ಅಂಗನವಾಡಿ ಸಮವಸ್ತ್ರ ಸೀರೆಯಲ್ಲಿ ಸರ್ಕಾರದ ಜಾಹಿರಾತು! ಸಮವಸ್ತ್ರ ಬಹಿಷ್ಕರಿಸಿ ಸರ್ಕಾರದ ವಿರುದ್ಧ ನೌಕರರ ಆಕ್ರೋಶ
ಅಂಗನವಾಡಿ ನೌಕರರು ಸರ್ಕಾರದ ಸೀರೆಯನ್ನು ಬಹಿಷ್ಕರಿಸಿ ಸೀರೆಗಳನ್ನು ಸ್ವೀಕರಿಸದ ಕಾರಣ ರಾಜ್ಯಾದ್ಯಂತ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಸೀರೆಗಳು, ಆಯಾ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿಯಲ್ಲೆ ಕೊಳೆಯುತ್ತಿವೆ.
ಚಿಕ್ಕಬಳ್ಳಾಪುರ: ಕಾಲೇಜುಗಳಲ್ಲಿ ಸಮಾನತೆ ತರಲು ರಾಜ್ಯ ಸರ್ಕಾರ ಉನ್ನತ ಮಟ್ಟದ ಸಮಿತಿ ರಚನೆ ಮಾಡಿರುವಾಗಲೇ ಇತ್ತ ಅಂಗನವಾಡಿಗಳಲ್ಲಿ (Anganwadi Uniform) ಕೆಲಸ ಮಾಡ್ತಿರುವ ಶಿಕ್ಷಕಿಯರು ಹಾಗೂ ಸಹಾಯಕಿಯರಿಗೂ ಸರ್ಕಾರ ಡ್ರೇಸ್ ಕೋಡ್ ಜಾರಿ ಮಾಡಿದೆ. ಆದ್ರೆ ಸರ್ಕಾರ ನೀಡಿರುವ ಸೀರೆಗಳ ಮೇಲೆ ಯೋಜನೆಯೊಂದರ ಜಾಹಿರಾತು ಇರುವ ಕಾರಣ ಅಂಗನವಾಡಿ ನೌಕರರು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಅಂಗನವಾಡಿಗಳಲ್ಲಿ ಕೆಲಸ ಮಾಡ್ತಿರುವ ಶಿಕ್ಷಕಿಯರು ಹಾಗೂ ಸಹಾಯಕಿಯರು ಸರ್ಕಾರ ನೀಡಿರುವ ಸೀರೆಯನ್ನು ಧರಸಿ ಕೆಲಸ ಮಾಡಬೇಕಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಕ ಸೀರೆಗಳನ್ನು ವಿತರಣೆ ಮಾಡಿದೆ. ಆದ್ರೆ ಸೀರೆಯ ಮೇಲೆ ಇಲಾಖೆಯ ಯೋಜನೆಯೊಂದರ ಜಾಹಿರಾತು ಇದೆ. ಇದ್ರಿಂದ ಅಂಗನವಾಡಿಗಳಲ್ಲಿ ಕೆಲಸ ಮಾಡ್ತಿರುವ ಶಿಕ್ಷಕಿಯರು ಹಾಗೂ ಸಹಾಯಕಿಯರು, ಸರ್ಕಾರದ ಡ್ರೇಸ್ ಕೋಡ್ ಜಾರಿಗೆ ವಿರೋಧ ವ್ಯಕ್ತಪಡಿಸಿಲ್ಲವಾದ್ರೂ ಸೀರೆಯ ಮೇಲೆ ಜಾಹಿರಾತು ಮುದ್ರಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂಗನವಾಡಿ ನೌಕರರು ಸರ್ಕಾರದ ಸೀರೆಯನ್ನು ಬಹಿಷ್ಕರಿಸಿ ಸೀರೆಗಳನ್ನು ಸ್ವೀಕರಿಸದ ಕಾರಣ ರಾಜ್ಯಾದ್ಯಂತ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಸೀರೆಗಳು, ಆಯಾ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿಯಲ್ಲೆ ಕೊಳೆಯುತ್ತಿವೆ. ಇದರಿಂದ ಗೊಂದಲಕ್ಕೆ ಸಿಲುಕಿರುವ ಇಲಾಖೆಯ ಅಧಿಕಾರಿಗಳು, ಸರ್ಕಾರಕ್ಕೆ ಪತ್ರ ಬರೆದು ಮಾರ್ಗದರ್ಶನ ನೀಡಲು ಕೋರಿದ್ದಾರೆ. ಶಾಲಾ ಕಾಲೇಜುಗಳಲ್ಲಿ ಸಮಾನತೆ ತರಲು ಮುಂದಾಗಿರುವ ಸರ್ಕಾರ, ಅಂಗನವಾಡಿಗಳಲ್ಲೂ ಸಮಾನತೆ ಜಾರಿಗೊಳಿಸಿ ಸೀರೆ ವಿತರಿಸಿದೆ ಆದ್ರೆ ಸೀರೆಗಳ ಮೇಲೆ ಇಲಾಖೆಯ ಯೋಜನೆಯ ಜಾಹಿರಾತು ಪ್ರಕಟ ಮಾಡಿದ್ದಕ್ಕೆ ಅಂಗನವಾಡಿ ನೌಕರರು ಗರಂ ಆಗಿದ್ದು, ನಾವೇನ್ ಸರ್ಕಾರ ಜಾಹಿರಾತು ಪ್ರದರ್ಶನ ಮಾಡುವ ವಸ್ತುಗಳೆ ಎಂದು ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರದಿ: ಭೀಮಪ್ಪ ಪಾಟೀಲ, ಟಿವಿ9 ಚಿಕ್ಕಬಳ್ಳಾಪುರ
ಇದನ್ನೂ ಓದಿ: ಬಳ್ಳಾರಿ: ಜಿಲ್ಲೆಯಾದ್ಯಂತ ಅಂಗನವಾಡಿ, ನರ್ಸರಿ, ಪ್ರಿ ನರ್ಸರಿ ಬಂದ್; ಜಿಂದಾಲ್ ಸುತ್ತಮುತ್ತ 1-8ನೇ ತರಗತಿಗೆ ರಜೆ