ಚಿಕ್ಕಬಳ್ಳಾಪುರದಲ್ಲಿ ಕಾಂಕ್ರೀಟ್ ಕುಸಿತ ಪ್ರಕರಣ: ಮೇಸ್ತ್ರಿ ಚಂದನ್, ಕುಪ್ಪಂಸ್ವಾಮಿ ವಿರುದ್ಧ ಪ್ರಕರಣ ದಾಖಲು

| Updated By: ಆಯೇಷಾ ಬಾನು

Updated on: Dec 27, 2022 | 12:10 PM

ಕಾಮಗಾರಿ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಆರೋಪ ಹಿನ್ನೆಲೆ ಪೆರೇಸಂದ್ರ ಠಾಣೆಯಲ್ಲಿ ಮೇಸ್ತ್ರಿ ಚಂದನ್ ಕುಸುವಾ, ಕುಪ್ಪಂಸ್ವಾಮಿ ವಿರುದ್ಧ ಪ್ರಕರಣ ದಾಖಲಾಗಿದೆ.

ಚಿಕ್ಕಬಳ್ಳಾಪುರದಲ್ಲಿ ಕಾಂಕ್ರೀಟ್ ಕುಸಿತ ಪ್ರಕರಣ: ಮೇಸ್ತ್ರಿ ಚಂದನ್, ಕುಪ್ಪಂಸ್ವಾಮಿ ವಿರುದ್ಧ ಪ್ರಕರಣ ದಾಖಲು
ಘಟನಾ ಸ್ಥಳ
Follow us on

ಚಿಕ್ಕಬಳ್ಳಾಪುರ: ಮೆಡಿಕಲ್ ಕಾಲೇಜು (Government Medical College) ಕಾಮಗಾರಿ ನಿರ್ವಹಣೆ ವೇಳೆ ಮೌಲ್ಡಿಂಗ್ ಕುಸಿತ (Concrete slab collapse) ಪ್ರಕರಣಕ್ಕೆ ಸಂಬಂಧಿಸಿ ಮೇಸ್ತ್ರಿ ಚಂದನ್ ಕುಸುವಾ, ಕುಪ್ಪಂಸ್ವಾಮಿ ವಿರುದ್ಧ ಪ್ರಕರಣ ದಾಖಲಾಗಿದೆ. ಕಾಮಗಾರಿ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಆರೋಪ ಹಿನ್ನೆಲೆ ಪೆರೇಸಂದ್ರ ಠಾಣೆಯಲ್ಲಿ ಐಪಿಸಿ ಸೆಕ್ಷನ್ 337ರ ಅಡಿ ಪ್ರಕರಣ ದಾಖಲಾಗಿದೆ.

ನಿರ್ಮಾಣ ಹಂತದ ಕಾಲೇಜು ಕಟ್ಟಡದ ಸ್ಲ್ಯಾಬ್​ ಕುಸಿದು 10 ಕಾರ್ಮಿಕರಿಗೆ ಗಾಯ

ಡಿಸೆಂಬರ್ 25ರಂದು ರಾತ್ರಿ 9ಗಂಟೆಗೆ ಚಿಕ್ಕಬಳ್ಳಾಪುರ (Chikkaballapura) ತಾಲೂಕಿನ ಅರೂರು ಗ್ರಾಮದ ಬಳಿ ನಿರ್ಮಾಣ ಹಂತದ ಮೆಡಿಕಲ್ ಕಾಲೇಜು ಕಟ್ಟಡದ (Medical College) ಸ್ಲ್ಯಾಬ್​ ಕುಸಿದು 10 ಕಾರ್ಮಿಕರು (workers) ಗಾಯಗೊಂಡಿದ್ದರು. ಗಾಯಾಳು ಕಾರ್ಮಿಕರನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾವತ್ ಕಾರ್ಮಿಕರು ಪ್ರಾಣಾಪಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ: Hubballi News: ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದ ಟಿಕೆಟ್‌ಗಾಗಿ ಕಾಂಗ್ರೆಸ್ ಕಚೇರಿಯಲ್ಲಿ ಕಿತ್ತಾಟ, ಜಯಘೋಷ

ನಿರ್ಮಾಣ ಹಂತದ ಸರ್ಕಾರಿ ಮೆಡಿಕಲ್ ಕಾಲೇಜಿನಕಾಮಗಾರಿ ವೇಳೆ 20X30 ಅಳತೆಯ ಕಾಂಕ್ರೀಟ್ ಸ್ಲ್ಯಾಬ್​​ ಕುಸಿತವಾಗಿದೆ  ಎಂದು ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್  ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಕ್ರೀಟ್ ಹಾಕುವ ವೇಳೆ ಘಟನೆ ನಡೆದಿದೆ. ಇದಕ್ಕೆ ಏನು ಕಾರಣವೆಂದು ಇಂಜಿನಿಯರ್ ಹೇಳಬೇಕಿದೆ. ಕಾಂಕ್ರೀಟ್ ಹಾಕುವ ಸಂದರ್ಭದಲ್ಲಿ ಏಕಾಏಕಿ ಕುಸಿದುಬಿದ್ದಿದೆ. ಸಣ್ಣಪುಟ್ಟ ಲೋಪದೋಷಗಳು ಆಗಿರುತ್ತದೆ, ಸರಿಪಡಿಸುತ್ತಾರೆ. ಕಾಮಗಾರಿ ತ್ವರಿತವಾಗಿ ಮುಗಿಸಲು ಕಾರ್ಮಿಕರು ರಾತ್ರಿ ಪಾಳಿಯಲ್ಲೂ ಕೆಲಸ ಮಾಡಿರಬೇಕು. ಸುರಕ್ಷತಾ ಕ್ರಮ ಕೈಗೊಂಡಿದ್ದಾರೋ ಇಲ್ಲವೋ ಎಂದು ನೋಡುತ್ತೇವೆ. ನಿರ್ಲಕ್ಷ್ಯ ಮಾಡಿದ್ದರೆ ಗುತ್ತಿಗೆದಾರರ ವಿರುದ್ಧ ಕ್ರಮಕೈಗೊಳ್ಳುತ್ತೇವೆ ಎಂದಿದ್ದರು. ಸದ್ಯ ಈಗ ಕಾಮಗಾರಿ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಆರೋಪ ಹಿನ್ನೆಲೆ ಪೆರೇಸಂದ್ರ ಠಾಣೆಯಲ್ಲಿ ಮೇಸ್ತ್ರಿ ಚಂದನ್ ಕುಸುವಾ, ಕುಪ್ಪಂಸ್ವಾಮಿ ವಿರುದ್ಧ ಪ್ರಕರಣ ದಾಖಲಾಗಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ