ಚಿಕ್ಕಬಳ್ಳಾಫುರ: ಜಿಲ್ಲೆಯ ಚಿಂತಾಮಣಿಯ ಕನ್ನಂಪಲ್ಲಿ ಬಳಿ ನನಗೆ ಮಾಹಿತಿಯಿಲ್ಲದೆ ಕೆಲವರು ನನ್ನ ಜಮೀನು ಸೇಲ್ ಡೀಡ್ ಮಾಡಿಕೊಂಡಿದ್ದಾರೆಂದು ಆರೋಪಿಸಿ, ತಂದೆ ಗಂಗರಾಜು(32) ಹಾಗೂ ಮೂವರು ಮಕ್ಕಳಾದ ಮಕ್ಕಳಾದ ನಿತೀನ್(4) ಅಂಕಿತ(11) ನಿಕೀಲ್ (10) ಮದ್ಯರಾತ್ರಿ 60 ಅಡಿ ಎತ್ತರದ ಮೊಬೈಲ್ ಟವರ್ ಏರಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಪೊಲೀಸರು ಭೇಟಿ ನೀಡಿದ್ದು, ಅಧಿಕಾರಿಗಳು ಜಮೀನು ವಿವಾದ ಬಗೆಯರಿಸುವುದಾಗಿ ಭರವಸೆ ಕೊಟ್ಟ ಹಿನ್ನಲೆ ಗಂಗರಾಜು ಹಾಗೂ ಆತನ ಮಕ್ಕಳನ್ನು ಕೆಳಗೆ ಇಳಿಯುತ್ತಿದ್ದಾರೆ.
ಜಮೀನು ವಿವಾದದಲ್ಲಿ ಅನ್ಯಾಯವಾಗಿದ್ದು, ಗ್ರಾಮದ ವೆಂಕಟರೆಡ್ಡಿ, ಮಲ್ಲಪ್ಪ, ನಾರಾಯಣಪ್ಪ ಎಂಬುವವರು ಮೂಗಲಮರಿ ಗ್ರಾಮದ ಸರ್ವೆ ನಂ 72 ರಲ್ಲಿದ್ದ ಗಂಗರಾಜು ಜಮೀನನ್ನು ತನಗೆ ಮಾಹಿತಿಯಿಲ್ಲದೆ ನನ್ನ ಜಮೀನು ಸೇಲ್ ಡೀಡ್ ಮಾಡಿಕೊಂಡಿದ್ದಾರೆಂದು ಆರೋಪಿಸಿದ್ದಾನೆ. ಜೊತೆಗೆ ತನಗಾದ ಮೋಸಕ್ಕೆ ಪೊಲೀಸ್ ಕಂದಾಯ ಇಲಾಖೆಯಲ್ಲಿ ನ್ಯಾಯ ಸಿಕ್ಕಿಲ್ಲವೆಂದು, ನ್ಯಾಯಕ್ಕಾಗಿ ಆಗ್ರಹಿಸಿ ಮಕ್ಕಳ ಜೊತೆ ಟವರ್ ಏರಿದ್ದಾನೆ. ಸತತ ಎರಡು ಗಂಟೆಗಳ ಕಾಲ ಗಂಗರಾಜುನನ್ನ ಮನವೋಲಿಸಿ ನಾಲ್ವರನ್ನು ಕೆಳಗೆ ಇಳಿಸಿದ್ದಾರೆ. ಇನ್ನು ಈ ಘಟನೆಯು ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ