡಗಳನ್ನು ರಾಷ್ಟಪತಿ, ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೇರಿದಂತೆ ರಾಷ್ಟ್ರೀಯ ಮಹಿಳಾ ಆಯೋಗ, ಕಾನೂನು ಸೇವಾ ಪ್ರಾಧಿಕಾರಕ್ಕೆ ಬರೆಯವುದರ ಮೂಲಕ ಪತ್ರ ಚಳುವಳಿ ನಡೆಸಿದ್ರು.

ತಾತ್ಕಾಲಿಕ ಕಟ್ಟಡದಲ್ಲಿ ತರಗತಿಗಳು ನಡೆಯುತಿವೆ:

ಸದ್ಯ ನಗರದ ಸಿಟಿಜನ್‌ ಕ್ಲಬ್‌ನಲ್ಲಿ ಪಾಠ ಪ್ರವಚನಗಳು ನಡೆಯುತ್ತಿವೆ. ನಮಗೊಂದು ಸ್ವಂತ ಕಟ್ಟಡವಿಲ್ಲ. ಶಿಡ್ಲಘಟ್ಟ ರಸ್ತೆಯಲ್ಲಿ ನೀರು ತುಂಬಿಕೊಳ್ಳುವ ಸ್ಥಳದಲ್ಲಿ ಮಹಿಳಾ ಕಾಲೇಜನ್ನು 2008ರಿಂದ ನಿರ್ಮಿಸುತ್ತಲೇ ಇದ್ದಾರೆ. ಆದರೆ ಅದು ಸರಿಯಾಗಿ ನಿರ್ಮಿಸದ ಕಾರಣ ಯಾರಿಗೂ ಸಿಗುತ್ತಿಲ್ಲ. ಇನ್ನೂ ಕಾಮಗಾರಿ ನಡೆಯುತ್ತಲೇ ಇದೆ. ಆ ಕಾಮಗಾರಿ ಮುಗಿದರೂ ಅದು ಯಾವುದಕ್ಕೂ ಪ್ರಯೋಜನವಿಲ್ಲ ಎಂಬಂತಿದೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದರು. ಹೀಗಾಗಿ ವಿದ್ಯಾರ್ಥಿಗಳು ಅತಂತ್ರವಾಗಿ ವ್ಯಾಸಂಗ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಸೌಲಭ್ಯಗಳೇ ಇಲ್ಲದಿದ್ದರೂ ಉತ್ತಮ ಫಲಿತಾಂಶ:

ಕಾಲೇಜಿನಲ್ಲಿ ಸೂಕ್ತ ಕಟ್ಟಡ, ಶೌಚಾಲಯ, ಕುಡಿಯುವ ನೀರು ಸೇರಿದಂತೆ ಯಾವುದೆ ಸೂಕ್ತ ಮೂಲಭೂತ ಸೌಲಭ್ಯಗಳು ಇಲ್ಲ. ಪರದಾಡುವಂತಹ ಪರಿಸ್ಥಿತಿಯ ಮದ್ಯೆಯೂ ಕಾಲೇಜಿನ ವಿದ್ಯಾರ್ಥಿನಿಯರು ಉತ್ತಮ ಫಲಿತಾಂಶ ಪಡೆಯುತ್ತಿದ್ದಾರೆ.

ಅಂಚೆ ಕಚೇರಿವರೆಗೂ ಮೆರವಣಿಗೆ ಸಾಗಿದ್ರು:

ಕಾಲೇಜಿನಲ್ಲಿ ಪತ್ರಗಳನ್ನು ಬರೆದ ವಿದ್ಯಾರ್ಥಿನಿಯರು ನಗರದ ಸಿಟಿಜನ್ ಕ್ಲಬ್ ತಾತ್ಕಾಲಿಕ ಕಟ್ಟಡದ ಕಾಲೇಜಿನಿಂದ ಪೋಸ್ಟ್‌ ಆಫೀಸ್‌ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ, ಬರೆದ ಪತ್ರಗಳನ್ನು ಪ್ರಧಾನ ಮಂತ್ರಿ, ಮುಖ್ಯಮಂತ್ರಿ, ನ್ಯಾಯಾಧೀಶರು, ರಾಷ್ಟ್ರಪತಿ, ಮಹಿಳಾ ಆಯೋಗಕ್ಕೆ ಪೋಸ್ಟ್‌ ಮಾಡುವ ಮೂಲಕ ಗಮನ ಸೆಳೆಯುವ ಯತ್ನ ನಡೆಸಿದ್ದಾರೆ.
ಭೀಮಪ್ಪ ಪಾಟೀಲ ಟಿವಿ9 ಚಿಕ್ಕಬಳ್ಳಾಪುರ

Published On - 5:07 pm, Fri, 30 December 22