ಅಮಾಯಕರೇ ಟಾರ್ಗೆಟ್, ಕಣ್ಣೆದುರಿಗೇ ಮಹಾಮೋಸ! 16 ಜಿಲ್ಲೆಗಳ ಎಟಿಎಂ ಗ್ರಾಹಕರಿಗೆ ವಂಚಿಸುತ್ತಿದ್ದ ಖದೀಮ ಚಿಕ್ಕಬಳ್ಳಾಪುರದಲ್ಲಿ ಅಂದರ್!

| Updated By: ಸಾಧು ಶ್ರೀನಾಥ್​

Updated on: Dec 10, 2022 | 10:41 AM

ಮಂಗಳೂರಿನವರು ಬುದ್ದಿವಂತರು. ಹಾಗಾಗಿ ಅದೊಂದು ಜಿಲ್ಲೆಯನ್ನು ಹೊರತುಪಡಿಸಿ ಬಹುತೇಕ ಎಲ್ಲಾ ಜಿಲ್ಲೆಗಳ ಎ.ಟಿ.ಎಂ ಗ್ರಾಹಕರ ಹಣಕ್ಕೆ ಕನ್ನ ಹಾಕಿದ್ದಾಗಿ ಸ್ವತಃ ಆರೋಪಿ ಕಿರಣ್ ಚಿಕ್ಕಬಳ್ಳಾಪುರ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ.

ಅಮಾಯಕರೇ ಟಾರ್ಗೆಟ್, ಕಣ್ಣೆದುರಿಗೇ ಮಹಾಮೋಸ! 16 ಜಿಲ್ಲೆಗಳ ಎಟಿಎಂ ಗ್ರಾಹಕರಿಗೆ ವಂಚಿಸುತ್ತಿದ್ದ ಖದೀಮ ಚಿಕ್ಕಬಳ್ಳಾಪುರದಲ್ಲಿ ಅಂದರ್!
16 ಜಿಲ್ಲೆಗಳ ಎಟಿಎಂ ಗ್ರಾಹಕರಿಗೆ ವಂಚಿಸುತ್ತಿದ್ದ ಖದೀಮ ಚಿಕ್ಕಬಳ್ಳಾಪುರದಲ್ಲಿ ಅಂದರ್!
Follow us on

ಹಣ ಡ್ರಾ ಮಾಡಲು ATM ಗಳ ಬಳಿ ಬರುವ ಗ್ರಾಹಕರನ್ನೆ ಟಾರ್ಗೆಟ್ ಮಾಡ್ತಿದ್ದ ಅಸಾಮಿಯೊರ್ವ (Conman) ಅಮಾಯಕರಿಗೆ ಹಣ ಡ್ರಾ ಮಾಡಿಕೊಡುವ ನೆಪದಲ್ಲಿ ಹಾಗೂ ಬೇಗ ಹಣ ಡ್ರಾ ಮಾಡಿ ಕೊಡುವ ಸಲುವಾಗಿ ಗ್ರಾಹಕರ ATM ಕಾರ್ಡಗಳನ್ನು ಬದಲಾಯಿಸಿ ಹಾಗೂ ಅವರ ATM ಪಿನ್ ತಿಳಿದುಕೊಂಡು, ಒಂದಲ್ಲ ಎರಡಲ್ಲ ಬರೋಬ್ಬರಿ ರಾಜ್ಯದ 16 ಜಿಲ್ಲೆಗಳಲ್ಲಿ ನೂರಾರು ಜನ ATM ಗ್ರಾಹಕರ ಹಣ ಕದ್ದು ಗೋವಾದ ರೇಸಾರ್ಟ ನಲ್ಲಿ ಮೋಜು ಮಸ್ತಿ ಮಾಡ್ತಿದ್ದ. ಆದ್ರೆ ಈಗ ಆತನ ನಸೀಬು ಕೆಟ್ಟಿದ್ದು ಪೊಲೀಸರ (Chikkaballapur) ಅತಿಥಿಯಾಗಿದ್ದಾನೆ.

ಸಹಾಯದ ನೆಪದಲ್ಲಿ ನಾಟಕವಾಡಿ, ಜನರನ್ನ ಮಾತಿನಲ್ಲೇ ಮರುಳು ಮಾಡಿ ಮೋಸ ಮಾಡ್ತಿದ್ದ ಈ ಆರೋಪಿ (ATM thief). ಎಟಿಎಂಗಳನ್ನೇ ಟಾರ್ಗೆಟ್ ಮಾಡ್ತಿದ್ದ ಐನಾತಿಯ ಮಹಾ ಕಳ್ಳಾಟ ಇದೀಗ ಬಯಲಾಗಿದೆ.. ದೋಖಾ ಮಾಡಿದ ಹಣದಲ್ಲಿ ಬಿಂದಾಸ್ ದುನಿಯಾ ಮಾಡ್ತಿದ್ದವನ ಮಳ್ಳಾಟ ರಿವೀಲ್ ಆಗಿದೆ.

ಇದನ್ನೂ ಓದಿ:
ಕೆಜಿಎಫ್​ನಿಂದ ಬೆಂಗಳೂರಿಗೆ ಬರುತ್ತಿದ್ದ ರೈಲಿನಲ್ಲಿ ಮಹಿಳೆಯ ಶವ ಪತ್ತೆ, ತನಿಖೆ ಕೈಗೊಂಡ ರೈಲ್ವೆ ಪೊಲೀಸ್ರು

ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿದಾಗ… ATM ನಲ್ಲಿ ಹಣ ಡ್ರಾ ಮಾಡಲು ಬಂದವನಂತೆ ಕಟ್ಟುಮಸ್ತಾದ ಪೋಸ್ ನೀಡುತ್ತಾನೆ. ಈತನ ಹೆಸರು ಕಿರಣ್ ಅಲಿಯಾಸ್ ಶ್ರವಣಬೆಳಗೋಳ ಕಿರಣ್. ದುಡಿದು ತಿನ್ನಲು ದೇವರು ಒಳ್ಳೆ ಕಟ್ಟುಮಸ್ತಾದ ದೇಹ ನೀಡಿದ್ದಾನೆ. ಆದ್ರೆ ಈತನ ಘನಂದಾರಿ ಕೆಲಸ ಕೇಳಿದ್ರೆ ಎಂಥವರಿಗೂ ಸಿಟ್ಟುಬರುತ್ತೆ.

ಹೌದು! ಆರೋಪಿ ಕಿರಣ ATM ಗಳ ಬಳಿ ಬರುವ ಎಂಥವರನ್ನೇ ಆಗಲಿ ಯಾಮಾರಿಸಿ ಅವರಿಗೆ ಹಣ ಡ್ರಾ ಮಾಡಲು ಸಹಾಯ ಮಾಡಲು ಮುಂದಾಗುತ್ತಾನೆ. ತುರ್ತು ಹಣ ಡ್ರಾ ಮಾಡಿಕೊಡುವ ನೆಪದಲ್ಲಿ ಹಣ ಡ್ರಾ ಮಾಡಲು ಬರುವವರ ಎ.ಟಿ.ಎಂ. ಪಿನ್ ನೆನಪಿಟ್ಟುಕೊಂಡು ನಂತರ ಅವರ ಕಾರ್ಡಗಳನ್ನೆ ಬಳಸಿಕೊಂಡು ಹಣ ಡ್ರಾ ಮಾಡಿ ಯಾಮಾರಿಸ್ತಾನೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಗುಂಡಿನ ಸದ್ದು: ಬಿಲ್ಡರ್ ಹಾಗೂ ಕಟ್ಟಡ ಮಾಲೀಕನ ಮೇಲೆ ಆಂಧ್ರ ಗ್ಯಾಂಗ್​ನಿಂದ ಫೈರಿಂಗ್

ಹೀಗೆ ಒಂದಲ್ಲ ಎರಡಲ್ಲ ಬರೋಬ್ಬರಿ 16 ಜಿಲ್ಲೆಗಳ ಎ.ಟಿ.ಎಂ ಗ್ರಾಹಕರಿಗೆ ಯಾಮಾರಿಸಿ ಲಕ್ಷ ಲಕ್ಷ ಹಣ ದೋಚ್ತಿದ್ದ, ಆದ್ರೆ ಈಗ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಅದಕ್ಕೂ ಮುನ್ನ ಕಿರಣ್, ಎ.ಟಿ.ಎಂ ಕಾರ್ಡಗಳಲ್ಲಿ ಕದ್ದ ಹಣವನ್ನು ಬರಿ ಮೋಜು ಮಸ್ತಿ ಕ್ಯಾಸಿನೊ ದಲ್ಲಿ ಗೇಮ್ ಗಳನ್ನು ಆಡಲು ಬಳಸಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ರಾಜ್ಯದ 16 ಜಿಲ್ಲೆಗಳ ಎ.ಟಿ.ಎಂ ಗಳಲ್ಲಿ ಕದ್ದ ಹಣವನ್ನು ಗೋವಾದ ರೇಸಾರ್ಟಗಳಲ್ಲಿ ಮೋಜು ಮಸ್ತಿ ಮಾಡಿದ್ದಾನಂತೆ. ಕದ್ದ ಹಣದಲ್ಲೆವ ವಿಮಾನದಲ್ಲಿ ಪ್ರಯಾಣ ಮಾಡ್ತಿದ್ದಂತೆ, ಸದ್ಯ ರಾಜ್ಯದ್ಯಾಂತ 11 ಎಫ್.ಐ.ಆರ್ ಗಳಲ್ಲಿ ಕಿರಣ್ ಹೆಸರು ದಾಖಲಾಗಿದ್ದು, ಚಿಕ್ಕಬಳ್ಳಾಪುರ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ರಾಜ್ಯದಲ್ಲಿ ಮಂಗಳೂರಿನವರು ಬುದ್ದಿವಂತರು. ಹಾಗಾಗಿ ಅದೊಂದು ಜಿಲ್ಲೆಯನ್ನು ಹೊರತುಪಡಿಸಿ ಬಹುತೇಕ ಎಲ್ಲಾ ಜಿಲ್ಲೆಗಳ ಎ.ಟಿ.ಎಂ ಗ್ರಾಹಕರ ಹಣಕ್ಕೆ ಕನ್ನ ಹಾಕಿದ್ದಾಗಿ ಸ್ವತಃ ಆರೋಪಿ ಕಿರಣ್ ಚಿಕ್ಕಬಳ್ಳಾಪುರ ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾನೆ. ಇನ್ನೂ ATM ಗೆ ಬರುವ ಗ್ರಾಹಕರು ಅಪರಿಚಿತರಿಂದ ಹುಷಾರಾಗಿ ಇರುವಂತೆ ಪೊಲೀಸರು ಮನವಿ ಮಾಡಿದ್ದಾರೆ. (ವರದಿ: ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ)

ಇನ್ನಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ