ಚಿಕ್ಕಬಳ್ಳಾಪುರ: ನಿರ್ಮಾಣ ಹಂತದ ಕಾಲೇಜು ಕಟ್ಟಡದ ಸ್ಲ್ಯಾಬ್ ಕುಸಿದು 10 ಕಾರ್ಮಿಕರಿಗೆ ಗಾಯ
ಚಿಕ್ಕಬಳ್ಳಾಪುರ ತಾಲೂಕಿನ ಅರೂರು ಗ್ರಾಮದ ಬಳಿ ನಿರ್ಮಾಣ ಹಂತದ ಮೆಡಿಕಲ್ ಕಾಲೇಜು ಕಟ್ಟಡದ ಸ್ಲ್ಯಾಬ್ ಕುಸಿದು 10 ಕಾರ್ಮಿಕರು ಗಾಯಗೊಂಡಿದ್ದಾರೆ.
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ (Chikkaballapura) ತಾಲೂಕಿನ ಅರೂರು ಗ್ರಾಮದ ಬಳಿ ನಿರ್ಮಾಣ ಹಂತದ ಮೆಡಿಕಲ್ ಕಾಲೇಜು ಕಟ್ಟಡದ (Medical College) ಸ್ಲ್ಯಾಬ್ ಕುಸಿದು 10 ಕಾರ್ಮಿಕರು (workers) ಗಾಯಗೊಂಡಿದ್ದಾರೆ. ಗಾಯಾಳು ಕಾರ್ಮಿಕರನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾವತ್ ಕಾರ್ಮಿಕರು ಪ್ರಾಣಾಪಯದಿಂದ ಪಾರಾಗಿದ್ದಾರೆ.
ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಇಬ್ಬರ ಸಾವು
ಎರಡು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಬೈಕ್ ಸವಾರರು ಸಾವನ್ನಪ್ಪಿರುವ ಘಟನೆ ಚಿಂತಾಮಣಿ ತಾಲೂಕಿನ ಕುರುಬೂರು ಬಳಿ ನಡೆದಿದೆ. ಬಾಗೇಪಲ್ಲಿಯ ನಾಗರಾಜು(30), ರಾಜಸ್ಥಾನದ ಮೂಲದ ಬಾಲಾಜಿ(30) ಮೃತದುರ್ದೈವಿಗಳು. ಘಟನೆಯಲ್ಲಿ ರಾಜಸ್ಥಾನದ ಸೋಮನ್ ಕುಮಾರ್ ಎಂಬುವರ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಅಪಘಾತದಲ್ಲಿ ಇಬ್ಬರು ಖೋ ಖೋ ಕ್ರೀಡಾಪಟುಗಳ ಸಾವು
ಯಾದಗಿರಿ: ಟಂಟಂ ವಾಹನಕ್ಕೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ಇಬ್ಬರು ದುರ್ಮರಣ ಹೊಂದಿದ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ಸಿದ್ದಾಪುರ ಬಳಿ ನಡೆದಿದೆ. ದೇವರಗೋನಾಲ್ ನಿವಾಸಿ ವೆಂಕಟೇಶ (21) ಮತ್ತು ನಾರಾಯಣ (20) ಸಾವನ್ನಪ್ಪಿದ ದುರ್ದೈವಿಗಳಾಗಿದ್ದಾರೆ. ವೆಂಕಟೇಶ ಮತ್ತು ನಾರಾಯಣ ಅವರು ನಿನ್ನೆ ರಾತ್ರಿ ಸುರಪುರದಿಂದ ತಮ್ಮ ಗ್ರಾಮಕ್ಕೆ ತರಳುತ್ತಿದ್ದಾಗ ಈ ಅವಘಡ ಸಂಭವಿಸಿದ್ದು, ಗಾಯಗೊಂಡ ಐವರನ್ನು ಕಲಬುರಗಿ ಜಿಲ್ಲಾಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದುರ್ಘಟನೆಯಲ್ಲಿ ಮೃತಮಟ್ಟ ಇಬ್ಬರು ಯುವಕರು ಖೋ ಖೋ ಕ್ರೀಡಾಪಟುಗಳಾಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ