Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಬಳ್ಳಾಪುರದಲ್ಲಿ ಕಾಂಕ್ರೀಟ್ ಕುಸಿತ ಪ್ರಕರಣ: ಕಾಮಗಾರಿ ತ್ವರಿತವಾಗಿ ಮುಗಿಸಲು ರಾತ್ರಿಪಾಳಿಯಲ್ಲೂ ಕೆಲಸ ಮಾಡಿರುವ ಶಂಕೆ

ಕಾಲೇಜು ನಿರ್ಮಾಣ ಕಾಮಗಾರಿ ವೇಳೆ ಕಾಂಕ್ರೀಟ್ ಕುಸಿತಕ್ಕೆ ಸ್ಪಷ್ಟವಾದ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಇಂಜಿನಿಯರ್ ತಿಳಿಸಬೇಕು ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಹೇಳಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಕಾಂಕ್ರೀಟ್ ಕುಸಿತ ಪ್ರಕರಣ: ಕಾಮಗಾರಿ ತ್ವರಿತವಾಗಿ ಮುಗಿಸಲು ರಾತ್ರಿಪಾಳಿಯಲ್ಲೂ ಕೆಲಸ ಮಾಡಿರುವ ಶಂಕೆ
ಕುಸಿತಗೊಂಡ ಕಾಂಕ್ರೀಟ್ ಸ್ಲ್ಯಾಬ್ ಮತ್ತು ನಿರ್ಮಾಣ ಹಂತದ ಮೆಡಿಕಲ್ ಕಾಲೇಜು ಕಟ್ಟಡ
Follow us
TV9 Web
| Updated By: Rakesh Nayak Manchi

Updated on:Dec 25, 2022 | 6:53 AM

ಚಿಕ್ಕಬಳ್ಳಾಪುರ: ನಿರ್ಮಾಣ ಹಂತದ ಸರ್ಕಾರಿ ಮೆಡಿಕಲ್ ಕಾಲೇಜಿನ (Government Medical College) ಕಾಮಗಾರಿ ವೇಳೆ 20X30 ಅಳತೆಯ ಕಾಂಕ್ರೀಟ್ ಸ್ಲ್ಯಾಬ್​​ ಕುಸಿತವಾಗಿದೆ (Concrete slab collapse) ಎಂದು ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ (Chikkaballapura DC N.M.Nagaraj)​ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಕ್ರೀಟ್ ಹಾಕುವ ವೇಳೆ ಘಟನೆ ನಡೆದಿದೆ. ಇದಕ್ಕೆ ಏನು ಕಾರಣವೆಂದು ಇಂಜಿನಿಯರ್ ಹೇಳಬೇಕಿದೆ. ಕಾಂಕ್ರೀಟ್ ಹಾಕುವ ಸಂದರ್ಭದಲ್ಲಿ ಏಕಾಏಕಿ ಕುಸಿದುಬಿದ್ದಿದೆ. ಸಣ್ಣಪುಟ್ಟ ಲೋಪದೋಷಗಳು ಆಗಿರುತ್ತದೆ, ಸರಿಪಡಿಸುತ್ತಾರೆ. ಕಾಮಗಾರಿ ತ್ವರಿತವಾಗಿ ಮುಗಿಸಲು ಕಾರ್ಮಿಕರು ರಾತ್ರಿ ಪಾಳಿಯಲ್ಲೂ ಕೆಲಸ ಮಾಡಿರಬೇಕು. ಸುರಕ್ಷತಾ ಕ್ರಮ ಕೈಗೊಂಡಿದ್ದಾರೋ ಇಲ್ಲವೋ ಎಂದು ನೋಡುತ್ತೇವೆ. ನಿರ್ಲಕ್ಷ್ಯ ಮಾಡಿದ್ದರೆ ಗುತ್ತಿಗೆದಾರರ ವಿರುದ್ಧ ಕ್ರಮಕೈಗೊಳ್ಳುತ್ತೇವೆ ಎಂದರು.

ಇದನ್ನೂ ಓದಿ: ಚಾಮರಾಜನಗರ: ಬಿಆರ್​ಟಿ ಅರಣ್ಯ ವಲಯದಲ್ಲಿ ಕರಡಿ ದಾಳಿಗೆ ದನಗಾಹಿ ಬಲಿ

ಚಿಕ್ಕಬಳ್ಳಾಪುರ ತಾಲೂಕಿನ ಅರೂರು ಗ್ರಾಮದ ಬಳಿ ನಿರ್ಮಾಣ ಹಂತದ ಮೆಡಿಕಲ್ ಕಾಲೇಜು ಕಟ್ಟಡದ ಸ್ಲ್ಯಾಬ್​ ಕುಸಿದಿತ್ತು. ಈ ದುರ್ಘಟನೆಯಲ್ಲಿ 10 ಕಾರ್ಮಿಕರು ಗಾಯಗೊಂಡಿದ್ದರು. ಕೂಡಲೇ ಗಾಯಾಳು ಕಾರ್ಮಿಕರನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಅದೃಷ್ಟವಶಾವತ್ ಕಾರ್ಮಿಕರು ಪ್ರಾಣಾಪಯದಿಂದ ಪಾರಾಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:53 am, Sun, 25 December 22

ಬಾಹ್ಯಾಕಾಶದಿಂದ ಭೂಮಿಗೆ ಮರಳಿದ ಬಳಿಕ ಕ್ಯಾಪ್ಸುಲ್​ನಿಂದ ಹೊರ ಬಂದ ಸುನಿತಾ
ಬಾಹ್ಯಾಕಾಶದಿಂದ ಭೂಮಿಗೆ ಮರಳಿದ ಬಳಿಕ ಕ್ಯಾಪ್ಸುಲ್​ನಿಂದ ಹೊರ ಬಂದ ಸುನಿತಾ
‘ನನ್ನ ಕೊಲೆಗೆ ಡಿಕೆಶಿ ಸಹೋದರರು​ ಸೇರಿ 4 ಜನರಿಂದ ಸ್ಕೆಚ್’: ಮುನಿರತ್ನ ಆರೋಪ
‘ನನ್ನ ಕೊಲೆಗೆ ಡಿಕೆಶಿ ಸಹೋದರರು​ ಸೇರಿ 4 ಜನರಿಂದ ಸ್ಕೆಚ್’: ಮುನಿರತ್ನ ಆರೋಪ
Daily Devotional: ಪೂಜೆ ಸಮಯದಲ್ಲಿ ಅಗರಬತ್ತಿ ಬಳಕೆಯ ಮಹತ್ವ ತಿಳಿಯಿರಿ
Daily Devotional: ಪೂಜೆ ಸಮಯದಲ್ಲಿ ಅಗರಬತ್ತಿ ಬಳಕೆಯ ಮಹತ್ವ ತಿಳಿಯಿರಿ
ಸುನಿತಾ ವಿಲಿಯಮ್ಸ್, ವಿಲ್ಮೋರ್ ಲ್ಯಾಂಡಿಂಗ್: ಅದ್ಭುತ ವಿಡಿಯೋ ಇಲ್ಲಿದೆ ನೋಡಿ
ಸುನಿತಾ ವಿಲಿಯಮ್ಸ್, ವಿಲ್ಮೋರ್ ಲ್ಯಾಂಡಿಂಗ್: ಅದ್ಭುತ ವಿಡಿಯೋ ಇಲ್ಲಿದೆ ನೋಡಿ
Daily Horoscope: ಮಿಥುನ ರಾಶಿಯವರಿಗೆ ಆರು ಗ್ರಹಗಳ ಶುಭಫಲವಿದೆ
Daily Horoscope: ಮಿಥುನ ರಾಶಿಯವರಿಗೆ ಆರು ಗ್ರಹಗಳ ಶುಭಫಲವಿದೆ
ಪುನೀತ್ ರಾಜ್​ಕುಮಾರ್ ಬಗ್ಗೆ ಅರ್ಧಗಂಟೆ ಮಾತನಾಡಿದ ರಶ್ಮಿಕಾ ಮಂದಣ್ಣ
ಪುನೀತ್ ರಾಜ್​ಕುಮಾರ್ ಬಗ್ಗೆ ಅರ್ಧಗಂಟೆ ಮಾತನಾಡಿದ ರಶ್ಮಿಕಾ ಮಂದಣ್ಣ
ಪತಿಯೊಂದಿಗೆ ಜಗಳವಾಡಿ ವಿದ್ಯುತ್ ಟವರ್ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ಪತ್ನಿ
ಪತಿಯೊಂದಿಗೆ ಜಗಳವಾಡಿ ವಿದ್ಯುತ್ ಟವರ್ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ಪತ್ನಿ
ಶಿವಪುರಿಯ ಮಾತಟಿಲಾ ಡ್ಯಾಂನಲ್ಲಿ ಮುಳುಗಿದ ದೋಣಿ; 7 ಜನ ಸಾವನ್ನಪ್ಪಿರುವ ಶಂಕೆ
ಶಿವಪುರಿಯ ಮಾತಟಿಲಾ ಡ್ಯಾಂನಲ್ಲಿ ಮುಳುಗಿದ ದೋಣಿ; 7 ಜನ ಸಾವನ್ನಪ್ಪಿರುವ ಶಂಕೆ
ಕೋರ್ಟ್​ ಆದೇಶ ಹಾಗೂ ವ್ಯಕ್ತಿ ಪ್ರಾಣಕ್ಕೂ ಬೆಲೆ ಕೊಡದ KSRTC, ಬಸ್ ಜಪ್ತಿ!
ಕೋರ್ಟ್​ ಆದೇಶ ಹಾಗೂ ವ್ಯಕ್ತಿ ಪ್ರಾಣಕ್ಕೂ ಬೆಲೆ ಕೊಡದ KSRTC, ಬಸ್ ಜಪ್ತಿ!
ಚಂದನ್ ಶೆಟ್ಟಿ ಜೊತೆ ಮದುವೆ ಗಾಸಿಪ್, ಸ್ಪಷ್ಟನೆ ಕೊಟ್ಟ ಸಂಜನಾ
ಚಂದನ್ ಶೆಟ್ಟಿ ಜೊತೆ ಮದುವೆ ಗಾಸಿಪ್, ಸ್ಪಷ್ಟನೆ ಕೊಟ್ಟ ಸಂಜನಾ