AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಛತ್ತೀಸ್​ಗಡದಿಂದ ಬೆಂಗಳೂರಿಗೆ ಸಾಗಿಸುತ್ತಿದ್ದ 35 ಲಕ್ಷ ರೂಪಾಯಿ ಮೌಲ್ಯದ ಬಿಯರ್ ಜಪ್ತಿ

ಚುನಾವಣಾ ಅಕ್ರಮ ತಡೆಯಲು ನೀತಿ ಸಂಹಿತೆ ಜಾರಿಯಾಗಿದೆ. ಈ ಮಧ್ಯೆ ಅನಧಿಕೃತವಾಗಿ ಛತ್ತೀಸ್​ಗಡ ರಾಜ್ಯದಿಂದ ಬೆಂಗಳೂರಿನ ವೈಟ್ ಫೀಲ್ಡಿಗೆ 35 ಲಕ್ಷ ರೂಪಾಯಿ ಮೌಲ್ಯದ ಬೀಯರ್​ನ್ನು ಕಂಟೈನರ್ ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ 44 ರ ಅಗಲಗುರ್ಕಿ ಗ್ರಾಮದ ಬಳಿ ವಶಕ್ಕೆ ಪಡೆಯಲಾಗಿದೆ.

ಛತ್ತೀಸ್​ಗಡದಿಂದ ಬೆಂಗಳೂರಿಗೆ ಸಾಗಿಸುತ್ತಿದ್ದ 35 ಲಕ್ಷ ರೂಪಾಯಿ ಮೌಲ್ಯದ ಬಿಯರ್ ಜಪ್ತಿ
ಅಕ್ರಮ ಮದ್ಯೆ ವಶ
ಕಿರಣ್ ಹನುಮಂತ್​ ಮಾದಾರ್
|

Updated on: Apr 06, 2023 | 3:48 PM

Share

ಚಿಕ್ಕಬಳ್ಳಾಪುರ: ರಾಜ್ಯ ವಿಧಾನಸಭೆ ಚುನಾವಣಾ(Karnataka Assembly Election) ದಿನಾಂಕ ಈಗಾಗಲೇ ಘೋಷಣೆಯಾಗಿದ್ದು, ಚುನಾವಣಾ ಅಕ್ರಮ ತಡೆಯಲು ನೀತಿ ಸಂಹಿತೆ ಜಾರಿಯಾಗಿದೆ. ರಾಜ್ಯದ ಪ್ರತಿಯೊಂದು ಜಿಲ್ಲೆಗಳಲ್ಲಿಯೂ ಚೆಕ್​ಪೋಸ್ಟ್​ಗಳನ್ನ ತೆಗೆದು ಅಕ್ರಮ ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ. ಈ ಮಧ್ಯೆ ಅನಧಿಕೃತವಾಗಿ ಛತ್ತೀಸ್​ಗಡ ರಾಜ್ಯದಿಂದ ಬೆಂಗಳೂರಿನ ವೈಟ್ ಫೀಲ್ಡಿಗೆ 35 ಲಕ್ಷ ರೂಪಾಯಿ ಮೌಲ್ಯದ ಬಿಯರ್​ರ​ನ್ನು ಕಂಟೈನರ್ ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ 44 ರ ಅಗಲಗುರ್ಕಿ ಗ್ರಾಮದ ಬಳಿ ಚಿಕ್ಕಬಳ್ಳಾಪುರ ಅಬಕಾರಿ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಹೌದು ಅಕ್ರಮವಾಗಿ ಸಾಗಿಸುತ್ತಿದ್ದ 35 ಲಕ್ಷ ರೂಪಾಯಿ ಮೌಲ್ಯದ 13, 800 ಲೀಟರ್ ಮದ್ಯವನ್ನ ಹಾಗೂ ಲಾರಿಯನ್ನು ಕೂಡ ಜಪ್ತಿ ಮಾಡಿ, ಲಾರಿ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಬಳಿಕ ಇದು ಛತ್ತೀಸ್​ಗಡದ ಸೋನಾ ಬ್ರೀವೇಜಸ್ ಕಂಪನಿಗೆ ಸೇರಿದ ಮದ್ಯ ಆಗಿದ್ದು, ಮದ್ಯ ಸಾಗಾಟಕ್ಕೆ ಪಡೆದಿದ್ದ ಅನುಮತಿಯ ಅವಧಿ ಎಪ್ರಿಲ್ 2ರಂದೆ ಮುಗಿದಿದ್ದು, ಆದರೂ ಕೂಡ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಕಾರಣ ಅನುಮಾನ ವ್ಯಕ್ತವಾಗಿದೆ. ಕರ್ನಾಟಕ ಅಬಕಾರಿ ಕಾಯ್ದೆ ಉಲ್ಲಂಘನೆ ಹಿನ್ನಲೆ ಅಬಕಾರಿ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ತೀವ್ರಗೋಳಿಸಿದ್ದಾರೆ.

ಇದನ್ನೂ ಓದಿ:ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡಿದ ಖಾಸಗಿ ಬಸ್​​ಗಳು​​: ಬೆಂಗಳೂರು, ಉಡುಪಿಯಲ್ಲಿ ಆರ್​​ಟಿಒ ಅಧಿಕಾರಿಗಳ ಕಾರ್ಯಾಚರಣೆ

ಅಕ್ರಮವಾಗಿ ಸಾಗಿಸುತ್ತಿದ್ದ 1.68 ಲಕ್ಷ ಮೌಲ್ಯದ 561 ಸೀರೆಗಳು ಜಪ್ತಿ

ಗದಗ: ಜಿಲ್ಲೆಯ ಚೆಕ್ ಪೋಸ್ಟ್​ಗಳಲ್ಲಿ ಈಗಾಗಲೇ ಹದ್ದಿನ‌ ಕಣ್ಣು ಇಡಲಾಗಿದ್ದು, ಅಕ್ರಮವಾಗಿ ಸಾಗಿಸುತ್ತಿದ್ದ 1.68 ಲಕ್ಷ ಮೌಲ್ಯದ 561 ಸೀರೆಗಳನ್ನ

ತಾಲೂಕಿನ ದುಂದೂರ ಚೆಕ್ ಪೋಸ್ಟ್​ನಲ್ಲಿ ಚುನಾವಣೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಹುಬ್ಬಳ್ಳಿಯಿಂದ ಗದಗ ನಗರ ಕಡೆ ಸಾಗಿಸುತ್ತಿದ್ದ ವೇಳೆ

ಚೆಕ್ ಪೊಸ್ಟ್ ನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಗದಗ ಎಸ್ಪಿ ಬಿ ಎಸ್ ನೇಮಗೌಡ ಮಾಹಿತಿ ನೀಡಿದ್ದಾರೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ