Chikkaballapur: ಜ.15ಕ್ಕೆ ಉಪರಾಷ್ಟ್ರಪತಿ ಇಶಾ ಫೌಂಡೇಷನ್ ಗೆ ಭೇಟಿ, ದಾರಿ ನವೀಕರಣ ವಿರುದ್ಧ ವಾಗ್ವಾದ, ಹೈಡ್ರಾಮಾ, ರೈತರಿಂದ ತರಾಟೆ
Isha Foundation: ಆಗ ರಸ್ತೆ ಅಭಿವೃದ್ದಿ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳಲಿಲ್ಲ. ಆದ್ರೆ ಈಗ ಉಪ ರಾಷ್ಟ್ರಪತಿ ಚಿಕ್ಕಬಳ್ಳಾಪುರ ತಾಲೂಕಿನ ಇಶಾ ಫೌಂಡೇಶನ್ ಗೆ ಭೇಟಿ ನೀಡುವ ಕಾರಣ, ರಸ್ತೆ ನವೀಕರಣಕ್ಕೆ ಮುಂದಾಗಿರುವಾಗ.. ಕೆಲವು ರೈತರು ವಿರೋಧ ವ್ಯಕ್ತಪಡಿಸಿ ಧರಣಿ ಪ್ರತಿಭಟನೆ ಮಾಡ್ತಿರೋದು ವಿಪರ್ಯಾಸವೆ ಸರಿ.
ಚಿಕ್ಕಬಳ್ಳಾಪುರ: ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರು ಮುಂದಿನ ವರ್ಷ ಜನವರಿ 15ರಂದು ಚಿಕ್ಕಬಳ್ಳಾಪುರ ತಾಲೂಕಿನ ಇಶಾ ಫೌಂಡೇಷನ್ (Sadhuguru Jaggi Vasudev) ಗೆ ಭೇಟಿ ನೀಡಲಿದ್ದು, ಇಶಾ ಫೌಂಡೇಷನ್ (Isha Foundation)ಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಚಿಕ್ಕಬಳ್ಳಾಪುರ (Chikkaballapur) ಜಿಲ್ಲಾಡಳಿತ ತರಾತುರಿಯಾಗಿ ನವೀಕರಣ ಹಾಗೂ ರಸ್ತೆ ಅಗಲೀಕರಣ ಮಾಡ್ತಿದೆ. ಆದರೆ ರಸ್ತೆ ಬದಲು ಪಕ್ಕದ ರೈತರ ಜಮೀನನ್ನು ಒತ್ತುವರಿ ಮಾಡಲಾಗ್ತಿದೆ ಅಂತಾ ರೈತರು (Farmers) ಇಟಾಚಿ ಜೆ.ಸಿ.ಬಿ. ಗಳಿಗೆ ಅಡ್ಡ ಕುಳಿತು ಪಿ.ಡಬ್ಲ್ಯೂ .ಡಿ ಇಂಜಿನಿಯರ್ ಗಳಿಗೆ ತರಾಟೆ ತೆಗೆದುಕೊಂಡ ಪ್ರಸಂಗ ನಡೆದಿದೆ. ಈ ಕುರಿತು ಒಂದು ವರದಿ.
ರಸ್ತೆ ನವೀಕರಣ ಮಾಡೊ ಇಟಾಚಿ, ಜೆ.ಸಿ.ಬಿ.ಗಳಿಗೆ ಅಡ್ಡ ಕುಳಿತು, ಸ್ಥಳಕ್ಕೆ ಬಂದ ಪಿ.ಡಬ್ಲ್ಯೂ .ಡಿ ಇಂಜಿನಿಯರ್ ಗಳು ಹಾಗೂ ಪೊಲೀಸರ ಜೊತೆ, ರೈತರು ವಾಗ್ವಾದ ಮಾಡುತ್ತಿರುವುದು ಚಿಕ್ಕಬಳ್ಳಾಪುರ ತಾಲೂಕಿನ ಮುಷ್ಟೂರು ಗ್ರಾಮದ ಬಳಿ. ಚಿಕ್ಕಬಳ್ಳಾಪುರದ ಮುಷ್ಟೂರು ಗ್ರಾಮದಿಂದ ಗೊಂದಹಳ್ಳಿ ಗ್ರಾಮದ ವರೆಗೂ… ಪಿ.ಡಬ್ಲ್ಯೂ .ಡಿ ರಸ್ತೆಯನ್ನು ನವೀಕರಣ ಮಾಡಿ ಡಾಂಬರಿಕರೀಣ ಮಾಡುವ ಕಾಮಗಾರಿ ನಡೆಯುತ್ತಿದೆ.
ಆದ್ರೆ ಮುಷ್ಟೂರು ಬಳಿ ಕೆಲವು ರೈತರ ಜಮೀನಿನ ಬಳಿ… ನಕಾಶೆಯನ್ನು ಇರುವ ರಸ್ತೆಯ ಬದಲು ಪಕ್ಕದಲ್ಲಿ ರಸ್ತೆ ನಿರ್ಮಾಣ ಮಾಡಲಾಗ್ತಿದೆ. ಇದ್ರಿಂದ ಕಾಮಗಾರಿಗೆ ಅಕ್ರಮವಾಗಿ ತಮ್ಮ ಜಮೀನನ್ನು ಬಳಸಿಕೊಳ್ಳಲಾಗ್ತಿದೆ ಎಂದು ಆರೋಪಿಸಿ ಕೆಲವು ರೈತರು…. ಇಟಾಚಿ ಜೆ.ಸಿ.ಬಿ.ಗಳಿಗೆ ಅಡ್ಡ ಕುಳಿತು ಪಿ.ಡಬ್ಲ್ಯೂ .ಡಿ ಇಂಜಿನಿಯರ್ ಗಳನ್ನು ತರಾಟೆ ತೆಗೆದುಕೊಂಡರು.
Also Read:
Chikkaballapur: ಸದ್ಗುರು ಜಗ್ಗಿ ವಾಸುದೇವ್ ಇಶಾ ಫೌಂಡೇಶನ್ ಜಮೀನಿಗೆ ದಾರಿ ಯಾವುದಯ್ಯಾ? ಜಮೀನಿಗೆ ಹೋಗಲು ಖಾಸಗಿ ವ್ಯಕ್ತಿ ದಾರಿ ಬಿಡ್ತಿಲ್ಲವಂತೆ!
ಇನ್ನು ಜನವರಿ 15ರಂದು ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರು ಚಿಕ್ಕಬಳ್ಳಾಪುರ ತಾಲೂಕಿನ ಇಶಾ ಫೌಂಡೇಶನ್ ಗೆ ಭೇಟಿ ನೀಡುವ ಕಾರಣ, ಇಶಾ ಫೌಂಡೇಶನ್ ಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು… ಚಿಕ್ಕಬಳ್ಳಾಪುರ ಜಿಲ್ಲಾಡಳಿತ ತರಾತುರಿಯಲ್ಲಿ ರಸ್ತೆ ನವೀಕರಣ ಹಾಗೂ ರಸ್ತೆ ಅಗಲೀಕರಣ ಮಾಡ್ತಿದೆ. ಆದ್ರೆ ಮುಷ್ಟೂರು ಬಳಿ ಎರಡು ಮೂರು ದಶಕಗಳ ಮೊದಲೆ ಇದ್ದ ರಸ್ತೆ ಅಭಿವೃದ್ದಿಗೆ ಮುಂದಾಗಿದ್ದಕ್ಕೆ ಕೆಲವು ರೈತರು ಆಕ್ಷೇಪ ವ್ಯಕ್ತಪಡಿಸಿ, ನಕಾಶೆಯಲ್ಲಿ ರಸ್ತೆ ಇರುವಂತೆ ರಸ್ತೆ ಮಾಡಿ ಅಂತ ಪಟ್ಟು ಹಿಡಿದಿದ್ರೆ… ಇಂಜಿನಿಯರ್ ಗಳ ವಾದವೇ ಬೇರೆ.
ಚಿಕ್ಕಬಳ್ಳಾಪುರದ ಮುಷ್ಟೂರು ರಸ್ತೆ ಹಳ್ಳ ಕೊಳ್ಳದಂತಾಗಿತ್ತು. ರಸ್ತೆ ದುರಸ್ಥಿತಿಗೆ ಆಗ್ರಹಿಸಿ ಮೊದಲು ಗ್ರಾಮಸ್ಥರು ಧರಣಿ ಪ್ರತಿಭಟನೆ ನಡೆಸಿದ್ದರು. ಆದ್ರೆ ಆಗ ರಸ್ತೆಯ ಅಭಿವೃದ್ದಿ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳಲಿಲ್ಲ. ಆದ್ರೆ ಈಗ ಜನವರಿ 15ರಂದು ಉಪ ರಾಷ್ಟ್ರಪತಿ ಚಿಕ್ಕಬಳ್ಳಾಪುರ ತಾಲೂಕಿನ ಇಶಾ ಫೌಂಡೇಶನ್ ಗೆ ಭೇಟಿ ನೀಡುವ ಕಾರಣ, ರಸ್ತೆ ನವೀಕರಣಕ್ಕೆ ಮುಂದಾಗಿರುವಾಗ.. ಕೆಲವು ರೈತರು ವಿರೋಧ ವ್ಯಕ್ತಪಡಿಸಿ ಧರಣಿ ಪ್ರತಿಭಟನೆ ಮಾಡ್ತಿರೋದು ವಿಪರ್ಯಾಸವೆ ಸರಿ ಎನ್ನುತ್ತಾರೆ.
ವರದಿ: ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 6:29 pm, Sat, 24 December 22