Election Time: ಉಚಿತ ನಿವೇಶನ ಆಫರ್ ಹಿನ್ನೆಲೆ- ಅರ್ಜಿ ಹಾಕಲು ಬಿಸಿಲು ಧೂಳು ಲೆಕ್ಕಿಸದೆ ಮುಗಿಬಿದ್ದ ಚಿಕ್ಕಬಳ್ಳಾಪುರದ ಮಹಿಳೆಯರು!

| Updated By: ಸಾಧು ಶ್ರೀನಾಥ್​

Updated on: Feb 16, 2023 | 1:21 PM

Karnataka Assembly Elections 2023: ಒಟ್ಟಿನಲ್ಲಿ ನಿವೇಶನ ರಹಿತ ಮಹಿಳೆಯರು, ತಲೆ ಮ್ಯಾಲೊಂದು ಸೂರು ಸಿಗುತ್ತೆ ಅಂತ ಹಗಲು ರಾತ್ರಿ ಕಷ್ಟಪಟ್ಟು ಇರೊ ಬರೊ ದಾಖಲೆಗಳನ್ನು ಹೊಂದಿಸಿಕೊಂಡು ನಿವೇಶನಕ್ಕೆ ಅರ್ಜಿ ಹಾಕ್ತಿದ್ದಾರೆ. ಚುನಾವಣೆ ಕಾಲೇ ಏನು ಬೇಕಾದರೂ ಘಟಿಸಬಹುದು.

Election Time: ಉಚಿತ ನಿವೇಶನ ಆಫರ್ ಹಿನ್ನೆಲೆ- ಅರ್ಜಿ ಹಾಕಲು ಬಿಸಿಲು ಧೂಳು ಲೆಕ್ಕಿಸದೆ ಮುಗಿಬಿದ್ದ ಚಿಕ್ಕಬಳ್ಳಾಪುರದ ಮಹಿಳೆಯರು!
ಅರ್ಜಿ ಹಾಕಲು ಬಿಸಿಲು ಧೂಳು ಲೆಕ್ಕಿಸದೆ ಮುಗಿಬಿದ್ದ ಚಿಕ್ಕಬಳ್ಳಾಪುರದ ಮಹಿಳೆಯರು!
Follow us on

ರಾಜ್ಯ ವಿಧಾನಸಭೆ ಚುನಾವಣೆ 2023 (Karnataka Assembly Elections 2023) ಹತ್ತಿರವಾಗ್ತಿದ್ದಂತೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಚುನಾವಣಾ ಆಕಾಂಕ್ಷಿಗಳು, ಮತದಾರರಿಗೆ ಆಫರ್ ಗಳ ಮೇಲೆ ಆಫರ್ ನೀಡ್ತಿದ್ದು, ಹಾಲಿ ಸಚಿವರೊಬ್ಬರು ತಮ್ಮ ಕ್ಷೇತ್ರದ ನಿವೇಶನ ರಹಿತ ಮಹಿಳೆಯರಿಗೆ 20 ಸಾವಿರ ನಿವೇಶನಗಳನ್ನು (Site) ಉಚಿತವಾಗಿ ನೀಡ್ತೀನಿ ಅರ್ಜಿ ಹಾಕಿ ಅಂತ ಹೇಳಿದ್ದೇ ತಡ, ಮಹಿಳೆಯರು ಮುಗಿಬಿದ್ದು ನೂಕು ನುಗ್ಗಲು ಮಾಡಿಕೊಂಡು ಅರ್ಜಿ ಹಾಕುತ್ತಿದ್ದಾರೆ. ಈ ಕುರಿತು ಒಂದು ವರದಿ. ಬಿಟ್ಟಿಯಾಗಿ ಸಿಕ್ಕಿದರೆ… ನನಗೊಂದು ನನ್ನ ತಮ್ಮ-ತಂಗಿಗೂ ಒಂದು ಎಂದು… ನನಗೆ ಜಾಗ ಬಿಡಿ, ಜಾಗ ಬಿಡಿ ಅಂತ ಹೀಗೆ… ಮುಗಿಬಿದ್ದು ಉಚಿತ ನಿವೇಶನ ಅರ್ಜಿಗಳನ್ನು ಹಾಕಲು ಮುಗಿಬಿದ್ದಿರುವುದು ಚಿಕ್ಕಬಳ್ಳಾಪುರದಲ್ಲಿ. ಹೌದು! ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ (Chikkaballapur) ಬಿಜೆಪಿ ಶಾಸಕರು ಹಾಗೂ ಆರೋಗ್ಯ, ವೈದ್ಯಕೀಯ ಶಿಕ್ಷಣ ಸಚಿವರಾಗಿರುವ ಡಾ. ಕೆ. ಸುಧಾಕರ್ (Karnataka Assembly Elections 2023), ತಮ್ಮ ಕ್ಷೇತ್ರದಲ್ಲಿರುವ ನಿವೇಶನ ರಹಿತ ಮಹಿಳೆಯರಿಗೆ ನಿವೇಶನ ನೀಡಲು ಮುಂದಾಗಿದ್ದು, 20 ಸಾವಿರ ನಿವೇಶನಗಳನ್ನು ರೆಡಿ ಮಾಡಿಸುತ್ತಿದ್ದಾರಂತೆ, ಇದ್ರಿಂದ ನಿವೇಶನ ರಹಿತರು ಅರ್ಜಿ ಹಾಕುವಂತೆ ಸಚಿವರು ಕರೆ ನೀಡಿದ್ದಾರೆ.

ಇನ್ನು ಕ್ಷೇತ್ರದ ನಿವೇಶನ ರಹಿತ ಮಹಿಳೆಯರು, ಒಂದೇ ಸಮಯದಲ್ಲಿ ಬಾಂಡ್ ಪೇಪರ್ ಪಡೆಯಲು ಮುಗಿಬಿದ್ದಿರುವ ಕಾರಣ ತಾಲೂಕು ಕಚೇರಿ, ಸಹಕಾರ ಸಂಘಗಳ ಕಚೇರಿ, ಸೈಬರ್ ಕೇಂದ್ರಗಳ ಮುಂದೆ ಜನಜಂಗುಳಿ ಆಗ್ತಿದೆ. ಬೆಳಿಗ್ಗೆಯಿಂದ ಸಂಜೆವರೆಗೂ ಮಹಿಳೆಯರು ಕೆಲಸ ಕಾರ್ಯ ಬಿಟ್ಟು ಬಾಂಡ್ ಪೇಪರ್ ಹಾಗೂ ದಾಖಲೆಗಳನ್ನು ಪಡೆಯಲು ಹರಸಾಹಸ ಮಾಡ್ತಿದ್ದಾರೆ.

ಒಟ್ಟಿನಲ್ಲಿ ನಿವೇಶನ ರಹಿತ ಮಹಿಳೆಯರು, ತಲೆ ಮ್ಯಾಲೊಂದು ಸೂರು ಸಿಗುತ್ತೆ ಅಂತ ಹಗಲು ರಾತ್ರಿ ಕಷ್ಟಪಟ್ಟು ಇರೊ ಬರೊ ದಾಖಲೆಗಳನ್ನು ಹೊಂದಿಸಿಕೊಂಡು ನಿವೇಶನಕ್ಕೆ ಅರ್ಜಿ ಹಾಕ್ತಿದ್ದಾರೆ. ಚುನಾವಣೆ ಕಾಲೇ ಏನು ಬೇಕಾದರೂ ಘಟಿಸಬಹುದು.

ವರದಿ: ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ